BREAKING NEWS
Search

ರಾಹುಗ್ರಸ್ತ ಚಂದ್ರಗ್ರಹಣ|ಯಾವದೇವಸ್ಥಾನದಲ್ಲಿ ಏನು ವ್ಯವಸ್ಥೆ ವಿವರ ನೋಡಿ.

151

ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಾವ ಸಮಯದಲ್ಲಿ ಚಂದ್ರಗ್ರಹಣವಾಗಲಿದೆ. ಅದಕ್ಕೆ ದೇವಾಲಾಯಗಳಲ್ಲಿ ಯಾವ ಸಿದ್ದತೆ ಮಾಡಿಕೊಳ್ಳಲಾಗದೆ ವಿವರ ಈ ಕೆಳಗಿನಂತಿದೆ.

ಸಮಯ: 2-30 6-30ರವರೆಗೆ ಗ್ರಹಣ ಸಮಯ.

ದೇವಾಲಯಗಳಲ್ಲಿ ವ್ಯವಸ್ಥೆ:

ಮಹಾಬಲೇಶ್ವರ ದೇವಸ್ಥಾನ.

ಗೋಕರ್ಣ (gokarna)
ಚಂದ್ರಗ್ರಹಣದ ಪ್ರಯುಕ್ತ ದಿನಾಂಕ 8-11-2022( ಮಂಗಳವಾರ)ರಂದು ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ದೇವರ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ.

ಮಂಗಳವಾರ ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿದ್ದು, ನಂತರ ಮಧ್ಯಾಹ್ನ 2.30ರಿಂದ ಸಂಜೆ 6.30 ರವರೆಗೆ ಅಂದರೆ ಗ್ರಹಣ ಕಾಲದಲ್ಲಿ ಸಾರ್ವಜನಿಕರಿಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಂದಿರದವತಿಯಿಂದ ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ನೀಡುವ ಉಚಿತ ಪ್ರಸಾದ ಭೋಜನವ್ಯವಸ್ಥೆಯಿರುವುದಿಲ್ಲ.

ಮುರ್ಡೇಶ್ವರ ಈಶ್ವರ ದೇವಸ್ಥಾನ ( Murudeshwara Temple)

ದೇವಾಲಯಗಳಲ್ಲಿ ವ್ಯವಸ್ಥೆ:- ಮುರ್ಡೇಶ್ವರದಲ್ಲಿ ದೇವರಿಗೆ 9 ಘಂಟೆಯ ಒಳಗೆ ಮಧ್ಯಹ್ನದ ಪೂಜೆ ಕಾರ್ಯ ಸಹ ಮುಗಿಸಲಾಗುತ್ತದೆ. ನಂತರ ದಿನವಿಡೀ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಮೃತ್ಯಂಜಯ ಹೋಮ,ರುದ್ರ,ಗ್ರಹಣ ಪರಿಹಾರ ಪೂಜೆ ,ಕುಂಭಾಭಿಷೇಕ ಇತರೆ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಸೂರ್ಯಾಸ್ತದ ನಂತರ ಬಲಿ ಉತ್ಸವ ನೆರವೇರಲಿದೆ.

  • ಮಾರಿಕಾಂಬಾ ದೇವಸ್ಥಾನ ಶಿರಸಿ (marikamba Temple Sirsi)

ಬೆಳಗ್ಗೆ ಎಂಟುಘಂಟೆಗೆ ಮಹಾಪೂಜೆ ನೆರವೇರಿಸಿ ನಂತರ 11 ಘಂಟೆ ವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ನಂತರ ದೇವಸ್ಥಾನ ಬಂದ್ ಇರಲಿದೆ.
ಸಂಜೆ 6-30 ಕ್ಕೆ ದೇವಸ್ಥಾನದ ಬಾಗಿಲು ತೆರೆದು ಶುದ್ದಿ ಕಾರ್ಯ ಮಾಡಲಾಗುತ್ತದೆ. ರಾತ್ರಿ 9 ಘಂಟೆಗೆ ಪೂಜೆ ಇರಲಿದೆ.

