Sirsi:ರಾಜ್ಯ ಸರ್ಕಾರ ಸರ್ವಾಧಿಕಾರಿ ಮನಸ್ಥಿತಿಯಲ್ಲಿ ಕನ್ನಡ ಶಾಲೆಗಳನ್ನು ಕೊಲ್ಲುವ ಕೆಲಸ ಮಾಡುತ್ತಿದೆ -ರೋಹಿತ್ ಚಕ್ರತೀರ್ಥ

120

ಕಾರವಾರ:- ರಾಜ್ಯ ಸರ್ಕಾರ ಸರ್ವಾಧಿಕಾರಿ ಮನಸ್ಥಿತಿಯಲ್ಲಿ ಕನ್ನಡ ಶಾಲೆಗಳನ್ನು ಕೊಲ್ಲುವ ಕೆಲಸ ಮಾಡುತ್ತಿದೆ ಎಂದು ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ( Rohit chakratirtha )ಕಿಡಿಕಾರಿದ್ದಾರೆ.

ಇಂದು ಶಿರಸಿಯ ವಾದಿರಾಜ ಮಠಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ನಾವು ಬರಗೂರು ರಾಮಚಂದ್ರಪ್ಪನವರ ಪಠ್ಯ ಪುಸ್ತಕ ( text book) ಪರಿಷ್ಕರಣೆ ಮಾಡುವಾಗ ಅಲ್ಲಿ ಏನು ಸಮಸ್ಯೆ ಇತ್ತು ಎಂಬುದನ್ನು ಸಾರ್ವಜನಿಕವಾಗಿ ಹೇಳಿದ್ದೇವೆ.

ನಾವು ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ಏನು ತಪ್ಪಿದೆ ಎಂದು ಸರ್ಕಾರವಾಗಲಿ ,ಪರಿಷ್ಕರಣೆ ಮಾಡುತ್ತಿರುವ ವಿಷಯ ತಜ್ಞರಾಗಲಿ ಈಗಿನ ಸಮಿತಿಯ ಅಧ್ಯಕ್ಷರಾಗಲಿ ಬಹಿರಂಗ ಪಡಿಸಿಲ್ಲ. ಕೇವಲ ಹಿಂದಿನ ಸರ್ಕಾರ ಪರಿಷ್ಕರಣೆ ಮಾಡಿತ್ತು ಅದನ್ನು ತೆಗೆಯುತಿದ್ದೇವೆ ಎಂಬ ಅಜಂಡ ಇಟ್ಟುಕೊಂಡು ಪರಿಷ್ಕರಣ ಸಮಿತಿ ರಚನೆ ಮಾಡಿದ್ದಾರೆ.


ಇದು ಸಂಪೂರ್ಣ ಅಸಮಿದಾನಿಕ .15 ,16 ಪಾಠಗಳನ್ನ ಕೇವಲ ಕ್ಯಾಬಿನೇಟ್ ಮೀಟಿಂಗ್ ಮಾಡಿ ಅಲ್ಲಿ ಸುತ್ತೋಲೆ ಹೊರಡಿಸಿದ್ದಾರೆ.ಈ ರೀತಿ ಮಾಡಲು ಶಿಕ್ಷಣ ಇಲಾಖೆಯಲ್ಲಿ ಆಸ್ಪದವಿಲ್ಲ.( Education department )ಇದಕ್ಕೆ ತಿಂಗಳುಗಟ್ಟಲೇ ಅಧ್ಯಯನ ನಡೆಸಿ ರಚನೆಯಾದ ಸಮಿತಿ ಸರಗಕಾರಕ್ಕೆ ಶಿಪಾರಸ್ಸು ಮಾಡಬೇಕು .

ಏಕಪಕ್ಷೀಯವಾದ ತೀರ್ಮಾನ ,ಸರ್ವಾಧಿಕಾರಿ ಮನಸ್ಥಿತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಹಿಂದಿನ ಪಠ್ಯಪುಸ್ತಕ ಸಮಿತಿ ಅಧ್ಯಕ್ಷನಾದ ನನ್ನನ್ನು ಏಕೆ ಪರಿಷ್ಕರಣೆ ಮಾಡಿದ್ದೀರ ಎಂದು ಕೇಳಿಲ್ಲ, ಮುಕ್ತವಾಗಿ ಚರ್ಚಿಸಲು ನಾನು ಬದ್ಧನಿದ್ದೇನೆ.

ಇದನ್ನೂ ಓದಿ:-Honnavara:ಇಡಗುಂಜಿ ದೇವಾಲಯದಲ್ಲಿ ವಿವಿಧ ಹುದ್ದೆ : ಅರ್ಜಿ ಆಹ್ವಾನ ವಿವರ ನೋಡಲು ಕ್ಲಿಕ್ ಮಾಡಿ.

ಪ್ರತಿ ನಿತ್ಯ ಪಠ್ಯ ಬದಲಾವಣೆ ಮಾಡುತ್ತಿರುವುದು ,NEP ಜಾರಿ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಪೋಷಕರಲ್ಲಿ ಗೊಂದಲ ತರುತ್ತಿದೆ.
ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆರಿಸುವ ಸಂಖ್ಯೆ ಕಡಿಮೆಯಾಗುತ್ತದೆ.‌ನೇರವಾಗಿ ಕನ್ನಡ ಹಾಗೂ ಕನ್ನಡ ಶಾಲೆಗಳನ್ನು (kannada school)ಕೊಲ್ಲುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!