ಗಣಪತಿ ವಿಸರ್ಜನೆ ವೇಳೆ ಗೆಳೆಯನ ಕೋಪ ದೀಪಾಳಿಯಲ್ಲಿ ಸಿಡಿಯಿತು! ಗೆಳೆಯನಿಗೆ ಆಸಿಡ್ ಎರಚಿ ಪರಾರಿಯಾದ ಕುಚುಕು ಗೆಳೆಯ!

1974

ಕಾರವಾರ:- ಕುಚುಕು ಗೆಳೆಯರಿಬ್ಬರಲ್ಲಿ ಗಣಪತಿ ವಿಸರ್ಜನೆ ವೇಳೆ ಉಂಟಾದ ಬಿನ್ನಾಭಿಪ್ರಾಯ ದೀಪಾವಳಿಯಲ್ಲಿ ಸಿಡಿದಿದೆ!. ಹೌದು ಗೆಳೆಯರಿಬ್ಬರ ಹಳೇ ವೈಶಮ್ಯ ಮುಖಕ್ಕೆ ಆಸಿಡ್ ಅಂಶವಿರುವ ಕೆಮಿಕಲ್ ಎರಚುವ ಮಟ್ಟಕ್ಕೆ ತಲುಪಿ ಗಲಾಟೆಯಾಗಿದ್ದು ಇಂದು ರಾತ್ರಿ ಕಾರವಾರದ ಗ್ರೀನ್ ಸ್ಟ್ರೀಟ್ ಬಳಿ ನಡೆದಿದೆ.

ಕಾರವಾರದ ಮಾಜಾಳಿಯ ಹರೀಶ್ ಮತ್ತು ನಿತೇಶ್ ನಾಯ್ಕ ಇಬ್ಬರೂ ಮೊದಲು ಸ್ನೇಹಿತರಾಗಿದ್ದು ಹಳೇ ದ್ವೇಶದ ಹಿನ್ನಲೆಯಲ್ಲಿ ನಿತೇಶ್ ನಾಯ್ಕಗೆ ಹರೀಶ್ ಗ್ರೀನ್ ಸ್ಟ್ರೀಟ್ ಬಳಿ ಆಸಿಡ್ ಅಂಶವಿರುವ ಕೆಮಿಕಲ್ ಅನ್ನು ಎರಚಿ ಪರಾರಿಯಾಗಿದ್ದಾನೆ.ನಿತೇಶ್ ನಾಯ್ಕಗೆ ಆಸಿಡ್ ಅಂಶದ ಕೆಮಿಕಲ್ ನಿಂದ ಅಲ್ಪ ದೇಹಕ್ಕೆ ಹಾನಿಯಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.ಅಲ್ಪ ಗಾಯವಾದ ಈತನನ್ನು ಕಾರವಾರದ ಸರ್ಕರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ,ಜಾಹಿರಾತಿಗಾಗಿ ಸಂಪರ್ಕಿಸಿ:- 9741058799
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!