ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಹಿಮಂತ ಋತು, ಪುಷ್ಯಮಾಸ,
ಕೃಷ್ಣಪಕ್ಷ, ತೃತೀಯ/ಚತುರ್ಥಿ,
ಶುಕ್ರವಾರ,
ಮಖ ನಕ್ಷತ್ರ/ಪೂರ್ವ ಫಲ್ಗುಣಿ ನಕ್ಷತ್ರ
ರಾಹುಕಾಲ: 11:08 ರಿಂದ 12:34
ಗುಳಿಕಕಾಲ: 08:16 ರಿಂದ 09:42
ಯಮಗಂಡಕಾಲ: 03:27 ರಿಂದ 04:53
ಮೇಷ: ಅಧಿಕ ಧನ ಸಂಪಾದನೆ, ಸಂಗಾತಿಯೊಡನೆ ಉತ್ತಮ ಬಾಂಧವ್ಯ, ಆರ್ಥಿಕ ಸಹಾಯ ಮತ್ತು ಅನುಕೂಲ.
ವೃಷಭ: ಪತ್ರ ವ್ಯವಹಾರ ನೋಂದಣಿ, ಉದ್ಯೋಗ ಲಭಿಸಿ ನೆಮ್ಮದಿ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನ: ದುಶ್ಚಟಗಳಿಗೆ ಬಲಿ, ಸ್ನೇಹಿತರು ದರ್ಪ, ಅಧಿಕಾರ ಚಲಾಯಿಸುವರು, ಆರ್ಥಿಕ ಸಹಾಯ.
ಕಟಕ: ಆಸ್ತಿ ಒಲಿಯುವುದು, ಮಾನಸಿಕ ನೆಮ್ಮದಿ, ಬಹುದಿನಗಳ ಕನಸು ಈಡೇರುವುದು.
ಸಿಂಹ: ಉದ್ಯೋಗ ಲಾಭ, ಸ್ತ್ರೀಯರು ಶತ್ರುಗಳಾಗುವರು, ಸ್ವಪ್ರಯತ್ನದಿಂದ ಯಶಸ್ಸು.
ಕನ್ಯಾ: ಲಾಭದ ಪ್ರಮಾಣ ಕುಂಠಿತ, ಹೆಣ್ಣುಮಕ್ಕಳ ಆಗಮನ, ಮಾತಿನಿಂದ ಸಮಸ್ಯೆ ದೂರ, ಮಾನಸಿಕ ಕಿರಿಕಿರಿ.
ತುಲಾ: ಅಧಿಕ ಲಾಭ, ಧನಾಗಮನ ಮತ್ತು ಅನುಕೂಲ, ಸಹೋದರರಿಂದ ನೋವು.
ವೃಶ್ಚಿಕ: ಯತ್ನ ಕಾರ್ಯ ಸಫಲ,ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಸಾಲಗಾರರ ಕಾಟ, ಬಂಧು ಬಾಂಧವರಿಂದ ನಷ್ಟ,ಆರೋಗ್ಯ ಸುಧಾರಣೆ.
ಧನಸು: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಕೋರ್ಟ್ ಮೆಟ್ಟಿಲೇರುವ ಸಂಭವ.
ಮಕರ: ಆಕಸ್ಮಿಕ ಧನಾಗಮನ, ಗುಪ್ತ ಇಚ್ಚೆಗಳಿಂದ ತೊಂದರೆ, ಸ್ತ್ರೀಯರಿಂದ ಮೋಸ,ಶೀತ ಕೆಮ್ಮು ಭಾದೆ, ಮಧ್ಯಮ ಪ್ರಗತಿ.
ಕುಂಭ: ಸಂಗಾತಿ ಶತ್ರು ಆಗುವರು, ಮೋಜು ಮಸ್ತಿಯಿಂದ ತೊಂದರೆ, ಬುದ್ಧಿಹೀನರಾಗಿ ವರ್ತಿಸುವಿರಿ.
ಮೀನ: ಕಾರ್ಯ ವಿಘ್ನ, ಮಾನಸಿಕ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಂದರೆ, ದೂರ ಪ್ರಯಾಣದ ಸನ್ನಿವೇಶ,ಹಣದ ಮುಗ್ಗಟ್ಟು.