ಉತ್ತರ ಕನ್ನಡ ಶಾಲಾ ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು ಪತ್ತೆ! ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್ ಆಗಿರುವ ಕರೋನಾ ವಾರ್ಡ!

1605

ಬೆಂಗಳೂರು:- ರಾಜ್ಯದಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಹರಡಿರುವ ಸಂಬಂಧ ರಾಜ್ಯ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳ ಸೋಂಕು ಅಂಕಿಅಂಶ ಬಿಡುಗಡೆ ಮಾಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಂಕಿಅಂಶ ಬಿಡುಗಡೆಯಾಗಿದ್ದು ರಾಜ್ಯಾದ್ಯಂತ 130 ವಿದ್ಯಾರ್ಥಿಗಳಿಗೆ ಮಾತ್ರ ಸೋಂಕು ತಗುಲಿದೆ.
34 ಶೈಕ್ಷಣಿಕ ಜಿಲ್ಲೆಗಳ ಪೈಕಿ 130 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದ್ದು ತಾಲೂಕುವಾರು ವಿವರ ಈ ಕೆಳಗಿನಂತಿದೆ.

ಬೆಂಗಳೂರು ಉತ್ತರ – 2
ಚಾಮರಾಜನಗರ- 7
ಚಿಕ್ಕಮಗಳೂರು- 92
ಚಿತ್ರದುರ್ಗ- 2
ಗದಗ- 1
ಹಾಸನ-4
ಕೊಡಗು -11
ಮಧುಗಿರಿ- 5
ಮೈಸೂರು- 2
ಶಿವಮೊಗ್ಗ-1
ಶಿರಸಿ-1

ಕರಾವಾರದಲ್ಲಿ ಕೋವಿಡ್ ವಾರ್ಡ ಬಂದ್ !

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೆ 63 ಜನ ಸಕ್ರಿಯ ಸೋಂಕಿತರಿದ್ದಾರೆ. ಇವರಲ್ಲಿ 47 ಜನ ಹೋಮ್ ಐಸೋಲೇಶನ್ ನಲ್ಲಿದ್ದಾರೆ. ಉಳಿದಂತೆ 16 ಜನ ಮಾತ್ರ ತಾಲೂಕಿನ ವಿವಿಧ ಭಾಗದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತಿದ್ದಾರೆ. ಹೀಗಾಗಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದ ಕೋವಿಡ್ ವಾರ್ಡ ನಲ್ಲಿ ಚಿಕಿತ್ಸೆ ಪಡೆಯಲು ಬಾರದೇ ವಾರ್ಡ ನನ್ನು ಬಂದ್ ಮಾಡಲಾಗಿದೆ. ಕೆಲವು ಕೋವಿಡ್ ವಾರ್ಡಗಳು ಹಾಳುಬಿದ್ದಿದ್ದು ವ್ಯವಸ್ಥಿತವಾಗಿಲ್ಲ. ಕೆಲವು ಕಡೆ ಧೂಳು ತುಂಬಿ ಶಿಥಿಲ ಸ್ಥಿತಿಯಲ್ಲಿದೆ.
ಇನ್ನು ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತಿದ್ದು ಸೋಂಕು ಹೆಚ್ಚಾಗಲು ಕಾರಣವಾಗುತ್ತಿದೆ.

ಹೆದರಿಕೆ ಇಲ್ಲ ,ಮುಂಜಾಗ್ರತೆ ಮರೆತ ಸೋಂಕಿತರು.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಿಧಾನ ಗತಿಯಲ್ಲಿ ಏರಿಕೆ ಕಾಣುತ್ತಿದೆ. ಈ ಹಿಂದೆ ಜಿಲ್ಲಾಡಳಿತ ತೆಗೆದುಕೊಳ್ಳುತಿದ್ದ ಜಾಗೃತಿ ಈಗ ಇಲ್ಲವಾಗಿದೆ. ಸೋಂಕಿಗೆ ಒಳಗಾದವರು ಬೇಕಾಬಿಟ್ಟಿ ತಿರುಗಾಡುತಿದ್ದು, ಸೋಂಕು ಹೆಚ್ಚಾಗಲು ಕಾರಣವಾಗಿದೆ. ಆದ್ರೆ ಜಿಲ್ಲಾಡಳಿತ ಈ ಕುರಿತು ಕಠಿಣ ಕ್ರಮ ಕೈಗೊಳ್ಳದೇ ಇರುವುದು ಮತ್ತಷ್ಟು ಸೋಂಕು ಹೆಚ್ಚಾಗಲು ಕಾರಣವಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!