ಕರಾವಳಿ ಮುಂಜಾವಿನ ಹಿರೇಗುತ್ತಿಯ ನನ್ನ ಪಟ ಹರಿಯದಿರಲಿ!

334

ಪತ್ರಿಕೋದ್ಯಮ ನಿಂತ ನೀರಲ್ಲ, ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದುವ ,ಆಡಳಿತ ಎಚ್ಚರ ತಪ್ಪಿದಾಗ ಎಚ್ಚರಿಸುವ ಶಕ್ತಿ ಮಾಧ್ಯಮಗಳಿಗಿದೆ. ಈ ಮಾಧ್ಯಮ ಸರಿಯಾದ ಉದ್ದೇಶಕ್ಕೆ ಬಳಕೆಯಾದಾಗ ಅದರ ಅನುಪಸ್ಥಿತಿ ಗೆ ಬೆಲೆ ಇರುತ್ತದೆ. ಇಂದಿನ ದಿನದಲ್ಲಿ ಮಾಧ್ಯಮ ಬದಲಾಗಿದೆ.ಡಿಜಿಟಲ್‌ ಮಾಧ್ಯಮಗಳು ಇಂದು ಪತ್ರಿಕೆಯ ಸ್ಥಾನ ಪಡೆದಿವೆ. ರಾಜ್ಯ ಅಂತರಾಷ್ಟ್ರೀಯ ಮಟ್ಟದ ಡಿಜಿಟಲ್ ಮಾಧ್ಯಮಗಳು ಟಿ.ವಿ ಮಾಧ್ಯಮ, ಪತ್ರಿಕಾ ಮಾಧ್ಯಮದ ದುಪ್ಪಟ್ಟು ಓದುಗರನ್ನು ತಲುಪುತ್ತವೆ .ಅದು ಉಚಿತವಾಗಿ. ಇವುಗಳನ್ನೆಲ್ಲಾ ನಾನು ಬದಿಗಿಟ್ಟು ಇಂದು ಕರಾವಳಿ ಮುಂಜಾವು (karavali munjavu)ಪತ್ರಿಕೆಯಲ್ಲಿ ಕನ್ನಡ ವಾಣಿ ಪತ್ರಿಕೆಯ ಬಗ್ಗೆ ಅವರು ತುರುಕಿದ ವಿಚಾರದಾರೆಯಬಗ್ಗೆ ಅನಿವಾರ್ಯ ವಾಗಿ ಹೇಳಬೇಕಿದ್ದು ಒಂದಿಷ್ಟು ಪ್ರಸ್ತಾವನೆ ಮೂಲಕ ವಿಷಯಕ್ಕೆ ಬರುತ್ತೇವೆ.

ಹಿರಿಗುತ್ತಿಯವರೇ ಸ್ಥಳೀಯವಾಗಿ ಐದು ವರ್ಷದಿಂದ ಕನ್ನಡ ವಾಣಿ ಡಿಜಿಟಲ್ ಪತ್ರಿಕೆ ನಾವು ನಡೆಸುತಿದ್ದೇವೆ. ಪ್ರತಿ ತಿಂಗಳು 2 ಲಕ್ಷ ಕ್ಕೂ ಹೆಚ್ಚು ಓದುಗರನ್ನು ಈ ಮಾಧ್ಯಮ ತಲುಪುತ್ತಿದೆ. ಮೊದಲು ಶಿವಮೊಗ್ಗ, ಉತ್ತರ ಕನ್ನಡ,ಉಡುಪಿ,ಮಂಗಳೂರು ,ಬೀದರ್ ಕೇಂದ್ರವಾಗಿರಿಸಿಕೊಂಡು ಪ್ರಾರಂಭಮಾಡಿದರೂ ಕರೋನಾ ಸಂದರ್ಭದಲ್ಲಿ ಮಾಧ್ಯಮದ ಪಾಲುದಾರರಾಗಿದ್ದವರು ತೀರಿಹೋದಾಗ ಮುನ್ನೆಡೆಸುವ ಆರ್ಥಿಕ ಶಕ್ತಿ ಇಲ್ಲದೇ ಕುಂಟುತ್ತಾ ಸಾಗಿದರೂ ಮಾಧ್ಯಮದ ಹಿರಿಯ ಪತ್ರಕರ್ತರ ಆರ್ಥಿಕ ಚೈತನ್ಯದಿಂದ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿ ಉಳಿಸಿಕೊಳ್ಳಬೇಕಾಯಿತು.ಗೂಗಲ್ ನಂತ ಸಂಸ್ಥೆ ಕನ್ನಡ ವಾಣಿ ಸುದ್ದಿ ಸಂಸ್ಥೆ ಚೇತರಿಕೆ ಕಾಣಲು ತಾಂತ್ರಿಕ ಸಹಾಯ ನೀಡುತ್ತಿದೆ. ಇದಲ್ಲದೇ ಗೂಗಲ್ (Google )ಆಯ್ಕೆಮಾಡಿಕೊಂಡ ರಾಜ್ಯದ ನೂರು ಡಿಜಿಟಲ್ ಮಾಧ್ಯಮಗಳಲ್ಲಿ ಕನ್ನಡ ವಾಣಿ ಡಿಜಿಟಲ್ ಮಾಧ್ಯಮ ಕೂಡ ಒಂದು. ಇವೆಲ್ಲಕ್ಕಿಂತ ಹೆಚ್ಚಾಗಿ ನಾವು ಸುದ್ದಿ ಬಿತ್ತರಿಸಿದಾಗ ಅದನ್ನು ಓದಿ ಬೆನ್ನುತಟ್ಟುವ ಜೊತೆ ಬೇರೆಡೆಗೂ ಇದನ್ನು ತಲುಪಿಸಲು ವಾಟ್ಸ್ ಅಪ್ ಮೂಲಕ,ಸೂಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುವ ಅಡ್ಮಿನ್ ಗಳಿಗೆ ನಮ್ಮ ಪತ್ರಿಕೆ ಚಿರ ಋಣಿ.

ಈಗ ವಿಷಯಕ್ಕೆ ಬರುತ್ತೇನೆ. ಕರಾವಳಿ ಮುಂಜಾವು ಪತ್ರಿಕೆ ಸಂಪಾದಕರ ವಿರುದ್ಧ ಹಿಂದೆ ಕಾರವಾರದ ಶಾಸಕರಾಗಿದ್ದ ರೂಪಾಲಿ ನಾಯ್ಕ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬ್ಲಾಕ್ ಮೇಲ್ ಆರೋಪ ಮಾಡಿದ್ದರು. ಅದಕ್ಕೂ ಮೊದಲು ಮಾಧ್ಯಮ ಒಂದು ನನಗೆ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಯಾವ ಮಾಧ್ಯಮ ಬ್ಲಾಕ್ ಮೇಲ್ ಮಾಡುತ್ತಿದೆ ಎಂಬುದನ್ನು ಹೇಳಿರಲಿಲ್ಲ. ಹೀಗಾಗಿ ಮಾಧ್ಯಮ ಎಂದಾಗ ಎಲ್ಲಾ ಮಾಧ್ಯಮಗಳೂ ತಪ್ಪಿತಸ್ಥ ರನ್ನಾಗಿ ಮಾಡುವುದು ಎಷ್ಟು ಸರಿ, ಹೀಗಾಗಿ ಟಿವಿ ಮಾಧ್ಯಮದ ವರದಿಗಾರರು ಮಾಧ್ಯಮದ ಹೆಸರು ಹೇಳಿ, ಮಾಧ್ಯಮ ಎಂದಾಗ ಎಲ್ಲಾ ಮಾಧ್ಯಮ ಸೇರುತ್ತದೆ. ಇದರಿಂದ ಎಲ್ಲಾ ಮಾಧ್ಯಮಗಳಿಗೆ ನಿಮ್ಮ ಹೇಳಿಕೆ ಅನ್ವಯವಾಗುತ್ತದೆ ಎಂದಾಗ ಕರಾವಳಿ ಮುಂಜಾವಿನ ಹೆಸರನ್ನು ಅವರು ಉಲ್ಲೇಖಿಸಿದ್ದರು.ಈ ಸುದ್ದಿಯನ್ನು ಅವರ ಹೇಳಿಕೆ ವಿಡಿಯೋ ಸಮೇತ ಬಿತ್ತರಿಸಲಾಗಿದೆ. ಅಂದು ಅವರು ಶಾಸಕರಾದ್ದರಿಂದ ಅವರ ಮಾತಿಗೆ ಪ್ರಾಮುಖ್ಯತೆ ದೊರೆಯುತ್ತದೆ.ಹೀಗಾಗಿ ವಸ್ತು ನಿಷ್ಟ ವರದಿ ಪ್ರಕಟಿಸುವ ನಿರ್ಭೀತಿ ಮಾಧ್ಯಮಗಳು ಇವುಗಳನ್ನು ಸುದ್ದಿ ಮಾಡಿವೆ. ಹಾಗೆಯೇ ನಾವು ಸಹ ಸುದ್ದಿ ಮಾಡಿದ್ದೇವೆ. ಪತ್ರಕರ್ತರು ಪ್ರಶ್ನಾತೀತರಲ್ಲ, ಪತ್ರಿಕೆಯನ್ನು ಸಮಾಜದ ಒಳಿತಿಗಾಗಿ ಬಳಸಬೇಕೇ ವಿನಹಾ ಸಮಾಜ ಒಡೆಯುವ ಅಥವಾ ತಮ್ಮ ಸ್ವಾರ್ಥಕ್ಕಾಗಿ ಅಲ್ಲ ಎಂಬುದು ನಮ್ಮ ಉದ್ದೇಶ. ಆದ್ರೆ ಬೇರೆಯವರ ಬಗ್ಗೆಯೇ ಸುದ್ದಿ ಮಾಡಿ ಸಂತೋಷ ಪಡುವ ಕೆಲವು ಹಿರಿಯ ಪತ್ರಕರ್ತರು ತಮ್ಮ ಬುಡಕ್ಕೆ ಬಂದಾಗ ಅವರ ಸ್ವಭಾವ ಧೋರಣೆ ಹೇಗೆ ಬದಲಾಗುತ್ತದೆ ಎಂಬುದನ್ನ ಅನುಭವಿಸಿದವರೇ ಹೇಳಬೇಕು.

ಪತ್ರಕರ್ತರು ತಪ್ಪು ಮಾಡಿದಾಗ ತಿದ್ದಿ ಹೇಳಬೇಕಾದ್ದು ಓದುಗರು,ಶಿಕ್ಷೆ ಕೊಡಬೇಕಾದವರು ನ್ಯಾಯಾಲಯ. ಹೀಗಾಗಿ ನಾವು ಓದುಗರಿಗೆ ಮತ್ತು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ ,ತಲೆಬಾಗುತ್ತೇವೆ ಅನ್ಯರಿಗಲ್ಲ.

