BREAKING NEWS
Search

ಲೇಡಿಸ್ ಬೀಚ್ ನಲ್ಲಿ ಮೂರು ದಿನದಿಂದ ಅನ್ನಾಹಾರ ವಿಲ್ಲದೇ ಸಿಲುಕಿಕೊಂಡಿದ್ದ ಒರಿಸ್ಸಾ ಮೂಲದ ಮೀನುಗಾರನ ರಕ್ಷಣೆ.

603

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೈತಕೋಲ್ ಸಮೀಪದ ಲೇಡಿಸ್ ಬೀಚ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಮರಳಿ ಬರಲಾಗದೇ ಮೂರು ದಿನದಿಂದ ಅನ್ನಹಾರವಿಲ್ಲದೇ ಸಿಲುಕಿದ್ದವನನ್ನು ಕರಾವಳಿ ಕಾವಲುಪಡೆ ರಕ್ಷಣೆ ಮಾಡಿದೆ.

ಒರಿಸ್ಸಾ ಮೂಲದ ನಿರ್ಮಲ್ ಕುಸಮ್ ( 45 ) ಎಂಬ ವ್ಯಕ್ತಿಯೇ ರಕ್ಷಣೆಗೊಳಗಾದ ಮೀನುಗಾರನಾಗಿದ್ದು,ಕಾರವಾರದ ಕರಾವಳಿ ಕಾವಲುಪಡೆಯ ಸಿಪಿಐ ನಿಶ್ಚಲ್ ಕುಮಾರ್ ನೇತ್ರತ್ವದ ತಂಡ ರಕ್ಷಿಸಿ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒರಿಸ್ಸಾ ಮೂಲದ ನಿರ್ಮಲ್ ಕುಸಮ್ ಲೇಡಿಸ್ ಬೀಚ್ ಗೆ ಹೇಗೆ ತೆರಳಿದ್ದಾನೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದ್ದು ,ಮೀನುಗಾರಿಕೆ ಕೆಲಸಕ್ಕಾಗಿ ಒರಿಸ್ಸಾ ದಿಂದ ಕಾರವಾರಕ್ಕೆ ಬಂದಿರುವುದಾಗಿ ಮಾತ್ರ ಮಾಹಿತಿ ನೀಡಿದ್ದು, ಮೂರು ದಿನದ ಹಿಂದೆ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಅಲ್ಲಿಯೇ ಉಳಿದಿರುವ ಸಾಧ್ಯತೆ ಇದ್ದು ಮೂರು ದಿನದಿಂದ ಉಪವಾಸ ದಿಂದ ಈ ಭಾಗದಲ್ಲಿ ದಿನಕಳೆದಿದ್ದಾನೆ. ಇನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಈತ ಚೇತರಿಸಿಕೊಳ್ಳುತಿದ್ದು ಹೆಚ್ಚಿನ ವಿವರ ತಿಳಿದುಬರಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!