BREAKING NEWS
Search

ಗುರುವಾರದ ರಾಶಿ ಫಲ.

630

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ತೃತೀಯ, ಗುರುವಾರ, ಉತ್ತರಾಷಾಡ ನಕ್ಷತ್ರ
ರಾಹುಕಾಲ: 01:45 ರಿಂದ 03:11
ಗುಳಿಕಕಾಲ: 09:28 ರಿಂದ 10:54
ಯಮಗಂಡಕಾಲ: 06:37 ರಿಂದ 08:02

ಮೇಷರಾಶಿ
ಮಕ್ಕಳಿಂದ ಶುಭ ವಾರ್ತೆ,ಶುಭಮಂಗಲ ಕಾರ್ಯದ ಬಗ್ಗೆ ಚಿಂತನೆ, ಕಾರ್ಯಕ್ಷೇತ್ರದಲ್ಲಿ ಶಕ್ತಿಶಾಲಿಗಳಾಗುವಿರಿ, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಆಸ್ತಿ ಸಮಸ್ಯೆ ಬಗೆಹರಿಯುವುದು, ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ವೃಷಭರಾಶಿ
ನೆರೆ ಹೊರೆಯವರೊಂದಿಗೆ ವಿಶ್ವಾಸ ಮೂಡಲಿದೆ, ಕಾರ್ಯ ವೈಖರಿ ಪ್ರಶಂಸೆಗೆ ಪಾತ್ರವಾಗಲಿದೆ, ವಾಹನ ಅಪಘಾತಗಳಾಗುವ ಎಚ್ಚರಿಕೆ, ಸ್ಥಿರಾಸ್ತಿ ವಿಷಯಗಳು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಸಾಲ.

ಮಿಥುನರಾಶಿ
ಆರ್ಥಿಕ ಪರಿಸ್ಥಿತಿ ಸುಧಾರಣ, ಪಾಲುದಾರಿಕೆಯಲ್ಲಿ ಯಶಸ್ಸು, ಸಹೋದ್ಯೋಗಿಗಳ ಕಿರುಕುಳ, ಹಣಕಾಸಿನ ವಿಚಾರವಾಗಿ ದೂರ ಪ್ರಯಾಣ, ಅಹಂಕಾರದಿಂದ ದಾಂಪತ್ಯದಲ್ಲಿ ಸಮಸ್ಯೆ, ಪ್ರೀತಿಯ ವಿಷಯದಲ್ಲಿ ಪೇಚಿಗೆ ಸಿಲುಕುವಿರಿ.

ಕಟಕರಾಶಿ
ಕಾರ್ಯರಂಗದಲ್ಲಿ ಉತ್ಸಾಹ, ಉದ್ಯೋಗಿಗಳಿಗೆ ಪ್ರೋತ್ಸಾಹ, ಸರಕಾರಿ ಅಧಿಕಾರಿಗಳಿಗೆ ಅನುಕೂಲ, ಅನಾರೋಗ್ಯ ಸಮಸ್ಯೆ, ಆಸ್ತಿ ವಿಷಯಗಳಲ್ಲಿ ಸಮಸ್ಯೆ.

ಸಿಂಹರಾಶಿ
ಆರ್ಥಿಕವಾಗಿ ಯಾರಿಗೂ ಸಾಲ ನೀಡದಿರಿ, ನ್ಯಾಯಾಲಯದ ವಿವಾದಗಳು ಸದ್ಯಕ್ಕೆ ಮುಕ್ತಾಯವಾಗುವುದಿಲ್ಲ, ಶತ್ರು ಭಯ ನಿವಾರಣೆಯಾದರೂ ನೆಮ್ಮದಿ ಇರದು, ಆರೋಗ್ಯ ಸಮಸ್ಯೆ, ಅಧಿಕ ಖರ್ಚು, ಸಂಗಾತಿಯ ನಡವಳಿಕೆಯಲ್ಲಿ ಸಂಶಯ.

ಕನ್ಯಾರಾಶಿ
ವೃತ್ತಿರಂಗದಲ್ಲಿ ಅಭಿವೃದ್ದಿ, ಯೋಗ್ಯ ವಯಸ್ಕರಿಗೆ ಕಂಕಣಬಲ, ಗೃಹದಲ್ಲಿ ಪತ್ನಿಯ ಬೇಡಿಕೆಗೆ ಸ್ಪಂಧಿಸಿರಿ, ಸ್ತ್ರೀಯರಿಗೆ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗವಾಕಾಶ, ಆಸ್ತಿ ಪಾಸ್ತಿ ನಷ್ಟ.