ಇನ್ನು ಹಿರೇಗುತ್ತಿ ಬಗ್ಗೆ ಹೇಳಿಕೆ ಸುದ್ದಿ ನಮ್ಮಲ್ಲಿ ಪ್ರಕಟವಾಗುತಿದ್ದಂತೆ ಅವರ ಗ್ರಹಗಳು ನಮ್ಮ ಪತ್ರಿಕೆ ಹಿಂದೆ ಬಿದ್ದಿತು, ದಮ್ಕಿ ಹಾಕಲಾಯಿತು. ನಾವು ಮೆಡಿಕಲ್ ಕಾಲೇಜಿನಲ್ಲಿ ಆಗಿರುವ ಆಡಳಿತ ದೋಷಗಳ ಬಗ್ಗೆ ಸುದ್ದಿ ಮಾಡಿದಾಗ ಅವರಿಗೆ ಹೇಳಿಸಿ ತಮ್ಮದೇ ಪತ್ರಿಕೆಯಲ್ಲಿ ಸುದ್ದಿ ಮಾಡಲಾಯಿತು‌ .ಇದಕ್ಕೆ ನಮ್ಮ ಸ್ವಾಗತ ,ಚರ್ಚೆ ಆಗಬೇಕು.ಮೆಡಿಕಲ್ ಕಾಲೇಜಿನ ಡೀನ್ ಗಜಾನನ ನಾಯ್ಕ ರವರು ಖಾಸಗಿ ವಾಹಿನಿ ಮೇಲೆ ನೋಟಿಸ್ ನೀಡಿದರು,ಖಂಡಿತಾ ತಪ್ಪಿಲ್ಲ ಅಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ನಮ್ಮ ಬಳಿ ಹಾಗೂ ಖಾಸಗಿ ವಾಹಿನಿಯ ಬಳಿಯೂ ದಾಖಲೆ ಇದೆ, ವಿಡಿಯೋ ಸಹ ಇದೆ . ಕೋರ್ಟ ಗೆ ಹೋದರೂ ನಾವು ಮಾಡಿದ್ದ ಸುದ್ದಿಗೆ ಬದ್ದರಿದ್ದು ಹೋರಾಡಲು ನಾವು ಹಾಗೂ ಖಾಸಗಿ ವಾಹಿನಿಯವರು ಸಿದ್ದರಿದ್ದಾರೆ.

ಇನ್ನು ಇತ್ತೀಚಿನ ಕೆಲವು ದಿನದ ಹಿಂದೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾಧ್ಯಮ ಗೋಷ್ಠಿ ಅಂತ್ಯದಲ್ಲಿ ಹಿಂದಿನ ಹೇಳಿಕೆಯನ್ನು ಪನರಾವರ್ತಿಸಿದರು. ಇದರಲ್ಲಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಹೆಸರನ್ನು ಉಲ್ಲೇಖಿಸಿದರು. ಇದು ಅವರ ಹೇಳಿಕೆ ಹಾಗಾಗಿ ಅವರ ಹೇಳಿಕೆಯನ್ನು ಸುದ್ದಿ ಮಾಡಲಾಯಿತು. ಈ ಸುದ್ದಿ ಪ್ರಕಟವಾದ ಮರುದಿನ ಕುಹಕದ ಹೆದರಿಸುವ ಮೆಸೇಜ್ ಗಳು ಮಾಧ್ಯಮ ವರದಿಗಾರನಿಗೆ ಹಾಕಲಾಯ್ತು. ಇಂದು ಕರಾವಳಿ ಮುಂಜಾವಿನ ಹಿರೇಗುತ್ತಿ ಹರಿದ ಪಟದಲ್ಲಿ ವಿಶ್ಲೇಷಣೆ ಸಹ ಮಾಡಲಾಯಿತು . ಓದುಗರು ಮಟ್ಟಾಳರಲ್ಲ ,ಎಲ್ಲವನ್ನೂ ಅವರು ವಿಶ್ಲೇಷಿಸುವ ಬುದ್ದಿ ಶಕ್ತಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಮಂದಿಗಿದೆ. ಹೀಗಾಗಿ ವಿಶ್ಲೇಷಣೆ ಹಾಗೂ ಫಲಿತಾಂಶ ಅವರಿಗೆ ಬಿಟ್ಟಿದ್ದು. ಇನ್ನು ಕನ್ನಡವಾಣಿ ಪತ್ರಿಕೆ ವಿರುದ್ಧ ನೋಟಿಸ್ ನೀಡಲಾಗಿದೆ . ಅದನ್ನು ತೆಗೆದುಕೊಂಡಿಲ್ಲ ಎಂದು ಬರೆದುಕೊಂಡಿದ್ದಾರೆ. ನಮಗೆ ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ. ಬಂದರೇ ಅದನ್ನು ತೆಗೆದುಕೊಂಡು ನ್ಯಾಯಾಲಯದಲ್ಲಿ ಹೋರಾಡಲು ಸಿದ್ದರಿದ್ದೇವೆ.

