ಬೆಂಕಿ ನಂದಿಸಿ ಬಂದರಿಗೆ ತಂದ ಬೋಟ್ ಉರಿದು ಬಸ್ಮ!

1074

ಕಾರವಾರ:- ಷಾರ್ಟ ಸರ್ಕೀಟ್‌ನಿಂದ ಅರಬ್ಬಿ ಸಮುದ್ರದಲ್ಲಿ ಬೆಂಕಿ ಕಣಿಸಿಕೊಂಡಿದ್ದ ಬೋಟ್ ನಲ್ಲಿ ಬೆಂಕಿ ನಂದಿಸಿ ಕಾರವಾರದ ಬೈತಕೋಲ್ ಬಂದರಿಗೆ ಬೋಟನ್ನು ಕೋಸ್ಟ್ ಗಾರ್ಡ ಸಿಬ್ಬಂದಿ ತಂದಿಟ್ಟಿದ್ದರು.ಆದರೇ ಸಂಜೆ ವೇಳೆಯಲ್ಲಿ ತಂದಿಟ್ಟಿದ್ದ ಬೋಟ್ ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕರಕಲಾಗಿದೆ.

ಉಡುಪಿ ಜಿಲ್ಲೆಯ ಮಲ್ಪೆಯ ವರದಾ ಎಂಬ ಬೋಟ್ ಇದಾಗಿದ್ದು ಇಂದು ಷಾರ್ಟ ಸರ್ಕಿಟ್ ನಿಂದ ಸುಟ್ಟುಹೋಗಿತ್ತು.ಈ ವೇಳೆ ಏಳು ಜನ ಮೀನುಗಾರರನ್ನು ರಕ್ಷಿಸಲಾಗಿತ್ತ.

ಆದರೇ ಬಂದರಿಗೆ ತಂದಿಟ್ಟ ನಂತರ ದೋಣಿಯಲ್ಲಿ ಇದ್ದ ಡಿಸೇಲ್ ಟ್ಯಾಂಕ್ ಗೆ ಬೆಂಕಿ ಕಿಡಿ ಹೊತ್ತಿ ಸಂಪೂರ್ಣ ಸುಟ್ಟುಹೋಗಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಕೋಸ್ಟ್ ಗಾರ್ಡ ಪೊಲೀಸರು,ಕರಾವಳಿ ಕಾವಲುಪಡೆ ಪೊಲೀಸರು ಹಾಜುರಾಗಿದ್ದು ಪರಿಶೀಲನೆ ನಡೆಸುತಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!