Karwar| SRS ಬಸ್ ನಲ್ಲಿ ಲಕ್ಷಾಂತರ ಮೌಲ್ಯದ ಗೋವಾ ಮದ್ಯ ಸಾಗಾಟ ಚಾಲಕ ವಶಕ್ಕೆ

345

ಕಾರವಾರ :- ಗೋವಾ ದಿಂದ ಬೆಂಗಳೂರಿಗೆ ತೆರಳುತಿದ್ದ ಎಸ್.ಆರ್.ಎಸ್ ಬಸ್ ನಲ್ಲಿ ಅಡಗಿಸಿಡಲಾಗಿದ್ದ ಗೋವಾ ಮದ್ಯಮನ್ನು ಕಾರವಾರದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಪೊಲೀಸರು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:- ಶಿರಸಿಯಲ್ಲಿ ಗಂಧ ವಶ

ಗೋವಾದ ವಿವಿಧ ಬ್ರಾಂಡ್ ನ 72 ಲೀಟರ ಗೋವಾ ಮದ್ಯ ಹಾಗೂ ಬಸ್ ನನ್ನು ವಶಕ್ಕೆ ಪಡೆದು ಒಟ್ಟು 25,95000 ಲಕ್ಷ ಮೌಲದ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಾಗಲಕೋಟೆ ಮೂಲದ ಲಿಂಗನಗೌಡ ಪಾಟೀಲ್ (63) ಬಂಧಿತ ವ್ಯಕ್ತಿಯಾಗಿದ್ದು ಗೋವಾ ದಿಂದ ಬೆಂಗಳೂರಿಗೆ ಬಸ್ ಸಂಚರಿಸುವ ವೇಳೆ ಸೀಟ್ ನ ತಳಭಾಗದ ಕ್ಯಾಬಿನ್ ನಲ್ಲಿ 72 ಲೀಟರ್ ಗೋವಾ ಮದ್ಯ ವನ್ನು ಹುದುಗಿಸಿಟ್ಟಿದ್ದರು .

ಖಚಿತ ಮಾಹಿತಿ ಪಡೆದ ಅಬಕಾರಿ ಇಸ್ಸಪೆಕ್ಟರ್ ಸದಾಶಿವ್ ಮಾಜಾಳಿ ಚಕ್ ಪೋಸ್ಟ್ ನಲ್ಲಿ ಬಸ್ ತಡೆದು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!