ಕೆಲವು ಪತ್ರಕರ್ತರಿಗೆ ತಮ್ಮ ವಿರುದ್ಧ ಏನೂ ಬರಬಾರದು ನಾವು ಪ್ರಶ್ನಾತೀತರು ಎಂಬ ಅಹಂ ಗಟ್ಟಿಯಾಗಿ ತಳವೂರಿದೆ. ಪತ್ರಿಕೆಯನ್ನು ಅಸ್ತ್ರ ಮಾಡಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವವರು ಇದ್ದಾರೆ. ಬೇರೆಯವರ ಪತ್ರಿಕೆ ಬೆಳೆದರೇ ತಮ್ಮ ಪತ್ರಿಕೆಗೆ ನಷ್ಟ ವಾಗಿಬಿಡುತ್ತೆ ಎಂಬ ಮನೋಭಾವ ಕೆಲವರಲ್ಲಿ ಇದ್ದು ,ಹೀಗಾಗಿ ಬೇರೆ ಪತ್ರಿಕೆಯವರ ಬಂಡಲ್ ನನ್ನೇ ಎಗರಿಸುವವರು ಇದ್ದಾರೆ. ಹೆಣ್ಣಿನ ಚಪಲಕ್ಕೆ ಕಚೇರಿಯಲ್ಲೇ ಕರೆದು ಕೆನ್ನೆಗೆ ಬಾರಿಸಿಕೊಂಡು ,ಉಗಿಸಿಕೊಂಡ ಮುದುಕ ಚಫಲ ಮಾಲೀಕರು ಇದ್ದಾರೆ. ಜನತೆಗೆ ಹಾಗಿರಬೇಕು ,ಹೀಗಿರಬೇಕು ಎಂದು ಭೋಧಿಸುವವರು ಹಲವು ಉಲ್ಲಂಘನೆ ಮಾಡಿ ಕೋರ್ಟ ನಲ್ಲಿ ಅಪರಾಧಿ ಸ್ಥಾನದಲ್ಲಿ ನಿಂತವರಿದ್ದಾರೆ.

ಬೇರೆಯವರ ಏಳಿಗೆ ಸಹಿಸದೇ ಅನ್ಯ ಪತ್ರಿಕೆ ವಿರುದ್ಧ ವಾರಗಟ್ಟಲೇ ಕಥೆ ಬರೆದವರಿದ್ದಾರೆ. ಬಡ ಜನರು ಜೀವನಕ್ಕಾಗಿ ಜಾಗ ಒತ್ತುವರಿ ಮಾಡಿಕೊಂಡರೇ ಮುಂದೆ ಎರಗುವ ಕೆಲವು ಪತ್ರಿಕೆ ಮಾಲೀಕರು ತಾವೇ ಜಾಗ ನುಂಗಿದರೇ ಅದನ್ನು ಕೇಳುವ ಹಾಗೇ ಇಲ್ಲ, ತಾವೂ ಕಾನೂನು ಉಲ್ಲಂಘನೆ ಮಾಡಿದರೂ ಕೇಳಬಾರದು ಜನತೆಗೊಂದು ಕಾನೂನು ಪತ್ರಕರ್ತರಿಗೊಂದು ಕಾನೂನು ಎನ್ನುವವರಿದ್ದಾರೆ.

ಜ್ಯಾತ್ಯಾತೀತ ರಾಗಿರುವ ಪತ್ರಕರ್ತರನ್ನ ಜಾತಿ ಆಧಾರದಲ್ಲಿ ವಿಂಘಡಿಸಿ ಬರೆಯುವ ಧೀಮಂತ ಪ್ರಜ್ಞಾವಂತ ಪತ್ರಿಕಾ ಮಾಲೀಕರು ಸಹ ಇದ್ದಾರೆ.
