ನಾಳೆಯಿಂದ ಮೇ.4ರವರೆಗೆ 14 ದಿನ ರಾಜ್ಯಾಧ್ಯಂತ ನೈಟ್ ಹಾಗೂ ವೀಕ್ ಎಂಡ್ ಕರ್ಪ್ಯೂ ಜಾರಿ – ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ!

5167

ಬೆಂಗಳೂರು :- ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದೆ. ಈ ಮೂಲಕ ಹೊಸ ಮಾರ್ಗಸೂಚಿಯಲ್ಲಿ 14 ದಿನಗಳ ವರೆದೆ ರಾಜ್ಯಾಧ್ಯಾಂತ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದಂತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು, ನಾಳೆಯಿಂದ ಮೇ.4ರವರೆಗೆ ಜಾರಿಗೆ ಬರುವಂತೆ 14 ದಿನಗಳ ಕಾಲ ರಾಜ್ಯಾಧ್ಯಂತ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಪ್ರಮುಖ ಮಾಹಿತಿ ವಿವರ :-

  • ಅನಗತ್ಯವಾಗಿ, ಸಕಾರಣ ಇಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಓಡಾಡುವಂತಿಲ್ಲ.
  • ಸಕಾರಣ ಇದ್ದರೆ ಮಾತ್ರ ಸಮೂಹ ಸಾರಿಗೆಗಳು, ಆಟೋ, ಮ್ಯಾಕ್ಸಿ ಕ್ಯಾಬ್ ಗಳು, ಸ್ವಂತ ವಾಹನಗಳ‌ ಮೂಲಕ ಓಡಾಡಲು ಅವಕಾಶ.
  • ಸಾರ್ವಜನಿಕರು ಮತ್ತು ಸರಕು ಸಾಗಣೆ ವಾಹನಗಳಿಗೆ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳ ಓಡಾಟಕ್ಕೆ ನಿರ್ಬಂಧ ಇಲ್ಲ. ಓಡಾಟಕ್ಕೆ ವಿಶೇಷ ಅನುಮತಿ ಅನಗತ್ಯ.
  • ಬಸ್ ಗಳಲ್ಲಿ ಸೀಟುಗಳ ಸಾಮರ್ಥ್ಯದಷ್ಟೇ ಪ್ರಯಾಣಿಕರಿಗೆ ಅವಕಾಶ.
  • ಆಟೋ, ಕ್ಯಾಬ್, ಸ್ವಂತ ಕಾರುಗಳಲ್ಲಿ ಓಡಾಡುವರಿಗೆ ಸಾಮಾಜಿಕ ಅಂತರ ಕಡ್ಡಾಯ.
  • ಸ್ವಂತ ವಾಹನಗಳಿದ್ದವರು ಅನಗತ್ಯ ಓಡಾಟಗಳಲ್ಲಿ ನಿಯಂತ್ರಣ‌ ಹಾಕಿಕೊಳ್ಳಬೇಕು.
  • ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಸಲ್ಟ್ ಕಡ್ಡಾಯ.
