ಕಾರವಾರ :ಮೀಡಿಯಾ ಕಪ್ 2021’ ಲಾಂಛನ ಬಿಡುಗಡೆ

539

ಕಾರವಾರ: ಜಿಲ್ಲೆಯ ಪತ್ರಕರ್ತರಿಗಾಗಿ ಆಯೋಜಿಸಿರುವ ‘ಮೀಡಿಯಾ ಕಪ್ 2021’ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಗುರುವಾರ ಅನಾವರಣಗೊಳಿಸಲಾಯಿತು. ನಗರದಲ್ಲಿ ಏ.10 ಮತ್ತು 11ರಂದು ಪಂದ್ಯಾವಳಿಯು ನಡೆಯಲಿದ್ದು, ಪತ್ರಕರ್ತರ ಎಂಟು ತಂಡಗಳು ಪಾಲ್ಗೊಳ್ಳಲಿವೆ.

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಪಂದ್ಯಾವಳಿಯ ವ್ಯವಸ್ಥಾಪಕರಾದ ನವೀನ್ ಸಾಗರ್, ದೀಪಕ್ ಕುಮಾರ್ ಶೇಣ್ವಿ, ನಾಗರಾಜ ಹರಪನಹಳ್ಳಿ, ಪ್ರಚಾರ ಸಮಿತಿಯ ಸದಾಶಿವ ಎಂ.ಎಸ್., ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ್, ಉಪಾಧ್ಯಕ್ಷ ಗಿರೀಶ್ ನಾಯ್ಕ, ಶೇಷಗಿರಿ ಮುಂಡಳ್ಳಿ ಬಿಡುಗಡೆಗೊಳಿಸಿದರು.

ಪಂದ್ಯಾವಳಿಯು ಮಾಲಾದೇವಿ ಮೈದಾನದಲ್ಲಿ ನಡೆಯಲಿದ್ದು, ‘ಕಾರವಾರ ವಾರಿಯರ್ಸ್’, ‘ಕಾರವಾರ ಫೈಟರ್ಸ್’, ‘ಶಿರಸಿ ಸ್ಟಾರ್ಸ್’, ‘ಕುಮಟಾ ರೈಡರ್ಸ್’, ‘ಹೊನ್ನಾವರ ಹಂಟರ್ಸ್’, ‘ಭಟ್ಕಳ ಮೀಡಿಯಾ ವಾರಿಯರ್ಸ್’, ‘ಅಂಕೋಲಾ ಲಗಾನ್’ ಹಾಗೂ ಜೊಯಿಡಾ ಮತ್ತು ದಾಂಡೇಲಿಯ ‘ಕಾಳಿ 11’ ತಂಡಗಳು ಭಾಗವಹಿಸಲಿದೆ.

ಪಂದ್ಯದ ಚಾಂಪಿಯನ್ ತಂಡಕ್ಕೆ ₹ 25 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ದೊರೆಯಲಿದೆ. ಇದರೊಂದಿಗೆ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೈಯಕ್ತಿಕ ಬಹುಮಾನಗಳೂ ಇವೆ ಎಂದು ತಂಡದ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!