ನಾನು ಹೇಳಿದ್ದೇ ನ್ಯಾಯ ,ನಾನು ಬರೆದಿದ್ದೇ ಕಾನೂನು ಎನ್ನುವ ಮುಟ್ಟಾಳ ಪತ್ರಿಕಾ ಮಾಲೀಕರನ್ನ ಪ್ರಶ್ನೆ ಮಾಡುವುದೇ ತಪ್ಪು. ಶಿವಮೊಗ್ಗದಿಂದ ಬಂದು ಮಾಧ್ಯಮ ಕುಲಗಡೆಸುದರು ಎನ್ನುವವರು ಯಾರನ್ನ ಕುಲಗೆಡಿಸಿದರು ಎಂದು ಹೇಳಲಿ. ಬ್ರಷ್ಟಾಚಾರ ಮಾಡಿದರೇ? ರಾಜಕಾರಣಿ ಬಳಿ ದುಡ್ಡು ಕೇಳಿದರೇ ? ಬೆದರಿಸಿದರೇ ಅಥವಾ ಇವರ ಬೇಳೆ ಬೇಯಿಸಿಕೊಳ್ಳಲು ಅಡ್ಡಿಯಾದರೇ ಎಂದು ಹೇಳಲಿ.

ನನಗೆ ಗೊತ್ತಿರುವಂತೆ ಜಿಲ್ಲೆಯಲ್ಲಿ ಇರುವ ರಾಜ್ಯ ಮಟ್ಟದ ಪತ್ರಿಕೆ ಹಾಗೂ ಟಿವಿ ಮಾಧ್ಯಮದವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಹಣದ ಆಸೆಗೆ ಅವರುಗಳೇನಾದರೂ ಬಿದ್ದಿದ್ದರೇ ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಒಂದೊಂದುಕಡೆ ಒಬ್ಬೊಬ್ಬ ಪತ್ರಕರ್ತ ಜಾಗ ಮಾಡಿಕೊಂಡು ರೆಸಾರ್ಟ್ ಮಾಡಿಕೊಂಡು ಬೇಕಾದ್ದು ಮಾಡುತಿದ್ದರೇನೋ ? ಅಧಿಕಾರಿಗಳ ವರ್ಗಾವಣೆ, ಹಪ್ತ ವಸೂಲಿಗೆ ಇಳಿದು ಜೇಬು ತುಂಬಿಸಿಕೊಂಡು ನಿದ್ದೆ ಮಾಡುತಿದ್ದರೇನೋ? ಆದರೇ ಹಾಗೆ ಯಾರೂ ಮಾಡಿಲ್ಲ. ಇನ್ನೂ ಕೂಡ ಮಾಧ್ಯಮ ತಿಳಿಯಾಗಿದೆ,ಸ್ಪಚ್ಛವಾಗಿದೆ. ಇದು ಜಿಲ್ಲೆಯಲ್ಲಿ ಇರುವ ಮಾಧ್ಯಮ ನಿಕಟ ವರ್ತಿಗಳಿಗೂ ಗೊತ್ತು‌. ಹೀಗಿರುವಾಗ ಶಿವಮೊಗ್ಗ ದಿಂದ ಬಂದ ,ಮಂಗಳೂರಿನಿಂದ ಬಂದ, ಶಿರಸಿಯಿಂದ ಬಂದ ಎನ್ನುವವರಿಗೆ ಗೊತ್ತಿರಲಿ ನಾವು ಭಾರತ ದೇಶದ ಕರ್ನಾಟಕದಲ್ಲಿ ಇದ್ದೇವೆ ,ಬೇರೆ ದೇಶದಿಂದ ಬಂದಿಲ್ಲ ಎಂದು ತಿಳಿದರೇ ಅಷ್ಟೇ ಸಾಕು.
