ರೈತರಿಗೊಂದು ಮಾಹಿತಿ| ಬೆಳೆ ಸರ್ವೆ ಮಾಡಿಸದಿದ್ದರೇ ಕೈತಪ್ಪಲಿದೆ ಸವಲತ್ತುಗಳು!

215

ಕನ್ನಡ ವಾಣಿ ನ್ಯೂಸ್ ಡೆಸ್ಕ : ಕೃಷಿ ಇಲಾಖೆಯಿಂದ (krushi) 2023-24ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದ ಭಾಗವಾಗಿ, ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಅಪ್ಲಿಕೇಷನ್ ಗಳನ್ನು ( Crop Survey Application ) ಬಿಡುಗಡೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ಕೃಷಿ ಇಲಾಖೆಯು, 2023-24ನೇ ಸಾಲಿನ ಬೆಳೆ ಸಮೀಕ್ಷೆಗಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಪ್ ಬಿಡುಗಡೆ ಮಾಡಲಾಗಿದೆ.

ಗೂಗಲ್ ಪ್ಲೇ ಸ್ಟೋರ್, ( Google Play Store) ಐಓಎಸ್ ಆಪ್ ಸ್ಟೋರ್ ನಲ್ಲಿ ಬೆಳೆಸಮೀಕ್ಷೆ ಆಪ್ ( Crop Survey App ) ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದೆ.

ಇದನ್ನೂ ಓದಿ:- ಕಾರವಾರದ ಹೆದ್ದಾರಿ ಟನಲ್ ಬಂದ್(ಅಕ್ಷರದ ಮೇಲೆ ಕ್ಲಿಕ್ ಮಾಡಿ ಓದಿ)

ರೈತರು( farmer) ಸದರಿ ಆಪ್ ನಿಂದ ತಾವು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ವಿವರಗಳನ್ನು ಅಪ್ ಲೋಡ್ ಮಾಡಬಹುದಾಗಿದೆ. ಬೆಳೆ ಸಮೀಕ್ಷೆ ಅಪ್ಲಿಕೇಷನ್ ನಲ್ಲಿ ಅಪ್ ಲೋಡ್ ಮಾಡದಿದ್ದರೇ ಸರ್ಕಾರದ ವಿವಿಧ ಯೋಜನೆಗಳಿಂದ ದೊರೆಯುವ ಸವಲುತ್ತಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ತಿಳಿಸಿದೆ.

ರೈತರು ಪೂರ್ವ ಮುಂಗಾರು ಬೆಳೆ ಸಮೀಕ್ಷೆ 2023-24ರ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಲು https://play.google.com/store/apps/details?id=com.csk.farmer23_24.cropsurvey ಕ್ಲಿಕ್ ಮಾಡಿ. ಈ ಬಳಿಕ ಅಲ್ಲಿ ಕೇಳುವಂತ ಮಾಹಿತಿ ಭರ್ತಿ ಮಾಡಿ, EKYC ಅಪ್ ಡೇಟ್ ಮಾಡಿದ್ರೇ ಬೆಳೆ ಸಮೀಕ್ಷೆ ಮಾಹಿತಿ ಅಪ್ ಲೋಡ್ ಮಾಡಿದಂತೆ ಆಗಲಿದೆ. ಆ ಬಳಿಕ ನೀವು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ಪಡೆಯಬಹುದಾಗಿದೆ.

ವಿಡಿಯೋ ನೋಡಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!