ಕೋಟಿ ಕಂಠ ಗಾಯನ ಕಾರ್ಯಕ್ರಮ:ಜಿಲ್ಲಾಡಳಿತದಿಂದ ಮಕ್ಕಳಿಗೆ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ!

134

ಕಾರವಾರ:- 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಗಡ ದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜನೆ ಮಾಡಿತ್ತು. ಕಾರ್ಯಕ್ರಮ 11 ಘಂಟೆಗೆ ಪ್ರಾರಂಭವಾಗಬೇಕಿದ್ದು , ಒಂದು ಘಂಟೆಗೂ ಮುಂಚೆ ಶಾಲಾ ಮಕ್ಕಳನ್ನು ಕರೆತಂದು ಬಿಸಿಲಿನಲ್ಲಿ ನಿಲ್ಲಿಸಲಾಗಿದೆ.
ಇನ್ನು ಅಧಿಕಾರಿಗಳು ,ಸಚಿವರು,ಶಾಸಕರು ಬಂದು ಕಾರ್ಯಕ್ರಮ ಪ್ರಾರಂಭವಾಗುವ ಹೊತ್ತಿನಲ್ಲೇ ಎರಡು ತಾಸಿಗೂ ಹೆಚ್ಚುಕಾಲ ಮಕ್ಕಳು ಬಿರು ಬಿಸಿಲಿನಲ್ಲಿ ನಿಂತಿದ್ದಾರೆ.

ಇನ್ನು ಗಾಯನ ಪ್ರಾರಂಭವಾಗುತಿದ್ದಂತೆ ಬಿಸಿಲಿನ ಝಳಕ್ಕೆ ವಿದ್ಯಾರ್ಥಿಗಳು ತತ್ತರಿಸಿಹೋಗಿದ್ದು
ಬಿಸಿಲಿನ ತಾಪಕ್ಕೆ ಹಲವು ವಿದ್ಯಾರ್ಥಿಗಳಿಗೆ ತಲೆಸುತ್ತು ಬಂದಿದ್ದು ವಿದ್ಯಾರ್ಥಿಗಳು ನೆರಳಿರುವ ಕಡೆ ಆಶ್ರಯ ಪಡೆದಿದ್ದಾರೆ.ಇದಲ್ಲದೇ ಶಿಕ್ಷಕರು ಸಹ ಬಿಸಿಲಿನ ತಾಪಕ್ಕೆ ಸುಸ್ತಾಗಿ ನೆರಳಿನ ಕಡೆ ಓಡಿದ್ದರು.

ನೂರಾರು ಜನರನ್ನು ,ಶಾಲಾ ಮಕ್ಕಳನ್ನು ಕರೆದು ಕಾರ್ಯಕ್ರಮ ಮಾಡುವ ಜಿಲ್ಲಾಡಳಿತ ವಿದ್ಯಾರ್ಥಿಗಳಿಗೆ ಪೆಂಡಾಲ್ ವ್ಯವಸ್ಥೆ ಮಾಡದೇ ನಿರ್ಲಕ್ಷ ಮಾಡಿದೆ.
ಶಾಲಾ ಮಕ್ಕಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತ ಬಿಸಿಲಿನಲ್ಲಿ ಮಕ್ಕಳಿಗೆ ನಿಲ್ಲುವ ಶಿಕ್ಷೆ ನೋಡಿ ಅಮಾನುಷವಾಗಿ ನಡೆದುಕೊಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!