ಹೀಗೆ ಹೇಳುವ ನೀವು ಹಾಕುವ ದುಬಾರಿ ಜಾಕಿ ಅಂಟ್ರವೇರ್ ನಿಂದ ಹಿಡಿದು ಬೆಳಗ್ಗೆ ತಂಪು ಗಾಳಿ ಸೇವಿಸಲು ಹೋಗುವ ಎಡಿಡಸ್ , ನೈಕ್ ಚಡ್ಡಿ ,ಬನಿಯನ್ ಸಹ ಹೊರಗಿನಿಂದ ಬಂದಿದ್ದೇ ಅಲ್ಲವೇ? ನಿವು ಹಾಕುವ ಶೋ ನಿಂದ ಹಿಡಿದು ಐಷರಾಮಿ ಕಾರು ಸಹ ಹೊರಗಿನಿಂದ ಇಲ್ಲಿಗೆ ಬಂದಿದ್ದಲ್ಲವೇ? ಒಂದು ಸ್ಥಳೀಯ ಪತ್ರಿಕೆ ಹಲವು ವರ್ಷದಿಂದ ಇಂದು ಓದುಗರ ಕೃಪೆಯಿಂದ ,ಜಾಹಿರಾತು ಅನ್ನದಾತರಿಂದ ಬೆಳದು ನಾಲ್ಕು ಜನರಿಗೆ ಊಟ ಕೊಡುತ್ತಿದೆ. ಇದಕ್ಕಾಗಿ ನಿಮ್ಮ ಪತ್ರಿಕೆಗೆ ಗೌರವಿಸುತ್ತೇನೆ. ಮನುಷ್ಯನಿಗೆ ವಯಸ್ಸು ಆದಂತೆ ಬುದ್ದಿ ,ಪ್ರಬುದ್ಧತೆ ಬರುತ್ತದೆ. ಆದ್ರೆ ಕೆಲವರಿಗೆ ಸ್ವಾರ್ಥ , ಅಹಂಕಾರ ಬಂದರೇ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ ನೀವಾಗಬೇಡಿ , ಕಿರಿಯ ಪತ್ರಕರ್ತರಿಗೆ ದಾರಿದೀಪವಾಗಿ ,ನಿಮಗೆ ಇರುವ ಪ್ರಭಾವ ಏನು,ಅದನ್ನು ಹೇಗೆ ಬಳಸುತ್ತೀರಾ ಎಂಬುದು ಸಹ ನಮಗೆ ಗೊತ್ತು. ಆದರೇ ಸತ್ಯ ಮಾರ್ಗಕ್ಕೆ ಕೊನೆಗೆ ಜಯ ಸಿಗುತ್ತದೆ ಎಂಬ ಸತ್ಯ ನಾನು ಅರಿತಿದ್ದೇನೆ. ನೀವು ಅರಿಯುತ್ತೀರಾ ಎಂದು ಭಾವಿಸಿದ್ದೇನೆ. ಬೇರೆ ಜನರನ್ನು ಬಿಟ್ಟು ಹೆದರಿಸುವ ಕಾರ್ಯ ,ಪತ್ರ ಕಳಿಸುವ ಕಾರ್ಯ ಮಾಡುವುದರಿಂದ ಧಮನಿಸಲಾಗದು.
ಹರೆಗುತ್ತಿಯವರೇ ಭಯ ಪಟ್ಟು ಪತ್ರಿಕೋಧ್ಯಮಕ್ಕೆ ಬಂದಿಲ್ಲ, ಮಾಧ್ಯಮದಲ್ಲಿ ಹೋರಾಟ ನಿರಂತರ ,ಹೋರಾಟ ನಿರಂತರ ಮಾಡುತ್ತೇವೆ. ಓದುಗರು ನ್ಯಾಯಾಧೀಶರು, ಯಾರು ಏನು ಮಾಡಿದ್ದಾರೆ ,ಮಾಡುತಿದ್ದಾರೆ ಎಂಬ ತೀರ್ಪು ಅವರೇ ನೀಡುತ್ತಾರೆ. ನಿಮ್ಮ “ನನ್ನ ಪಟ” ಹರಿದ ಪಟವಾಗದಿರಲಿ, ಓದುಗರಿಗೆ ದಾರಿದೀಪವಾಗಲಿ ಎಂಬ ಹಾರೈಕೆ ನಮ್ಮದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!