BREAKING NEWS
Search

ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ|ಗಾಳಿಯ ಅಬ್ಬರಕ್ಕೆ ಹೆದ್ದಾರಿಯಲ್ಲಿ ಹಾರಿ ಬಿದ್ದ ಸವಾರ.

230

ಬೆಂಗಳೂರು/ಕಾರವಾರ:- ರಾಜ್ಯಾಧ್ಯಾಂತ ಮಳೆಯ ವಾತಾವರಣ ಕಳೆದ ಮೂರ್ನಾಲ್ಕು ದಿನದಿಂದ ಮುಂದುವರೆದಿದೆ.ಆದ್ರೆ ಇದೀಗ ಗೌರಿ-ಗಣೇಶ ಹಬ್ಬಕ್ಕೂ ಮಳೆ ಅಡ್ಡಿಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.( weather report)

ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಅಲ್ಪ ಬಿಡುವು ನೀಡಲಿದೆ. ಆದರೆ ಕರಾವಳಿ ಭಾಗದಲ್ಲಿ ಮಾತ್ರ ಮುಂದಿನ ಎರಡು ದಿನಗಳು ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ( IMD) ನೀಡಿದೆ.

ರಾಷ್ಟ್ರೀಯ ಚತುಷ್ಪತ ಹೆದ್ದಾರಿ66 ರಲ್ಲಿ ಅಬ್ಬರದ ಗಾಳಿಗೆ ಹಾರಿಹೋದ ಸವಾರ!

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಭಾಗದಲ್ಲಿ ಇಂದು ಸಹ ಅಬ್ಬರದ ಮಳೆ ಮುಂದುವರೆದಿದ್ದು ಉಡುಪಿ ಜಿಲ್ಲೆಯ ಕುಂದಾಪುರದ ಮರವಂತೆ ಬೀಜ್ ರೋಡ್ ನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಿರುಗಾಳಿಗೆ ಬೈಕ್ ನಲ್ಲಿ ಹೋಗುತಿದ್ದವನಿಗೆ ಗಾಳಿ ರಭಸಕ್ಕೆ ತೇಲಿಹೋಗಿ ಬಿದ್ದಿದ್ದು ಈ ದೃಶ್ಯ ಕಾರವಾರದ ವಾಹನ ಸವಾರರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದ್ದು ದೃಶ್ಯ ಭಯಾನಕವಾಗಿದೆ.

ಮೀನುಗಾರರಿಗೆ ಸೂಚನೆ

ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಗಾಳಿಯ ವೇಗ ಅಧಿಕವಾಗಿರಲಿದೆ. ಗಾಳಿಯು ಗಂಟೆಗೆ 40-45 ರಿಂದ 55 ಕಿ.ಮಿ. ವೇಗದಲ್ಲಿ ಸಂಚರಿಸಲಿದೆ. ಗಾಳಿಯ ವೇಗದಿಂದ ಅಲೆಯ ಏರಳಿತವೂ ಅಧಿಕವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.

ಯಾವ ಜಿಲ್ಲೆಯಲ್ಲಿಎಷ್ಟು ಮಳೆ.

ಕರ್ನಾಟಕದಲ್ಲಿ (karnataka) ಉಡುಪಿಯಲ್ಲಿ102.5 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಮಿ.ಮೀ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 76 ಮಿ.ಮೀ. ಕೋಲಾರ ಜಿಲ್ಲೆಯಲ್ಲಿ 55.5 ಮಿ.ಮೀ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 54 ಮೀ.ಮಿ ಮಳೆಯಾಗಿದೆ. ಬೆಂಗಳೂರು ನಗರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 38 ಸೆ.ಮೀನಷ್ಟು ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ, ಹೊನ್ನಾವರ, ಅಂಕೋಲಾ, ಕಾರವಾರ, ಬೇಲಿಕೇರಿ, ಕದ್ರಾ, ಮಂಕಿ, ಗೋಕರ್ಣ, ಭಟ್ಕಳ,ಯಲ್ಲಾಪುರ, ಮಂಚಿಕೆರೆಯಲ್ಲೂ ಹೆಚ್ಚಿನ ಮಳೆಯಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!