BREAKING NEWS
Search

ಕಾರವಾರ ನಗರ ಸಂಪೂರ್ಣ ಬಂದ್ :ರಸ್ತೆಗೆ ಬಿತ್ತು ಬ್ಯಾರಿಕೇಟ್ ಯಾಕೆ ಗೊತ್ತಾ?

1879

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕು ಹೆಚ್ಚಾಗುತಿದ್ದು ಕಾರವಾರ ನಗರವನ್ನು ಕಂಟೈನ್ಮೆಂಟ್ ವಲಯವಾಗಿ ಘೋಷಣೆ ಮಾಡಿ ಕಠಿಣ ಕ್ರಮ ಕೈಗೊಂಡರೂ ಜನರು ರಸ್ತೆಗಳಲ್ಲಿ ಸಂಚಾರ ಮಾಡುವ ಜೊತೆಗೆ ಅನಗತ್ಯ ವಾಹನಗಳು ಸಹ ಸಂಚಾರ ಮಾಡುತ್ತಿವೆ.

ಈ ಹಿನ್ನಲೆಯಲ್ಲಿ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಜನರ ಸಂಚಾರ ಮಾತ್ರ ಒಂದಲ್ಲಾ ಒಂದು ಕಾರಣಕ್ಕೆ ಇರುತ್ತಲಿತ್ತು. ಇನ್ನು ಅಡ್ಡ ರಸ್ತೆಗಳಲ್ಲಿ ವಾಹನ ಸಂಚಾರ ಜೊತೆಗೆ ಬೇಕಾಬಿಟ್ಟಿ ಓಡಾಟ ಮಾಡುತಿದ್ದರು. ಅದಲ್ಲದೇ ಪ್ರತಿ ದಿನ ಕಾರವಾರ ನಗರದಲ್ಲಿಯೇ ನೂರಕ್ಕೂ ಹೆಚ್ಚು ಜನರಿಗೆ ಕರೋನಾ ಪಾಸಿಟಿವ್ ವರದಿಯಾಗುತಿತ್ತು. ಇನ್ನು ಸೋಂಕಿತರು ಹೋಮ್ ಐಸೋಲೇಷನ್ ಇದ್ದರೂ ಮನೆಯಿಂದ ಹೊರಗೆ ಬರುತಿದ್ದರು. ಇದನ್ನು ಗಮನಿಸಿದ ಜಿಲ್ಲಾಡಳಿತ ಇಂದು ಕಠಿಣ ಕ್ರಮಕ್ಕೆ ಮುಂದಾಗಿದ್ದು ಅನಗತ್ಯ ಸರ್ಕಾರಿ ವಾಹನ ಸಹಿತ ಎಲ್ಲಾ ವಾಹನಗಳನ್ನು ನಗರ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದೆ. ನಗರದಲ್ಲಿ ಒಟ್ಟು 13 ಕಡೆ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಇದರ ಜೊತೆಗೆ ನಗರ ಮತ್ತು ಪಂಚಾಯತ್ ವಲಯ ಮಟ್ಟದಲ್ಲಿ ಜನರಿಗೆ ಅಗತ್ಯ ವಸ್ತು ವಿತರಣೆಗೆ ವ್ಯವಸ್ಥೆ ಮಾಡಿದೆ.

ಇನ್ನು ಜಿಲ್ಲೆಯಾಧ್ಯಾಂತ ಪೊಲೀಸರು ಕಾರ್ಯಾಚರಣೆ ನಡೆಸಿ ಅನಗತ್ಯ ಓಡಾಡಿದ 175 ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!