Karwar job fraud news

KARWAR|ಸೀಬರ್ಡ USA ನಲ್ಲಿ ಕೆಲಸ ಆಮಿಷ ಲಕ್ಷ ಪೀಕಿದವನ ವಿರುದ್ಧ ದೂರು

120

KARWAR NEWS :- ಸೀಬರ್ಡ್ ಯುಎಸ್‌ಎಲ್‌ನಲ್ಲಿ ಕೆಲಸ ದೊರಕಿಸಿಕೊಡುವ ಆಮಿಷ ತೋರಿಸಿ ಕಾರವಾರದ ಯುವಕನಿಗೆ ಹಣ ಪಡೆದು ಪಂಗನಾಮ ಹಾಕಿದ ಘಟನೆ ನಡೆದಿದ್ದು ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರವಾರದ ನಂದನಗದ್ದಾ ನಿವಾಸಿ ರಾಘವೇಂದ್ರ
ಸೀಬರ್ಡ್ ಯುಎಸ್‌ಎಲ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದನು . ಆರೋಪಿ ಪ್ರಸಾದ್ ಮಹಾದೇವ ಪೆಡ್ನೇಕರ್ ಎಂಬಾತ ತನಗೆ ಕಮಾಂಡರ್ ಒಬ್ಬರು ಪರಿಚಯವಿದೆ, ಅವರು ನಿನಗೆ ಸೀಬರ್ಡ್ ಯುಎಸ್‌ಎಲ್‌ನಲ್ಲಿ ಕೆಲಸ ಮಾಡಿಸಿ ಕೊಡುತ್ತಾರೆ , 5 ಲಕ್ಷ ರೂ. ಕೇಳ್ತಿದ್ದಾರೆ ಎಂದಿದ್ದನು.

ತನ್ನಲ್ಲಿ ಅಷ್ಟೊಂದು ಹಣವಿಲ್ಲ ಎಂದು ರಾಘವೇಂದ್ರ ಹೇಳಿದಾಗ ಮೊದಲು 2 ಲಕ್ಷ ರೂ‌. ಪಡೆದಿದ್ದ ಆರೋಪಿ,ಆರ್ಡರ್ ಕಾಪಿ ಬಂದ ಬಳಿಕ 3 ಲಕ್ಷ ರೂ. ನೀಡಬೇಕೆಂದು ತಿಳಿಸಿದ್ದನು.

ಆರೋಪಿ ಪ್ರಸಾದ್ ಸೂಚನೆಯಂತೆ ಇನ್ನೋರ್ವ ಆರೋಪಿ ಸಿದ್ದೇಶ್ ಪ್ರಕಾಶ್ ಪೆಡ್ನೇಕರ್ ಎಂಬಾತನ ಖಾತೆಗೆ 2020ರ ಡಿ.11ರಂದು ಆರೋಪಿ ಸಿದ್ದೇಶ್ ಖಾತೆಗೆ 2 ಲಕ್ಷ ರೂ. ವರ್ಗಾವಣೆ ಮಾಡಿದ್ದನು.

ಆದರೆ, ಅವತ್ತಿನಿಂದ ಇಂದಿನವರೆಗೆ ಕರೆ ಮಾಡಿದಾಗ ಕೇವಲ ಇವತ್ತು, ನಾಳೆ ಎಂದು ಸಬೂಬು ನೀಡ್ತಿದ್ದ ಆರೋಪಿಗಳು,ಹಣ ಕೂಡಾ ಹಿಂತಿರುಗಿಸದೇ ರಾಘವೇಂದ್ರನಿಗೆ ವಂಚನೆ ಮಾಡಿದ್ದು,ಈ ಹಿನ್ನೆಲೆ‌ ಕೆಲಸ ಹಾಗೂ ಹಣಕ್ಕೆ ಕಾದು ಸುಸ್ತಾಗಿ ಕೊನೆಗೂ ಕಾರವಾರ ನಗರದ ಪೊಲೀಸರಿಗೆ ರಾಘವೇಂದ್ರ ದೂರು ನೀಡಿದ್ದಾರೆ.

ಆರೋಪಿಗಳ ವಿರುದ್ಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!