


ಬೆಂಗಳೂರು: ಇಂದಿನಿಂದ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಪೂರ್ವದ ಅಲೆಗಳಿಂದ ಮಳೆಯಾಗುತಿದ್ದು ಕರಾವಳಿ ಭಾಗದಲ್ಲಿ ಇಂದಿನಿಂದ 10ರವರೆಗೆ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ 10 ರವರೆಗೆ ವರುಣನ ಮಳೆಯಾಗಲಿದೆ ಎಂದಿದ್ದಾರೆ.
ಶಿವಮೊಗ್ಗ,ಬೆಳಗಾವಿ, ಧಾರವಾಡ, ಹಾವೇರಿ,ಉತ್ತರ ಕನ್ನಡ,ಬಿಜಾಪುರ, ಗದಗನಲ್ಲಿ ಮಳೆಯಾಗೋ ಸಾಧ್ಯತೆ ಇದೆ. ಆದರೆ ಬೆಂಗಳೂರಿನಲ್ಲಿ ಇವತ್ತು ಮತ್ತು ನಾಳೆ ಹೆಚ್ಚಿನ ಮಳೆಯಾಗಲಿದೆ ಎಂದಿದ್ದಾರೆ.
ಸದ್ಯ ಮಲೆನಾಡು ಭಾಗದಲ್ಲಿ ಭತ್ತದ ಕೊಯಲು ಹಾಗೂ ಅಡಕೆ ಸುಗ್ಗಿ ಬಡೆಯುತ್ತಿದೆ. ಹೀಗಾಗಿ ಅಕಾಲಿಕ ಮಳೆ ರೈತರನ್ನು ಮತ್ತೆ ಹೈರಾಣಾಗಿಸುವ ಸಾಧ್ಯತೆಗಳಿದ್ದು ರೈತರು ತಮ್ಮ ಬೆಳೆ ರಕ್ಷಿಸಿಕೊಂಡು ಎಚ್ಚರದಿಂದ ಇರಬೇಕಾಗಿದೆ.