Karnataka goa highway NH 4 a

ಪ್ರಯಾಣಿಕರೇ ಗಮನಿಸಿ| ಭಾರಿ ವಾಹನಕ್ಕೆ ಗೋವಾ -ಕರ್ನಾಟಕ ಹೆದ್ದಾರಿ ಬಂದ್ !

70

Uttrakannada News :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ (Rain)ಅಬ್ಬರ ಸಾಕಷ್ಟು ಅನಾಹುತ ತೊಂದೊಡ್ಡಿದೆ. ಆದ್ರೆ ಇದೀಗ ಬೆಳಗಾವಿ -ಕಾರವಾರ ಗಡಿಯ ಜೋಯಿಡಾ ತಾಲೂಕಿನ ರಾಮನಗರ ಭಾಗದಿಂದ ಗೋವಾ ಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 4A ನಲ್ಲಿ ನೀರುನಿಂತು ರಸ್ತೆಯಲ್ಲಿ ನೂರಾರು ಟ್ರಕ್ ಗಳು ಗೋವಾಕ್ಕೆ ತೆರಳದಂತೆ ಆಗಿದ್ದು ಇದರ ಜೊತೆ ರಸ್ತೆಯೂ ಹದಗೆಟ್ಟಿದೆ.

ಇದಲ್ಲದೇ ಹೆದ್ದಾರಿ ಕಾಮಗಾರಿ ಸಹ ನಡೆಯುತಿದ್ದು ನಾಲ್ಕು ಸೇತುವೆಗಳು ಶಿಥಿಲಾವಸ್ತೆ ತಲುಪಿದೆ.

ಈ ಹಿನ್ನಲೆಯಲ್ಲಿ ಉತ್ತರ ಕನ್ನಡ (UTTARAKANNADA) ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ NH 4A ನಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದಾರೆ.

ಮಳೆ ಹಾಗೂ ರಸ್ತೆ ಹದಗೆಟ್ಟಿದ್ದರಿಂದ ಈ ಆದೇಶ ಮಾಡಲಾಗಿದೆ.

ಇಂದು ರಸ್ತೆಯಲ್ಲಿ ನೀರು ನಿಂತು ವಾಹನಗಳು ಮುಳಗಿ ಅನಾಹುತದ ಬೆನ್ನಲ್ಲೇ ಈ ಆದೇಶ ಮಾಡಲಾಗಿದ್ದು ಜುಲೈ 11ರಿಂದ ಸೆಪ್ಟೆಂಬರ್ 30 ರ ವರೆಗೆ ನಿಷೇಧ ಹೇರಲಾಗಿದೆ.

ಬದಲಿ ಮಾರ್ಗ ಸೂಚನೆ.:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!