BREAKING NEWS
Search

ಕರೋನ ಹೆಚ್ಚಾದ್ರೆ ಗೋವಾ ಗಡಿಯಲ್ಲಿ ಮುನ್ನೆಚ್ವರಿಕೆ ಕ್ರಮ- ಡಾ.ನೀರಜ್.ಆರೋಗ್ಯಾಧಿಕಾರಿ

58

ಕಾರವಾರ :- ಕರೋನಾ (carona)ಸೋಂಕು ತಡೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾತರದ ಕ್ರಮ ಕೈಗೊಳ್ಳಲಾಗಿದೆ, ಕರೋನಾ ಹೆಚ್ಚಾದರೇ ಗೋವಾ (goa) ಬಾರ್ಡರ್ ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಾಬೇಕಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ತಿಳಿಸಿದರು.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು
ಡಿಸೆಂಬರ್ 10 ಕ್ಕೆ ಜಿಲ್ಲೆಯಲ್ಲಿ ಒಂದು ಕೊವಿಡ್ ಪ್ರಕರಣ ವರದಿಯಾಗಿದೆ.ಕೆಲಸಕ್ಕೆಂದು ಗೋವಾಕ್ಕೆ ಹೋಗಿ ಬಂದ ವ್ಯಕ್ತಿಯಲ್ಲಿ ಕೊವಿಡ್ ಕಾಣಿಸಿಕೊಂಡಿದೆ,ಸದ್ಯ ಆ ವ್ಯಕ್ತಿ ಪೂರ್ತಿ ಗುಣ ಮುಖನಾಗಿದ್ದಾನೆ.ಜಿಲ್ಲೆಯಲ್ಲಿ ಯಾರೂ ಕೂಡ ಹೆದರುವ ಅವಶ್ಯಕತೆ ಇಲ್ಲ,ಇಲಾಖೆಯ ಹೊಸ ಗೈಡ್ ಲೈನ್ಸ್ ಪ್ರಕಾರ ನಾವು ರೆಡಿ ಆಗಿದ್ದೆವೆ.

ಕೊವಿಡ್ ಸೆಂಟರ್(covid center )ಹಾಗೂ ಆಕ್ಸಿಜನ್ ಪ್ಲ್ಯಾಂಟ್ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೆವೆ.ಹೊಸ ವರ್ಷಾಚರಣೆಗೆ ಕಾರವಾರಕ್ಕೆ ಬರುವವರಿಗೆ ಸದ್ಯ ಯಾವುದೇ ನಿರ್ಬಂಧ ಹೇರಿಲ್ಲ,ವೈರಸ್ ತಿವ್ರತೆ ಹೆಚ್ಚಾಗಿ ಕಂಡು ಬಂದಲ್ಲಿ ನಿರ್ಬಂಧ ಹೆರಬೇಕಾಗುತ್ತದೆ.

ಇದನ್ನೂ ಓದಿ:-ಬಗರ್ ಹುಕುಂ ಆ್ಯಪ್‌ ಬಿಡುಗಡೆ|ಏನಿದು ಆ್ಯಪ್‌? ಹೇಗೆ ಕೆಲಸ ಮಾಡುತ್ತದೆ? ವಿವರ ನೋಡಿ

ಸದ್ಯ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲ
ಪ್ರವಾಸಿಗರು ಕೊವಿಡ್ ಬಗ್ಗೆ ಯಾವುದೇ ಆತಂಕ ಬೇಡ ಎಚ್ಚರಿಕೆ ಇರಲಿ ,ಹಾರ್ಟ್, ಅಸ್ತಮಾ ಸಮಸ್ಯೆ ಕಾಯಿಲೆ ಇರುವವರು ಪ್ರವಾಸಕ್ಕೆ ಬರದೆ ಇರುವುದು ಒಳ್ಳೆಯದು.ಕೊರೊನಾ ಸಂಖ್ಯೆ ಹೆಚ್ಚಾದ್ರೆ ಗೋವಾ ಬಾರ್ಡರ್ ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಾಬೇಕಾಗುತ್ತದೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!