Breaking news: ಇಸ್ರೇಲ್ ನಲ್ಲಿ ಸಿಲುಕಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಯುವಕರು.ವಿವರ ನೋಡಿ.

348

ಕಾರವಾರ :- ಇಸ್ರೇಲ್ ನಲ್ಲಿ ಹಮಾಸ್ ಉಗ್ರರ Israel war )ದಾಳಿಯಿಂದ ನಡುಗಿ ಹೋಗಿದೆ. ಇತ್ತ ಇಸ್ರೇಲ್ ಯುದ್ಧ ಘೋಷಣೆ ಮಾಡುತಿದ್ದಂತೆ ಭಾರತದ ರಾಯಭಾರಿ ಕಚೇರಿ ಸಹ ಇಸ್ರೇಲ್ ನಲ್ಲಿ ಇರುವ ಭಾರತೀಯರಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದಾರೆ.ಇದರ ಬೆನ್ನಲ್ಕೇ ಹಮಾಸ್ ಉಗ್ರರ ದಾಳಿಗೆ ಭಾರತ ಮೂಲದ ನರ್ಸ್ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಯುವಕರು ಸಹ ಇಸ್ರೆಲ್ ನಲ್ಲಿ ಸಿಲುಕಿದ್ದು ಸದ್ಯ ಸುರಕ್ಷಿತವಾಗಿದ್ದಾರೆ.

ಜಿಲ್ಲೆಯ ಶಿರಸಿ, ಯಲ್ಲಾಪುರ ,ಹೊನ್ನಾವರದ ಕವಲಕ್ಕಿಯ ಜಮೀಶ್ ಎಂಬ ಯುವಕರು ಸಿಲುಕಿರುವ ಮಾಹಿತಿ ಇದೀಗ ಹೊರಬರುತಿದ್ದು ಜಿಲ್ಲಾಡಳಿತ ಸಹ ಮಾಹಿತಿ ನೀಡುವಂತೆ ಕೋರಿಕೊಂಡಿದೆ.

ಶಿರಸಿ ನಗರದ ಮೀನುಮಾರುಕಟ್ಟೆಯ ನಿವಾಸಿಯಾಗಿರುವ ಕ್ರಿಸೊಸ್ಟೆಮ್ ಪಾಲ್ ವಾಜ್ ಇಸ್ರೇಲ್ ನ ಹೈಫಾ ಗ್ರಾಮದಲ್ಲಿ ಹೋಮ್ ನರ್ಸ ಆಗಿ ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತಿದ್ದು ಇದೀಗ ಅವರು ಇಸ್ರೇಲ್ ನ ಯುದ್ದ ನಡೆಯುತ್ತಿರುವ ಸ್ಥಳದಿಂದ 150 ಕಿಲೋಮೀಟರ್ ದೂರದಲ್ಲಿದ್ದು ಸುರಕ್ಷಿತವಾಗಿದ್ದಾರೆ. ಇನ್ನು ಶಿರಸಿಯ ವಿಲ್ಸನ್ ಡಯಾಸ್ ಎಂಬುವವರು ಹೋಮ್ ನರ್ಸಿಂಗ್ ಉದ್ಯೋಗ ಮಾಡುತಿದ್ದು ಅವರು ಇಸ್ರೇಲ್ ನ ಪೇಟಾ ಟಿಕ್ವಾ ದಲ್ಲಿ ಸಿಲುಕಿದ್ದಾರೆ. ಇನ್ನು ಯಲ್ಲಾಪುರ ಹಾಗೂ ಹೊನ್ನಾವರದ ಕವಕ್ಕಿಯ ಯುವಕ ಸಹ ಸಿಲುಕಿದ್ದು ಇವರ ಬಗ್ಗೆ ಮಾಹಿತಿ ಹೊರಬರಬೇಕಿದೆ.

ಇನ್ನು ಕೆಲವು ಮಾಹಿತಿ ಪ್ರಕಾರ ಇಸ್ರೇಲ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಯುವಕರು ಇಸ್ರೇಲ್ ನಲ್ಲಿ ಸಿಲುಕಿದ್ದು ಇವರ ಮಾಹಿತಿಯನ್ನು ಪೋಷಕರು ಜಿಲ್ಲಾಡಳಿತಕ್ಕೆ ನೀಡಿಲ್ಲ. ಹೀಗಾಗಿ ಮಾಹಿತಿ ಕೊರತೆಯಾಗಿದ್ದು ಇನ್ನಷ್ಟೇ ವಿಷಯ ಬಹಿರಂಗವಾಗಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!