ಕರಾವಳಿಯಲ್ಲಿ ಹೈ ಅಲರ್ಟ:ಇನ್ನೂ ಎರಡು ದಿನ ಮಳೆ.

503

ಬೆಂಗಳೂರು:- ರಾಜ್ಯಕ್ಕೆ ಮುಂಗಾರು ಪ್ರವೇಶ ಆದರೇ ಇದೀಗ ಸೈಕ್ಲೋನ್ ಎಫೆಕ್ಟ್ ಕೂಡ ಸಾಕಷ್ಟು ತೊಂದರೆ ನೀಡುತಿದ್ದು ,ಕರಾವಳಿಯ ಮಂಗಳೂರಿನಿಂದ ಕಾರವಾರದ ವರೆಗಿನ ಕಡಲ ಭಾಗದಲ್ಲಿ ಆಳೆತ್ತರದ ಅಲೆಗಳು ಏಳುವ ಬಗ್ಗೆ ಹವಾಮಾನ ಇಲಾಖೆ ಅಲರ್ಟ ನೀಡಿದ್ದು 3.5 ನಿಂದ 4.1 ಮೀಟರ್ ಎತ್ತರದಲ್ಲಿ ಅಲೆಗಳು ಏಳಲಿದೆ. ನಿನ್ನೆಯಿಂದ ನಾಳೆಯ ವರೆಗೆ ಅಲರ್ಟ ನೀಡಿದ್ದು ಮೀನುಗಾರರಿಗೂ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇನ್ನು ಜಿಲ್ಲಾಡಳಿತ ಅಲೆಗಳ ಅಬ್ಬರ ಹೆಚ್ಚಾದ್ದರಿಂದ ಸಮುದ್ರ ಭಾಗದಲ್ಲಿ ರಕ್ಷಣಾ ಕ್ರಮವಾಗಿ ಅಗತ್ಯ ಉಪಕರಣಗಳ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.ಇನ್ನು ಜಿಲ್ಲೆಯಲ್ಲಿ ಅಂಕೋಲ,ಯಲ್ಲಾಪುರ ಗಟ್ಟಭಾಗಗಳಲ್ಲಿ ಮಳೆಯಾಗಿದ್ದು ಉಳಿದ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!