ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ವನ್ನು ವಾಪಾಸ್ ಪಡೆದುಕೊಂಡಿದೆ. ಇಂದು ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ತಜ್ಞರ ಅಭಿಪ್ರಾಯದಂತೆ ಹಿಂದೆ ಪಡೆದಿದೆ.
ರಾಜ್ಯದಲ್ಲಿ ಆಸ್ಪತ್ರೆಗೆ ಸೇರುವ ಸಂಖ್ಯೆ 5% ಇದೆ ಇದು ಹೆಚ್ಚಾದಲ್ಲಿ ಮತ್ತೆ ವೀಕೆಂಡ್ ಲಾಕ್ ಡೌನ್ ಮಾಡಲಾಗುತ್ತದೆ. ನೈಟ್ ಕರ್ಫ್ಯೂ ಮುಂದುವರೆಯಲಿದೆ. ಈ ಹಿಂದೆ ಇದ್ದ ನಿಯಮಗಳೇ ಮುಂದುವರೆಯುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇವುಗಳಿಗೆ ನಿರ್ಬಂಧ
ಜಾತ್ರೆ ,ಸಮಾರಂಭ ,ರ್ಯಾಲಿಗಳಿಗೆ ನಿರ್ಬಂಧ ವಿಧಿಸಲಾಗಿದೆ.(ಈ ಹಿಂದೆ ಇದ್ದ ನಿಯಮದಂತೆ ನಿಯಮ ಇರಲಿದೆ)
ಕರೋನಾ ಸೋಂಕು ಹೆಚ್ಚಾಗುವ ಶಾಲೆಗಳಿಗೆ ಮಾತ್ರ ರಜೆ ಇರಲಿದೆ.
ಶಾಲಾ ಕಾಲೇಜುಗಳನ್ನು ಏಳು ದಿನ ಹಾಗೂ ಮೂರು ದಿನ ಮಾತ್ರ ಲಾಕ್ ಮಾಡಲಾಗುತ್ತದೆ. ಬೆಂಗಳೂರು ಹೊರತುಪಡಿಸಿ ಎಲ್ಲಾ ಶಾಲೆಗಳು ನಡೆಯಲಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.