ಗ್ರಹಣ ನೋಡಲು ವ್ಯವಸ್ಥೆ: ಕಾರವಾರದ ಸೈನ್ಸ್ ಸೆಂಟರ್ ನಲ್ಲಿ ಟೆಲಿಸ್ಕೋಪ್ ಮೂಲಕ
ಸಂಜೆ 5 ರಿಂದ 6-19. ವರೆಗೆ ಜನರಿಗೆ ನೋಡಲು ವ್ಯವಸ್ಥೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ( Shimoga district)

ಸಾಗರದ ಪ್ರಸಿದ್ಧ ವರದಳ್ಳಿಯ ಶ್ರೀಧರಾಶ್ರಮದಲ್ಲಿ ಗ್ರಹಣದ ದಿನ ಪೂಜೆ ಪುನಸ್ಕಾರಗಳು ಬಂದ್ ಇರುತ್ತದೆ. ಭಕ್ತರಿಗೆ ಗುರುಗಳ ದರ್ಶನ ವ್ಯವಸ್ಥೆ ಸಹ ಇರುವುದಿಲ್ಲ. ಗುರುವಾರ ಚಾತುರ್ಮಾಸ ಮುಗಿದ ಹಿನ್ನಲೆಯಲ್ಲಿ ಗುರುವಾರ ಗುರುಗಳ ಪಾದಿಕೆ ಪಲ್ಲಕ್ಕಿ ಉತ್ಸವ ನೆರವೇರಲಿದ್ದು ,ಗೋಶಾಲೆ,ಶ್ರೀಧರ ತೀರ್ಥ ದಲ್ಲಿ ಪಾದಕೆಗೆ ಪೂಜೆ ನೆರವೇಲಿದೆ.

ಸಿಗಂದೂರು.(Siganduru Temple)
ಮಧ್ಯಾಹ್ನ 12-30 ಕ್ಕೆ ಮಹಾಮಂಗಳಾರತಿ ನಂತರ ದರ್ಶನ ಇಲ್ಲ. ರಾತ್ರಿ ಏಳರ ನಂತರ ಪೂಜೆ.

ಮಹಾ ಗಣಪತಿ ದೇವಸ್ಥಾನ ಸಾಗರ.
12-30 ಮಹಾಪೂಜೆ ನಂತರ ದರ್ಶನ ಇಲ್ಲ.7-30 ಕ್ಕೆ ದೇವಸ್ಥಾನದಲ್ಲಿ ಮಹಾಮಂಗಳಾತಿ ಹಾಗೂ ದರ್ಶನ.

ಸಾಗರ ಮಾರಿಕಾಂಬಾ.
ಈವರೆಗೂ ತೀರ್ಮಾನ ಮಾಡಿಲ್ಲ.

ಮಂಗಳೂರು ಜಿಲ್ಲೆ.( Mangaluru)

ಕುಕ್ಕೆ,ಧರ್ಮಸ್ಥಳ ಕಟೀಲು ದೇವಸ್ಥಾನದಲ್ಲಿ ಸಮಯ ಬದಲಾವಣೆ ಮಾಡಲಾಗಿದೆ.

ಚಂದ್ರಗ್ರಹಣ ದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳು,ಅನ್ನಪ್ರಸಾದ ಇರೋದಿಲ್ಲ

ಬೆಳಗ್ಗೆ ಗಂಟೆ 9 ರಿಂದ 11.30 ರ ತನಕ,ಮಧ್ಯಾಹ್ನ 2-39ರಿಂದ ಸಂಜೆ 6 .19 ರ ತನಕ,ರಾತ್ರಿ 7.30 ರಿಂದ 9 ರ ತನಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.

ಧರ್ಮಸ್ಥಳ ಮಂಜುನಾಥ ದೇವಾಲಯ. (Dharmasthala Manjunatha Temple)

ಅಪರಾಹ್ನ 1.30ರಿಂದ ರಾತ್ರಿ 7ರತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ,ಮಧ್ಯಾಹ್ನ 1.30ರ ವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ.
ಬಳಿಕ ರಾತ್ರಿ 7 ಗಂಟೆಯ ನಂತರ ಭೋಜನ ಮುಂದುವರಿಯಲಿದೆ.

ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ.

ಕಟೀಲು ದೇವಸ್ಥಾನದಲ್ಲೂ ಗ್ರಹಣದ ದಿನ ದೇವರ ಪೂಜೆಯ ಸಮಯ ಬದಲಾವಣೆ ಮಾಡಲಾಗಿದ್ದು , ಬೆಳಗ್ಗೆ 9.30ಕ್ಕೆ ದೇವರಿಗೆ ಪೂಜೆ ನಡೆಯುತ್ತದೆ.
ರಾತ್ರಿ 8 ಗಂಟೆಗೆ ರಾತ್ರಿ ಪೂಜೆ,ರಾತ್ರಿ ಅನ್ನಪ್ರಸಾದ ಇದೆ. ಗ್ರಹಣಕಾಲದಲ್ಲಿ‌ ದೇವಸ್ತಾನ ಭಕ್ತರಿಗೆ ತೆರೆದಿರುತ್ತದೆ.ಗ್ರಹಣ ಮಧ್ಯ ಕಾಲದ ವರೆಗೆ ದೇವರಿಗೆ ಅಭಿಷೇಕ ನೆರವೇರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!