File incident MLA Dinakar Shetty brother house

ಕುಮಟ ಶಾಸಕನ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

126

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ಶಾಸಕ ದಿನಕರ ಶೆಟ್ಟಿ (Mla Denkara shatty )ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ ಗೊಂಡು ಶಾಸಕರ ಸಹೋದರನಿಗೆ ಗಾಯವಾಗಿದ್ದು ಲಕ್ಷಾಂತರ ರುಪಾಯಿ ಮೌಲ್ಯದ ಮನೆಯ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಇದನ್ನೂ ಓದಿ:-ಕುಮಟಾ| ಅನುಮತಿ ಇಲ್ಲದೇ ಪ್ರವಾಸಿ ಬೋಟ್ ಚಾಲನೆ 40 ಜನರ ಜೀವಕ್ಕೆ ಕುತ್ತು ತಂದ ಬೋಟ್ ಮಾಲೀಕ!

ಕುಮಟಾ ನಗರದ ಕೊಪ್ಪಳಕರವಾಡಿ ವಾರ್ಡ್ ನಲ್ಲಿದ್ದ
ಶಾಸಕ ದಿನಕರ ಶೆಟ್ಟಿ ಸಹೋದರ ಮಧುಕರ ಶೆಟ್ಟಿ ಅವರ ಮನೆಯಾಗಿದ್ದು ಇಂದು ಕುಟುಂಬ ಸಮೇತರಾಗಿ ಹೊರಹೋಗಿದ್ದ ಅವರು ಮನೆಗೆ ಬಂದು ಬಾಗಿಲು ತೆರೆದಾಗ ಸಿಲಿಂಡರ್ ಸ್ಪೋಟಗೊಂಡಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಬಚಾವ್ ಆಗಿದ್ದು ಮನೆಯಲ್ಲಿದ್ದ ಪೀಠೋಪಕರಣ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇನ್ನು ಘಟನೆಗೆ ಇವರ ಕುಟುಂಬದವರು ಮನೆಯಿಂದ ಹೋಗುವಾಗ ಸಿಲೆಂಡ್ ಆಫ್ ಮಾಡದೇ ಹೋಗಿದ್ದಕ್ಕೆ ಕಾರಣ ಎನ್ನಲಾಗುತಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!