  • ಸರಕು, ಸೇವೆ, ತುರ್ತು ಸೇವೆಯ ವಾಹನಗಳಿಗೆ ನಿರ್ಬಂಧ ಇಲ್ಲ.
  • ಮೆಟ್ರೋದಲ್ಲಿ 50% ಪ್ರಯಾಣಿಕರಿಗೆ ಮಾತ್ರ ಅವಕಾಶ.
  • ಬಸ್, ಮ್ಯಾಕ್ಸಿ ಕ್ಯಾಬ್ , ಟೆಂಪೋ ಟ್ರಾವೆಲರ್ ಗಳಲ್ಲಿ 50% ಅವಕಾಶ
    ಇವುಗಳಿಗೆ ಅನುಮತಿ.
  • ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಹಣ್ಣು, ತರಕಾರಿ ಮಾರಾಟ ಕೇಂದ್ರಗಳು, ಹಾಲಿನ ಬೂತ್ ಗಳಿಗೆ ಅವಕಾಶ.
  • ಹೋಮ್ ಡೆಲಿವರಿ ಸೇವೆಗಳಿಗೆ ಅವಕಾಶ.
  • ಬ್ಯಾಂಕ್, ಎಟಿಎಂ ಕೇಂದ್ರಗಳು, ವಿಮೆ ಸಂಸ್ಥೆಗಳು, ಮಾಧ್ಯಮಗಳು, ಇ-ಕಾಮರ್ಸ್ ನ‌ ಹೋಂ ಡೆಲಿವರಿಗೆ ಅವಕಾಶ
  • ಸೆಲೂನ್ ಶಾಪ್ ಗಳು, ಸ್ಪಾ, ಬ್ಯೂಟಿ ಪಾರ್ಲರ್ ಗಳಿಗೆ ಅವಕಾಶ.
  • ತರಕಾರಿ, ಹಣ್ಣುಗಳ ಮಾರುಕಟ್ಟೆಗಳು, ಕೃಷಿ ಮಂಡಿಗಳು, ಇ-ಮಾರ್ಕೆಟ್ ಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮಳಿಗೆಗಳು‌ ಅಬಾಧಿತ.
  • ಮೀನುಗಾರಿಕೆ ಅವಲಂಬಿತ ಎಲ್ಲ ಚಟುವಟಿಕೆಗಳೂ‌ ಅಭಾದಿತ.
  • ಪಶುಸಂಗೋಪನೆ ವಲಯದಲ್ಲೂ ಎಲ್ಲಾ ಬಗೆಯ ಕಾರ್ಯಚಟುವಟಿಕೆ, ವಹಿವಾಟುಗಳಿಗೂ ಅವಕಾಶ.
  • ಬೆಳಗ್ಗೆ 6 ರಿಂದ ಬೆಳಗ್ಗೆ 10 ರವರೆಗೆ ನಾಲ್ಕು ಗಂಟೆ ಮಾತ್ರ ಅವಶ್ಯಕ ವಸ್ತುಗಳ ಖರೀದಿ, ಮಾರಾಟಕ್ಕೆ ಅವಕಾಶ.
  • ವೀಕೆಂಡ್ ಕರ್ಫ್ಯೂ ದಿನ ಬೆಳಗ್ಗೆ ನಾಲ್ಕು ಗಂಟೆ ಮಾತ್ರ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ,ಬೆಳಗ್ಗೆ 6-10 ರವರೆಗೆ ಮಾತ್ರ ಖರೀದಿ.ಉಳಿದ ಸಮಯ ಮೆಡಿಕಲ್ ಸೇವೆ ಹೊರತುಪಡಿಸಿ ಉಳಿದೆಲ್ಲ ಬಂದ್.
  • ರಾಜ್ಯದಲ್ಲಿ 15 ದಿನಗಳ ಕಾಲ ಬಿಗಿ ಕ್ರಮ,
    ಐದು ದಿನ ಜನತಾ ಕರ್ಫ್ಯೂ,ಎರಡು ದಿನ ವೀಕೆಂಡ್ ಕರ್ಫ್ಯೂ,ಎಲ್ಲ ರಾತ್ರಿಗಳೂ ನೈಟ್ ಕರ್ಫ್ಯೂ

ಇವುಗಳು ನಿರ್ಬಂಧ..

