ಕಾರವಾರ:ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಅಶ್ಲಿಲ ವಿಡಿಯೋ ಅಪಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂದೆ ಕಾರವಾರದ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಜೊಯಿಡಾ ಹಾಗೂ ಶಿರಸಿಯ ಇಬ್ಬರು ವ್ಯಕ್ತಿಗಳ ಮೇಲೆ ಪ್ರತ್ಯೇಕ ದೂರು ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಸರಕಾರವು ಕಳೆದ 2018ರಲ್ಲಿ ಮಹಿಳೆಯರ ಮತ್ತು ಮಕ್ಕಳ ವಿರುದ್ಧ ಲೈಂಗಿಕ ಅಪರಾಧ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೋರ್ಟಲ್ ಮೂಲಕ ದೂರು ದಾಖಲಾಗಿದೆ.
ಜೊಯಿಡಾದ ವ್ಯಕ್ತಿ 2020ರ ಮೇ 18ರಂದು ಫೆಸ್ ಬುಕ್ ಮೂಲಕ ಅಪ್ರಾಪ್ತ ಮಕ್ಕಳ ವಿಡಿಯೋ ಅಪಲೋಡ್ ಮಾಡಿದ್ದು ಶಿರಸಿಯ ವ್ಯಕ್ತಿ 2020ರ ಮೇ 19 ರಂದು ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಅಪ್ ಲೋಡ್ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವೆಬ್ ಸೈಟ್ ಹಾಗೂ ಫೇಸ್ ಬುಕ್ ಪೇಜ್ ಗಳ ಮೇಲೆ ನಿಗಾ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ಫೇಸ್ ಬುಕ್ ಪೇಜ್ ಹಾಗೂ ವೆಬ್ ಸೈಟ್ ಗಳಲ್ಲಿ ಸೈಬರ್ ನಿಯಮಗಳಗಳು ಹಾಗೂ ನಿಬಂಧನೆಗಳನ್ನು ಮೀರಿ ಪ್ರಕಟಿಸುವ ಜೊತೆ ಷೇರ್ ಮಾಡಲಾಗುತ್ತಿದೆ. ಇಂತಹ ವ್ಯಕ್ತಿಗಳ ದೂರವಾಣಿ,ಫೇಸ್ ಬುಕ್ ,ವಾಟ್ಸ್ ಅಪ್ ,ವೆಬ್ ಪೇಜ್,ಯೂಟ್ಯೂಬ್ ಗಳ ಮೇಲೆ ಸೈಬರ್ ಪೊಲೀಸರು ನಿಗಾ ಇಟ್ಟಿದ್ದಾರೆ. ಹೀಗಾಗಿ ಯಾರೇ ನಿಯಮ ಮೀರಿ ಪ್ರಕಟಿಸುವ ,ಷೇರ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಇದೀಗ ಸೈಬರ್ ಪೊಲೀಸರು ಮುಂದಾಗಿದ್ದಾರೆ.