ಮದುವೆ ಮನೆಯಲ್ಲಿ ಮಾಸ್ಕ್ ಹಾಕದೇ ಹೋದ ಸ್ಪೀಕರ್ ಕಾಗೇರಿಗೆ ಕರೋನಾ ಪಾಸಿಟಿವ್ !

3516

ಕಾರವಾರ :- ಕಳೆದ ಎರಡು ದಿನದ ಹಿಂದೆಯಷ್ಟೇ ಸಿದ್ದಾಪುರದದ ಮನಮನೆಯಲ್ಲಿ ಮದುವೆ ಮನೆಗೆ ಮಾಸ್ಕ್ ಇಲ್ಲದೇ ಹೋಗಿ ಕ್ಷೇತ್ರದ ಜನರಿಂದಲೇ ಟ್ರೋಲ್ ಗೆ ಒಳಗಾಗಿ ಸುದ್ದಿಯಾಗಿದ್ದ ಸ್ಪೀಕರ್ ಕಾಗೇರಿಗೆ ಇಂದು ಕರೋನಾ ಪಾಸಿಟಿವ್ ವರದಿಯಾಗಿದೆ‌.

ಶಿರಸಿಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಅವರು ಸೋಂಕು ಪತ್ತೆಯಾಗಿದ್ದರೂ ಯಾವುದೇ ರೀತಿಯ ಲಕ್ಷಣಗಳು ಇಲ್ಲ ಹಾಗೂ ಅವರು ಆರೋಗ್ಯವಾಗಿದ್ದಾರೆ ಎಂದು ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆ ನೀಡಿದ್ದು, ಸರ್ಕಾರದ ಕೊವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.‌

ಆದ ಕಾರಣ ಇತ್ತೀಚಿಗೆ ಸಭಾಧ್ಯಕ್ಷರ ಸಂಪರ್ಕಕ್ಕೆ ಬಂದವರು ಸ್ವಯಂ ಪ್ರೇರಿತವಾಗಿ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಸಧ್ಯ ಕಾಗೇರಿಯವರು ಹೋಮ್ ಐಸೋಲೇಟೆಡ್ ಆಗಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಾಗಿಲ್ಲ.ಬಹುತೇಕ ನಾಳೆ ದಾಕಲಾಗುವ ಸಾಧ್ಯತೆಗಳಿವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!