BREAKING NEWS
Search

ಮಹಾರಾಷ್ಟ್ರ ,ಕೇರಳದಲ್ಲಿ ಕರೋನಾ ಹೆಚ್ಚಳ-ಗಡಿ ಜಿಲ್ಲೆಯಲ್ಲಿ ಬಿಗಿ ಗೊಂಡ ಕೋವಿಡ್ ನಿಯಮ-ರಾಜ್ಯಾಧ್ಯಾಂತ ನೈಟ್ ಕರ್ಫೂ ಜಾರಿ

1313

ಕಾರವಾರ :- ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯು ಗೋವಾ ಗಡಿಯನ್ನು ಹಂಚಿಕೊಂಡಿದೆ. ಉದ್ಯೋಗ ನಿಮಿತ್ತ ಕರಾವಳಿ ಭಾಗದ ಜನರು ನೆರೆಯ ಗೋವಾ ಹಾಗೂ ಮಹಾರಾಷ್ಟ್ರವನ್ನು ಅವಲಂಭಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕರೋನಾ ನಿಯಮವನ್ನು ಕಠಿಣವಾಗಿ ಜಾರಿಗೆ ತರಲಾಗಿದೆ.

ಗೋವಾ ಗಡಿ ಹಂಚಿಕೊಂಡಿರುವ ಕಾರವಾರದ ಮಾಜಾಳಿಯಲ್ಲಿ ಗೋವಾ ,ಮಹಾರಾಷ್ಟ್ರದಿಂದ ಬರುವ ಜನರು ಕಡ್ಡಾಯವಾಗಿ ಆರ್.ಟಿ.ಪಿ.ಸಿಆರ್ ನೆಗಟೀವ್ ಇರಬೇಕಿದ್ದು 24 ತಾಸಿನ ತಪಾಸಣೆಯ ವರದಿ ಇರಬೇಕಾಗಿದೆ. ಈ ಹಿಂದೆ ವ್ಯಾಕ್ಸಿನ್ ತೆಗೆದುಕೊಂಡವರಿಗೆ ಕರ್ನಾಟಕದ ಗಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಆದರೇ ಇದೀಗ ವ್ಯಾಕ್ಸಿನ್ ಪಡೆದವರು ಸಹ ಕೋವಿಡ್ ನೆಗಟೀವ್ ರಿಪೋರ್ಟ ಇರಲೇಬೇಕಾಗಿದೆ. ಇನ್ನು ಬಸ್ ಪ್ರಯಾಣಿಕರು, ಲಾರಿ ಚಾಲಕರಿಗೂ ಸಹ ಈ ನಿಯಮ ಅನ್ವಯಿಸಲಿದ್ದು ಬೇರೆ ರಾಜ್ಯದಿಂದ ಬಂದ ಪ್ರತಿಯೊಬ್ಬರಿಗೂ ಕೈಗೆ ಸೀಲ್ ಹಾಕುವ ಮೂಲಕ 14 ದಿನ ಹೋಮ್ ಕ್ವಾರಂಟೈನ್ ಇರಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಇನ್ನು ಪ್ರವಾಸಿ ಸ್ಥಳಹಳಲ್ಲಿ ಜಲಸಾಹಸ ಕ್ರೀಡೆಗೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ ನಡೆಸಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಐದಕ್ಕಿಂತ ಹೆಚ್ಚು ಪಾಸಿಟಿವ್ ವರದಿ ಇರುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗುದ್ದು ಈಗಾಗಲೇ ಐದು ಕಂಟೈನ್ಮೆಂಟ್ ಝೋನ್ ಗಳಿವೆ.

ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್ ತಪಾಸಣೆ ಕಾರ್ಯಕ್ಕೆ ಜಿಲ್ಲಾಡಳಿತ ಇದೀಗ ಪ್ರಾರಂಭಿಸುತಿದ್ದು ವೀಕೆಂಡ್ ಕರ್ಫೂ ಗೆ ಸಹ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.

ರಾಜ್ಯಾಧ್ಯಾಂತ ನೈಟ್ ಕರ್ಫೂ ಜಾರಿ-8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫೂ ಜಾರಿ.

ಕರೋನಾ ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕದ ಎಂಟು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫೂ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ,ಕೊಡಗು,ಚಾಮರಾಜನಗರ ,ಮೈಸೂರು,ಬೆಳಗಾವಿ,ವಿಜಯಪುರ,ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫೂ ಜಾರಿ ಮಾಡಲಾಗಿದೆ. ಇನ್ನು ರಾಜ್ಯಾಧ್ಯಾಂತ ಇದೇ ತಿಂಗಳ 9 ರಿಂದ ನೈಟ್ ಕರ್ಫೂ ಜಾರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಆದೇಶಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!