ವಿದ್ಯಾಭ್ಯಾಸ ಸಾಲಕ್ಕಾಗಿ ಅರ್ಜಿ ಅಹ್ವಾನ|ವಿವಿಧ ತರಬೇತಿಗೆ ಅರ್ಜಿ ಆಹ್ವಾನ.

116

ಅರಿವು ವಿದ್ಯಾಭ್ಯಾಸ ಸಾಲಕ್ಕಾಗಿ ಅರ್ಜಿ ಅಹ್ವಾನ

ಕಾರವಾರ:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತಿದಿಂದ 2023-24 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ, ಜೈನ, ಸಿಖ್, ಬೌದ್ಧ ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KET) ಸಿಇಟಿ / ನೀಟ್ ನಲ್ಲಿ ಆಯ್ಕೆಯಾಗುವ ಎಂ. ಬಿ. ಬಿ. ಎಸ್, ಬಿ ಡಿ. ಎಸ್, ಬಿ.ಇ/ಬಿ. ಟೆಕ್, ಬ್ಯಾಚುಲರ್ ಆಫ್ ಅರ್ಕಿಟೆಕ್ಟರ್, ಬಿ. ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ ಇಂತಹ ಕೋರ್ಸುಗಳಿಗೆ ಅರಿವು ಸಾಲ ಯೋಜನೆಯಡಿಯಲ್ಲಿ ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಜುಲೈ. 10 ರೊಳಗಾಗಿ ನಿಗಮದ ವೆಬ್ ಸೈಟ್ kmdconline.karnataka.gov.in ನ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ವಾಸೀಂ ಮಂಜಿಲ್, 1 ನೇ ಮಹಡಿ, ಹೈಚರ್ಚ್ ರಸ್ತೆ ಕಾರವಾರ ಅಥವಾ ದೂರವಾಣಿ ಸಂಖ್ಯೆ 08382- 221180 ಗೆ ಸಂಪರ್ಕಿಸಿ ಎಂದು ಜಿಲ್ಲಾ ವ್ಯಾಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KUMTA| ವಿವಿಧ ತರಬೇತಿಗೆ ಅರ್ಜಿ ಆಹ್ವಾನ.

ಕುಮಟಾ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ತರಬೇತಿ ಸಂಸ್ಥೆಯು 10 ದಿನಗಳ ಪಾಸ್ಟ್ ಪುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯಲ್ಲಿ ಪಾನಿಪುರಿ, ಸಮೋಸ್, ಪಪ್ಸ್, ಗೊಬಿಮಂಚೂರಿ, ನೊಡಲ್ಸ್, ಕೆಕ್, ಬಿಜಿ, ಬೊಂಡ, ಹೀಗೆ ಮುಂತಾದ ತಿನಿಸುಗಳನ್ನು ತಯಾರಿಸಲು ಕಲಿಸಿಕೊಡಲಾಗುವುದು.

ಆಸಕ್ತ 18 ರಿಂದ 45 ವರ್ಷದೊಳಗಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಮತ್ತು ಯುವತಿಯರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇತರ ವಿವರಗಳೊಂದಿಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಗೆ ಪೋನ್ ಮೂಲಕ ವಿವರ ನೀಡಿ ತರಬೇತಿಗೆ ನೋಂದಾಯಿಸಿಕೊಳ್ಳಬಹುದು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿರುತ್ತದೆ. ಜೂನ್ 19 ರಿಂದ ತರಬೇತಿ ಪ್ರಾರಂಭವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08386-220530, 9449860007, 9538281989, 9916783825, 8880444612, 9620962004 ಗೆ ಸಂಪರ್ಕಿಸಿ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!