  • ಭೌತಿಕ ಶಾಲಾ ಕಾಲೇಜುಗಳು, ಟ್ಯೂಷನ್, ತರಬೇತಿ, ಕೋಚಿಂಗ್ ಸೆಂಟರ್ ಗಳು ಬಂದ್.
  • ಸಿನಿಮಾ ಮಂದಿರಗಳು, ಥಿಯೇಟರ್ ಗಳು, ಶಾಪಿಂಗ್ ಮಾಲ್ ಗಳು, ಜಿಮ್ ಸೆಂಟರ್ ಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಸ್ವಿಮ್ಮಿಂಗ್ ಪೂಲ್ ಗಳು, ಮನರಂಜನಾ ಪಾರ್ಕ್ ಗಳು, ಆಡಿಟೋರಿಯಂಗಳು, ಸಭಾಂಗಣ, ಸೆಮಿನಾರ್ ಹಾಲ್ ಗಳು ಸಂಪೂರ್ಣ ಬಂದ್.
  • ಕ್ರೀಡಾಪಟುಗಳಿಗೆ ಮಾತ್ರ ಸ್ವಿಮ್ಮಿಂಗ್ ಪೂಲ್ ಗಳ ಬಳಕೆಗೆ ಅವಕಾಶ.
  • ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ , ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೂ, ಸಭೆಗಳೂ ಬಂದ್.
  • ಸ್ಡೇಡಿಯಂ, ಆಟದ ಮೈದಾನಗಳಲ್ಲಿ ಕ್ರೀಡಾ ಚಟುವಟಿಕೆಗಳ ಅಭ್ಯಾಸಕ್ಕೆ ಮಾತ್ರ ಅವಕಾಶ.
  • ಎಲ್ಲ ಧಾರ್ಮಿಕ ಪ್ರಾರ್ಥನಾ ಕೇಂದ್ರಗಳೂ ಬಂದ್. ಮಂದಿರ, ಮಸೀದಿ, ಚರ್ಚ್ ಗಳು ಬಂದ್. ಪೂಜಾಮಂದಿರಗಳಲ್ಲಿ ಅಲ್ಲಿನ ಸಿಬ್ಬಂದಿಗೆ ಮಾತ್ರ ಪೂಜಾ ಕೈಂಕರ್ಯ, ಪ್ರಾರ್ಥನೆ, ಇತರೇ ಸೇವೆಗಳಿಗೆ ಅವಕಾಶ.
  • ಮದುವೆಗಳಿಗೆ ಇನ್ನಷ್ಟು ನಿರ್ಬಂಧ. ಹಾಲ್ ಗಳಲ್ಲಿ 50 ಜನ, ತೆರೆದ ಪ್ರದೇಶಗಳಲ್ಲಿ 100 ಜನರಿಗೆ ಮಾತ್ರ ಅವಕಾಶ.
  • ಅಂತಿಮ‌ ಸಂಸ್ಕಾರಕ್ಕೂ ಜನ‌ಮಿತಿ. ನಾಲ್ಕು ಗೋಡೆಯೊಳಗೆ 20, ತೆರೆದ ಜಾಗದಲ್ಲಿ 50 ಜನ ಮಾತ್ರ ಭಾಗವಹಿಸಬೇಕು
  • ಹೊಟೇಲ್ ಗಳು, ರೆಸ್ಟೋರೆಂಟ್ ಗಳು, ಫುಡ್ ಸ್ಟ್ರೀಟ್ ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅನುಮತಿ. ಪಾರ್ಸಲ್ ಗಳಿಗೆ ಅವಕಾಶ.
  • ಮದ್ಯದಂಗಡಿಗಳು, ಔಟ್ ಲೆಟ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ.
  • ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಶೇ.50 ರಷ್ಟು ಸರ್ಕಾರಿ‌ ನೌಕರರಿಗೆ ಅವಕಾಶ.
  • ಸರ್ಕಾರಿ, ಅರೆ ಸರ್ಕಾರಿ, ನಿಗಮ, ಮಂಡಳಿ ಸಂಸ್ಥೆಗಳ ಶೇ.50 ರಷ್ಟು ನೌಕರರು ಕೋವಿಡ್ ಕರ್ತವ್ಯಕ್ಕೆ ನಿಯೋಜನೆ.
  • ಎಲ್ಲಾ ಬಗೆಯ ಖಾಸಗಿ ಸಂಸ್ಥೆಗಳಲ್ಲೂ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಜಾರಿ. ಸೀಮಿತ ಸಂಖ್ಯೆಯ‌ ನೌಕರರಿಗೆ ಭೌತಿಕ ಕೆಲಸ ಮಾಡಲು ಅವಕಾಶ.
  • ಮದುವೆ ಮನೆಯಲ್ಲಿ 50ಜನರಿಗೆ ಮಾತ್ರ ಅವಕಾಶ.



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!