ಪಂಚಾಂಗ:
ಶ್ರೀ ಫ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷಋತು, ಶ್ರಾವಣ ಮಾಸ,
ಶುಕ್ಲ ಪಕ್ಷ,ಚತುರ್ಥಿ (ಹಗಲು 03:26) ನಂತರ ಪಂಚಮಿ.
ಗುರುವಾರ,ಉತ್ತರ ಫಲ್ಗುಣಿ ನಕ್ಷತ್ರ (ಬೆಳಗ್ಗೆ 08:54) ನಂತರ ಹಸ್ತ ನಕ್ಷತ್ರ
ರಾಹುಕಾಲ 02:02 ರಿಂದ 03:36
ಗುಳಿಕಕಾಲ 9:20 ರಿಂದ 10:54
ಯಮಗಂಡಕಾಲ 06: 11ರಿಂದ 07:46
ಹವಾಮಾನ ಫಲ.
ಬೆಂಗಳೂರು ಸೇರಿದಂತೆ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಂಚ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತವಾರಣವಿದ್ದು, ಮತ್ತೆ ಕೆಲವು ಭಾಗಗಳಲ್ಲಿ ಒಣಹವೆ ಇರಲಿದ್ದು, ಬಿಸಿಲು ಮಳೆಯ ಮಿಶ್ರಣ ವಿರಲಿದೆ.
ಉದ್ಯೋಗ ಫಲ.
ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ನಡೆಯಲಿದೆ, ಹೋಟಲ್ ,ವಸತಿ ಉದ್ಯಮದವರಿಗೆ ಅಲ್ಪ ನಷ್ಟ, ಮೀನುಗಾರಿಕಾ ,ಕೃಷಿ ,ತೋಟಗಾರಿಕೆ ಅವಲಂಭಿತರಿಗೆ ಚೇತರಿಕೆ,ಎಲಕ್ಟ್ರಾನಿಕ್ ಹಾಗೂ ಇದಕ್ಕೆ ಸಂಬಂಧಿಸಿದ ಉದ್ಯೋಗ ಹಾಗೂ ವ್ಯಾಪಾರಿಗಳಿಗೆ ಲಾಭ ಇರಲಿದೆ.
ಮೇಷ: ಹಣದ ಬಿಕ್ಕಟ್ಟು ಮುಂದುವರಿಕೆ, ಮಾನಸಿಕ ವೇದನೆ, ಮನೋರೋಗ, ವಿಪರೀತ ಕೋಪ, ತಾಯಿ ಆರೋಗ್ಯದಲ್ಲಿ ಏರುಪೇರು,ಕುಟುಂಬ ಹಾಗೂ ಉದ್ಯೋಗದಲ್ಲಿ ತೊಂದರೆ.
ವೃಷಭ: ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ದೇವತಾಕಾರ್ಯ ಮತ್ತು ಧರ್ಮಕಾರ್ಯಗಳಿಗೆ ಅಡೆತಡೆ, ಮನೋ ನಿಯಂತ್ರಣ ಇಲ್ಲದಿರುವುದು.
ಮಿಥುನ: ಈ ದಿನ ಮಿಶ್ರ ಫಲ,ಆರ್ಥಿಕವಾಗಿ ಕುಂಠಿತ, ಅನಗತ್ಯ ಮಾತಿನಿಂದ ಸಮಸ್ಯೆ, ವ್ಯವಹಾರಗಳಲ್ಲಿ ಹಿನ್ನಡೆ,ಆರೋಗ್ಯ ಉತ್ತಮ,ಹೊಸ ಕಾರ್ಯ ನೆರವೇರುವುದು ವಿಳಂಬ ಆಗಲಿದೆ.
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರ ಸಹೋದರಿಯರಿಗೆ ವಾಗ್ವಾದ, ಕಾರ್ಯ ಕರ್ತವ್ಯಗಳಲ್ಲಿ, ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ, ಅಧಿಕ ಒತ್ತಡ.
ಸಿಂಹ: ಅಧಿಕ ಖರ್ಚು, ಕುಲದೇವರ ಅಥವಾ ಶಕ್ತಿದೇವತೆಯ ದರ್ಶನ, ಉದ್ಯೋಗ ದೊರಕುವ ಸಂದರ್ಭ,ಕುಟುಂಬದಲ್ಲಿ ನೆಮ್ಮದಿ,ಆರೋಗ್ಯ ಚೇತರಿಕೆ.
ಕನ್ಯಾ: ಸ್ನೇಹಿತರಿಂದ ಸಹಕಾರ, ಒತ್ತಡದ ಜೀವನ ಮತ್ತು ನಿದ್ರಾಭಂಗ, ಮೇಲಾಧಿಕಾರಿಗಳಿಂದ, ರಾಜಕೀಯ ವ್ಯಕ್ತಿಗಳಿಂದ, ಸರ್ಕಾರಿ ವ್ಯಕ್ತಿಗಳಿಂದ ಅದೃಷ್ಟ ಕೈತಪ್ಪುವುದು.
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಗೌರವಕ್ಕೆ ಚ್ಯುತಿ, ಸ್ವಂತ ಉದ್ಯಮ ಮತ್ತು ಉದ್ಯೋಗಸ್ಥರಿಗೆ ಅನುಕೂಲ.
ವೃಶ್ಚಿಕ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಸಂಕಷ್ಟ.
ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ ಅಥವಾ ಒತ್ತಡ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಮಕರ: ಸಂಗಾತಿಯಿಂದ ಅನುಕೂಲ, ಸೋದರಮಾವ ಅಥವಾ ತಂದೆಯೊಡನೆ ಕಲಹ, ಮಗ ಅಥವಾ ಮಗಳ ವೈವಾಹಿಕ ಜೀವನದಲ್ಲಿ ಏರುಪೇರು.
ಕುಂಭ: ಆರೋಗ್ಯದಲ್ಲಿ ಸಮಸ್ಯೆ, ಸಂಗಾತಿಯಿಂದ ನೋವು ಮತ್ತು ಆತ್ಮ ಸಂಕಟ, ಸರ್ಕಾರಿ ಕೆಲಸ ಮತ್ತು ಕೋರ್ಟ್ ಕೇಸುಗಳಲ್ಲಿ ಮುನ್ನಡೆ.
ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ, ಆತ್ಮ ಸಂಕಟ ಮತ್ತು ಭಾವನೆ ಮತ್ತು ಆಸೆಗಳಿಗೆ ಪೆಟ್ಟು, ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ, ಶತ್ರು ಬಾಧೆ.