ಕಾರವಾರದಲ್ಲಿ ಗೂಡಂಗಡಿ ಸರಣಿ ಕಳ್ಳತನ ಮಾಡಿದ ಅಪ್ರಾಪ್ತ ಬಾಲಕರ ಬಂಧನ!

1580

ಕಾರವಾರ :- ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾರವಾರ ನಗರದ ಗ್ರೀನ್ ಸ್ಟ್ರೀಟ್ , ಮೀನುಮಾರುಕಟ್ಟೆ, ಪಿಕಳೆ ರಸ್ತೆ, ಗೀತಾಂಜಲಿ ಟಾಕಿಸ್ ರಸ್ತೆಗಳಲ್ಲಿರುವ ಗೂಡಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿದ್ದ ಇಬ್ಬರು ಬಾಲಕರನ್ನು ಕಾರವಾರ ನಗರ ಠಾಣೆಯ ಸಿ.ಪಿ.ಐ ಸಂತೋಷ್ ಶಟ್ಟಿ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಸಂತೋಷ್ ಎಮ್ .ರವರ ನೇತ್ರತ್ವದ ತಂಡ ಹೆಡೆಮುರಿ ಕಟ್ಟಿದೆ.

ಸರಣಿ ಕಳ್ಳತನ ಮಾಡುವ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಕಂಠಕ ಪ್ರಾಯರಾಗಿದ್ದ ಹಾಗೂ ಪೊಲೀಸರಿಗೆ ತಲೆನೋವಾಗಿದ್ದ ಇವರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು ಬೀದಿ ಬದಿ ವ್ಯಾಪಾರಿಗಳು ನಗರಠಾಣೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕಳ್ಳರು ಯಾರು .? ಮಾಡುತಿದ್ದ ದಂದೆ ಏನು?

ಮೂಲತಹಾ ಓರ್ವ ಹಾವೇರಿ ಜಿಲ್ಲೆಯ ಹಾಗೂ ಹೊನ್ನಾವರ ತಾಲೂಕಿನವರಾಗಿದ್ದರೂ ಕಾರವಾರದಲ್ಲಿ ನೆಲಸಿದ್ದು ,ಕಾರವಾರದ ಚಿತ್ತಾಕುಲದ 16 ವರ್ಷದ ಓರ್ವ ಬಾಲಕ , ಕಾರವಾರ ನಗರದ ಗುನಗಿವಾಡದ 16 ವರ್ಷದ ಅಪ್ರಾಪ್ತ ಬಾಲಕರಾಗಿದ್ದಾರೆ.

ಕದ್ದ ಮಾಲು ಮಾರಾಟ !ಮೋಜು ಮಸ್ತಿ ಮಾಡುತಿದ್ದ ಆರೋಪಿಗಳು.

ಮುಂಜಾನೆವೇಳೆ ಕಳ್ಳತನಕ್ಕೆ ಇಳಿಯುತಿದ್ದ ಇವರು ಈ ಹಿಂದೆ ಕಾರವಾರ ನಗರದ ಮೀನುಮಾರುಕಟ್ಟೆಯಲ್ಲಿ ಸಾವಿರಾರು ರುಪಾಯಿಯ ಮೀನುಗಳನ್ನು ಎಗರಿಸುತಿದ್ದ ಈ ಇಬ್ಬರು ಕಳ್ಳರು ಮನೆ ಮನೆಗೆ ಹೋಗಿ ಮೀನು ಮಾರಾಟ ಮಾಡುತಿದ್ದರು.

ಇದಲ್ಲದೇ ಕದ್ದ ಮೀನನ್ನು ಮೀನಿನ ವ್ಯಾಪಾರಿಗಳಿಗೆ ನೀಡಿ ಹಣ ಗಳಿಸುತಿದ್ದರು. ಇನ್ನು ಗೂಡಂಗಡಿಯಲ್ಲಿ ಕದ್ದ ವಸ್ತುಗಳನ್ನು ಕೂಡ ಮಾರಾಟ ಮಾಡಿ ಬಂದ ಹಣವನ್ನು ಮೋಜು ಮಸ್ತಿ ಮಾಡುತಿದ್ದರು.

ಸರಣಿ ಕಳ್ಳತನ ಮಾಡಿದ್ರು ದಾಖಲಾಗಿದ್ದು ಒಂದು ದೂರು!

ಈ ಬಾಲಕರು ಸರಣಿ ಕಳ್ಳತನ ಮಾಡಿದ್ದಾರೆ. ಆದರೇ ಇವರು ಕಳ್ಳತನ ಮಾಡಿದ ಉದ್ಯೋಗಿಯೊಬ್ಬರ ಸೈಕಲ್ ಕಳ್ಳತನದ ದೂರು ದಾಖಲಾಗಿದ್ದು ಹೊರತುಪಡಿಸಿ ಸರಣಿ ಕಳ್ಳತನವಾದ ಗೂಡಂಗಡಿಯ ವ್ಯಾಪಾರಸ್ತರ್ಯಾರೂ ದೂರು ನೀಡಿಲ್ಲ.

ಸಿಕ್ಕಿದ್ದು ಹೇಗೆ?

ಪೊಲೀಸರು ಕಳೆದ ಮೂರು ದಿನದಿಂದ ಈ ಬಾಲಕರಿಗಾಗಿ ನಿರಂತರ ಶೋಧ ನಡೆಸಿದ್ದಾರೆ. ಇನ್ನು ನಗರದ ಸಿ.ಸಿ ಟಿವಿ ದೃಶ್ಯ ದಲ್ಲಿ ಈ ಇಬ್ಬರು ಕಳ್ಳರು ಸೆರೆಯಾಗಿದ್ದರು. ಇದರ ಆಧಾರದಲ್ಲಿ ಕಾರ್ಯಾಚರಣೆಗಿಳಿದ ನಗರ ಠಾಣೆ ಪಿ.ಎಸ್.ಐ ಸಂತೋಷ್ ರವರು ಸೈಕಲ್ ಏರಿ ಕಳ್ಳತನಕ್ಕೆ ರಾಡು ಹಿಡಿದು ಹೊರಟಿದ್ದ ಇವರನ್ನು ಗುರುತಿಸಿ ಇಂದು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದು ಇಬ್ಬರನ್ನು ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!