National Highway NH 66 blocked

ಕಾರವಾರ ಹೆದ್ದಾರಿ ಸಂಕಟ| ಅಧಿಕಾರಿಗಳ ಪೀಕಲಾಟ!

54

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಅಬ್ಬರಿಸಿದ್ದ ಮಳೆ ಮಧ್ಯಾಹ್ನದ ಬಳಿಕ ಕಡಿಮೆಯಾಗಿದೆ. ಆದರೆ ಭಾರಿ ಮಳೆಯಿಂದಾಗಿ ಕಾರವಾರ ತಾಲ್ಲೂಕಿನ ಅರಗಾದ ನೌಕಾನೆಲೆ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲ ಕಾಲ ನೀರು ನಿಂತ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೂ ವ್ಯಾಪಕವಾಗಿ ಮಳೆಯಾದ (Havey Rain) ಕಾರಣ ಕೆಲವೆಡೆ ನೀರು ತುಂಬಿಕೊಂಡು ಜನರು ಪರದಾಡುವಂತಾಯಿತು.

ಕಾರವಾರ ತಾಲ್ಲೂಕಿನ ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರತಿ ಭಾರಿ ಮಳೆ ಬಂದಾಗ ನೀರು ತುಂಬುವಂತೆ ಬುಧವಾರವೂ ನೀರು ತುಂಬಿಕೊಂಡ ಕಾರಣ ವಾಹನ ಸಂಚರಿಸಲಾಗದೆ ಪರದಾಡುವಂತಾಗಿತ್ತು.

ಪ್ರತಿ ವರ್ಷ ಮಳೆಯಿಂದ ನೀರು ನಿಂತಾಗ ಸ್ಥಳಕ್ಕೆ ಬರುವ ಅಧಿಕಾರಿಗಳಿಗೆ ವಾಹನ ದಟ್ಟನೆ ಸಂಬಾಳಿಸುವುದೇ ದೊಡ್ಡ ಸಾಹಸವಾದರೇ ,ಮಳೆಯಲ್ಲಿ ಪೊಲೀಸರು ಬೆವರು ಇಳಿಸುವ ಸ್ಥಿತಿ ನಿರ್ಮಾಣವಾಗಿತ್ತು.

ಹಲವು ಸಮಯ ಪೊಲೀಸರು ಸ್ಥಳಕ್ಕೆ ತೆರಳಿ ಏಕ ಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟರು. ತಹಶಿಲ್ದಾರ್ ನಿಶ್ಚಲ್ ನರೋನಾ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ನೌಕನೆಲೆ ಎದುರಿನ ಗಟಾರದಲ್ಲಿ ಮಣ್ಣು ಪ್ಲಾಸ್ಟಿಕ್ ತುಂಬಿಕೊಂಡಿದ್ದರಿಂದ ನೀರು ಹೋಗಲು ಅವಕಾಶ ವಿಲ್ಲದೆ ನೀರು ತುಂಬಿಕೊಂಡಿತ್ತು. ಬಳಿಕ ಜೆಸಿಬಿ ಮೂಲಕ ಮಣ್ಣು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವು ಮಾಡಲಾಯಿತು.

ಪ್ರತಿ ಭಾರಿ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಗಲೂ ಅರಗಾ ಸುತ್ತಮುತ್ತಲಿನ ಕೆಲ ಮನೆಗಳಿಗೆ ನೀರು ನುಗ್ಗುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಕೂಡ ಇನ್ನು ಪರಿಹಾರ ಮಾಡಿಲ್ಲ. ನೌಕಾನೆಲೆಯವರು ಮಳೆ ನೀರು ಹೋಗುವ ಪ್ರದೇಶದಲ್ಲಿ ಕಾಂಪೌಂಡ್ ಕಟ್ಟಿ ಬ್ಲಾಕ್ ಮಾಡಿದ್ದರಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ.

ಅಧಿಕಾರಿಗಳು ನೆಪಮಾತ್ರಕ್ಕೆ ಬಂದು ಹೋಗುತ್ತಾರೆ. ಆದರೆ ನಮಗೆ ಯಾವುದೇ ಶಾಶ್ವತ ಪರಿಹಾರವಾಗಿಲ್ಲ. ಪ್ರತಿ ಮಳೆಗಾಲದಲ್ಲಿಯೂ ಭಯದಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರಾದ ರಮಾಕಾಂತ ಆಗ್ರಹಿಸಿದರು.

ಇನ್ನು ಈ ಪ್ರತಿಕ್ರಿಯಿಸಿದ ತಹಶಿಲ್ದಾರ್ ಎನ್.ಎಸ್ ನರೋನಾ, ಇಲ್ಲಿನ ಸಮಸ್ಯೆ ಬಗ್ಗೆ ಈಗಾಗಲೇ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ನೌಕಾನೆಲೆ ಅಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ.

ಸದ್ಯ ಚರಂಡಿಯನ್ನು ಜೆಸಿ ಮೂಲಕ ಸ್ವಚ್ಛಮಾಡಿ ನೀರು ಹರಿದುಹೋಗುವಂತೆ ಮಾಡಲಾಗಿದೆ. ಗುಡ್ಡದ ಮೇಲಿನಿಂದ ನೀರುಬಂದು ಸರಿಯಾಗಿ ಹರಿದು ಹೋಗಲು ಸ್ಥಳಾವಕಾಶ ಇಲ್ಲದೆ ಈ ರೀತಿ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸದ್ಯ ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ತೆರವು ಮಾಡಿ ನೀರಿನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!