ತುಲಾರಾಶಿ
ಸ್ವತಃ ವ್ಯವಹಾರದವರಿಗೆ ಲಾಭ, ಕಾರ್ಯ ಸಾಧನೆಗೆ ಅಡ್ಡಿಯಾಗಲಿದೆ, ಉದ್ಯೋಗಿಗಳಿಗೆ ಕಿರಿಕಿರಿ, ವ್ಯಾಪಾರಸ್ಥರು ಎಚ್ಚರಿಕೆಯಿಂದ ಇರಬೇಕು, ಸರಕಾರಿ ಕೆಲಸಗಳಲ್ಲಿ ಗೆಲುವು, ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ.

ವೃಶ್ಚಿಕರಾಶಿ
ಆರ್ಥಿಕವಾಗಿ ಹಿನ್ನಡೆ, ವ್ಯವಹಾರದಲ್ಲಿ ಲಾಭ, ಉದ್ಯೋಗದವರಿಗೆ ನಷ್ಟ, ವಿದ್ಯಾರ್ಥಿಗಳಿಗೆ ಉದಾಸೀನತೆ ತೋರಿಬರುವುದು, ಉದ್ವೇಗದಿಂದ ಕಾರ್ಯಹಾನಿ, ಕೃಷಿಕರಿಗೆ ಉತ್ತಮ, ಸಂಗಾತಿಯೊಂದಿಗೆ ವಾಗ್ವಾದ.

ಧನಸ್ಸುರಾಶಿ
ಎಚ್ಚರಿಕೆಯ ಹೆಜ್ಜೆಯನ್ನಿರಿಸಿರಿ, ಕೆಲಸ ಕಾರ್ಯಗಳಲ್ಲಿ ಉನ್ನತಿ, ವಿದ್ಯಾರ್ಥಿಗಳಿಗೆ ಅಭ್ಯಾಸಬಲದ ಅಗತ್ಯವಿದೆ, ಶುಭದ ಆಶಾಕಿರಣವು ಮೂಡಲಿದೆ, ತಂದೆಯೊಡನೆ ಮನಸ್ತಾಪ, ಪ್ರಯಾಣದಲ್ಲಿ ತಡೆ, ಸಾಲದ ಚಿಂತೆ.

ಮರಕರಾಶಿ
ಹೊಸ ಯೋಜನೆಗಳು ಕಾರ್ಯಗತವಾದರೆ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿದೆ, ನೂತನ ಧನಾದಾಯದಿಂದ ಭಾಗ್ಯಾಭಿವೃದ್ದಿ, ಗೃಹದಲ್ಲಿ ಪತ್ನಿಯಿಂದ ಸಹಕಾರ, ಅಪಘಾತ ಭೀತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆಯಿರಲಿ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಸಮಸ್ಯೆ.

ಕುಂಭರಾಶಿ
ನಿರೀಕ್ಷಿತ ಸ್ಥಾನ ವೃದ್ದಿ, ಅನಾವಶ್ಯಕ ನಿಷ್ಟುರಕ್ಕೆ ಕಾರಣವಾಗುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಲಾಭ, ವಾಹನದಿಂದ ಲಾಭ, ತಂದೆಯಿಂದ ಅನುಕೂಲ, ಸಾಮಾಜಿಕವಾಗಿ ಗೌರವ ಪ್ರಶಂಸೆ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ.

ಮೀನರಾಶಿ
ವೃತ್ತಿರಂಗದಲ್ಲಿ ತಾತ್ಕಾಲಿಕ ಸ್ಥಾನಮಾನ, ಕ್ರೀಡಾಪಟುಗಳಿಗೆ ಅವಕಾಶ, ಆರೋಗ್ಯದಲ್ಲಿ ಸುಧಾರಣೆ, ಸಾಂಸಾರಿಕವಾಗಿ ಅಪವಾದ, ಸ್ತ್ರೀಯರಿಂದ ಸಮಸ್ಯೆ, ನಿದ್ರಾ ಭಂಗ, ಸರಕಾರಿ ಕೆಲಸಗಳಲ್ಲಿ ಹಿನ್ನಡೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!