ಬೇಳೂರು ಗೋಪಾಲಕೃಷ್ಣರಿಗೆ ಚುನಾವಣೆಗೆ ಅರ್ಜೆಂಟಾಗಿ ಹೋಗಬೇಕು ಇದು ಗ್ರಾಮ ಪಂಚಾಯ್ತಿ ಯಲ್ಲ-ಬೇಳೂರಿಗೆ ಟಾಂಗ್ ಕೊಟ್ಟ ಸಚಿವ ಶಿವರಾಮ್ ಹೆಬ್ಬಾರ್

512

ಕಾರವಾರ :- ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರ ಬೀಳುವ ಕುರಿತು ಸ್ವಪ್ನ ಬಿದ್ದಿರಬೇಕು. ಆದರೆ ಯಾವುದೇ ಕಾರಣಕ್ಕೂ ಸರ್ಕಾರ ಒಂದು ದಿನ ಮುಂಚಿತವಾಗಿಯೂ ಸರ್ಕಾರ ಪತನವಾಗಲ್ಲ. ಅವಧಿ ಪೂರೈಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.‌

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಪಾಲಕೃಷ್ಣ ಅವರಿಗೆ ಅಧಿಕಾರ ಕಳೆದುಕೊಂಡು ಶೀಘ್ರದಲ್ಲಿ ಚುನಾವಣೆಗೆ ಹೋಗಬೇಕಾಗಿದೆ. ಆದ ಕಾರಣ ಹೇಳಿಕೆ ನೀಡುತ್ತಿದ್ದಾರೆ ಎಂದು ಬೇಳೂರು ಅವರ ಸರ್ಕಾರ ಪತನ ಹೇಳಿಕೆಗೆ ತಿರುಗೇಟು ನೀಡಿದರು.

೧೧೯ ಶಾಸಕರನ್ನು ಹೊಂದಿರುವ ಸರ್ಕಾರ ಇದಾಗಿದೆ. ಇದು ಗ್ರಾಮ ಪಂಚಾಯತವಲ್ಲ. ಯಾರಾದರೂ ಸರ್ಕಾರ ಬೀಳು ಭ್ರಮೆಯಲ್ಲಿದ್ದರೇ ಅದು ಭ್ರಮೆ ಮಾತ್ರ. ಆ ಭ್ರಮೆಯಲ್ಲಿಯೇ ಇನ್ನೂ ಒಂದು ವರ್ಷ ದಿನ ದೂಡಬೇಕಾಗುತ್ತದೆ ಎಂದು ಟೀಕಿಸಿದರು.

ಇಂದಿನಿಂದ ಪ್ರೌಢಶಾಲೆಗಳು ಆರಂಭವಾಗಿದೆ. ಈಗಾಗಲೇ ಯಲ್ಲಾಪುರ ಶಾಲೆಗೆ ಭೇಟಿ ನೀಡಿದ್ದೇನೆ. ಮಕ್ಕಳು ಉತ್ಸಾಹದಿಂದ, ಏನೋ ಕಳೆದುಕೊಂಡಿದ್ದು ಸಿಕ್ಕಿದೆ ಎಂಬ ಆಶಯದಲ್ಲಿ ಶಾಲೆಗ ಬಂದಿದ್ದಾರೆ. ಪರಿಸ್ಥಿತಿ ನೋಡಿ ಉಳಿದ ಮಕ್ಕಳಿಗೂ ಶಾಲೆಗೆ ಬರಲು ಅನುಕೂಲ ಆಗುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.‌
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!