ಕಾರವಾರದಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ಕಾಮಗಾರಿ ನೆನೆಗುದಿಗೆಗೆ!

722

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಉತ್ತಮ ಕ್ರೀಡಾಂಗಣದ ಕೊರತೆ ಎಂದಿನಿಂದಲೂ ಕಾಡುತಿತ್ತು. ಇದಕ್ಕೆ ಪೂರಕವಾಗಿ ಹಿಂದಿನ ಶಾಸಕರಾಗಿದ್ದ ಸತೀಷ್ ಸೈಲ್ ಅವಧಿಯಲ್ಲಿ ಜಿಲ್ಲಾ ಕೇಂದ್ರ ಕಾರವಾರದ ಸದಾಶಿವಗಡ ಬಳಿಯ ಕಾಳಿಸಂಗಮದಲ್ಲಿ ಅಂತರಾಷ್ಟ್ರಿಯ ಕ್ರಿಡಾಂಗಣ ನಿರ್ಮಿಸಲು ಕೆ.ಎಸ್.ಸಿ.ಎ ಆಸಕ್ತಿ ತೊರಿತ್ತು.

ಆದರೆ ಭಾರಿ ನಿರೀಕ್ಷೆ ಮೂಡಿಸಿದ್ದ ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆ ಇದೀಗ ನನೆಗುದಿಗೆ ಬಿದ್ದಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಅಭಿವೃದ್ಧಿಗೆ ಸದಾಶಿವಗಡದ ಕಣಸಗಿರಿಯಲ್ಲಿರುವ 14 ಎಕರೆ ಗೋಮಾಳ ಜಾಗದಲ್ಲಿ 12 ಎಕರೆಯನ್ನು ಕ್ರೀಡಾಂಗಣ ನಿರ್ವಣಕ್ಕೆ 30 ವರ್ಷ ಲೀಸ್ ನೀಡಲು ಸರ್ಕಾರ 2018ರಲ್ಲೇ ಒಪ್ಪಿಗೆ ನೀಡಿದೆ.

ಈ ಸಂಬಂಧ ಜಿಲ್ಲಾಡಳಿತ ಹಾಗೂ ಕೆಎಸ್​ಸಿಎ ಒಡಂಬಡಿಕೆ ಮಾಡಿಕೊಳ್ಳುವುದು ಮಾತ್ರ ವರ್ಷದಿಂದ ಬಾಕಿ ಉಳಿದಿತ್ತು. ಕೆಲವು ತಾಂತ್ರಿಕ ಕಾರಣ ಹೊರತುಪಡಿಸಿದರೆ ಬೇರೆ ಸಮಸ್ಯೆಗಳು ಇರಲಿಲ್ಲ.
ಹಾಗೂ ಸದಾಶಿವಗಡದ ಗ್ರಾಮಪಂಚಾಯ್ತಿಯಲ್ಲು ಸಹ ಠರಾವ್ ಮಾಡಿ ಬೆಂಬಲಿಸಿತ್ತು.

ಈ ಮೊದಲು ಶಾಸಕರಾಗಿದ್ದ ಸತೀಶ ಸೈಲ್ ಕ್ರೀಡಾಂಗಣ ನಿರ್ವಣಕ್ಕೆ ಸಾಕಷ್ಟು ಓಡಾಟ ನಡೆಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಹ ಕೆ‌.ಎಸ್​.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ ಅವರ ಜತೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ್ದರು.

ಈ ಹಿಂದೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕಾರವಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ಸಹ ನಡೆಸಿದ್ದರು.

ಹೇಗಿದೆ ಸ್ಥಳ:-

ಕಾಳಿ ನದಿಯ ಪಕ್ಕದಲ್ಲಿರುವ ಗುಡ್ಡ ಇದಾಗಿದ್ದು, ಅದನ್ನು ಸಮತಟ್ಟು ಮಾಡಿ ಕ್ರೀಡಾಂಗಣ ಮಾಡುವ ಯೋಜನೆ ರೂಪಿಸಲಾಗಿದೆ. ಸರ್ಕಾರಕ್ಕೆ ಖರ್ಚಿಲ್ಲದೆ ಕೆಎಸ್​ಸಿಎ ಸ್ವತಃ ಹಣ ಹಾಕಿ ಕ್ರೀಡಾಂಗಣ ಅಭಿವೃದ್ಧಿ ಮಾಡಲಿದೆ.

ನಿರ್ಮಾಣವಾಗಬೇಕಿರುವ ಕ್ರೀಡಾಂಗಣ ಭಾಗದಿಂದ ಕಾಳಿ ನದಿಯ ಸುಂದರ ವಿಹಂಗಮ ನೋಟ ಇಡೀ ವಿಶ್ವದ ಜನರನ್ನು ಸೆಳೆಯುವಂತಿದೆ.

ಆದರೆ, ಗೋಮಾಳ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು. ಸ್ಥಳೀಯ ದೇವಸ್ಥಾನಕ್ಕೆ ಹಾನಿಯಾಗುತ್ತದೆ ಇದರಿಂದ ಅಲ್ಲಿ ಕ್ರೀಡಾಂಗಣ ಮಾಡಬಾರದು ಎಂದು ಸ್ಥಳೀಯರು ಈ ಹಿಂದೆ ಜಿಲ್ಲಾಡಳಿತಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು.

ಇದಕ್ಕೆ ಪೂರಕ ಎನ್ನುವಂತೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಸಹ ದ್ವನಿಗೂಡಿಸಿದ್ದು ,ನೂರಾರು ಜನರಿಗೆ ಉದ್ಯೋಗ ದೊರೆಯಬಹುದಾಗಿದ್ದ ಹಾಗೂ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಕ್ರೀಡಾಂಗಣ ಇಲ್ಲ ಎಂಬ ಕೊರಗು ನೀಗಿಸಬಹುದಾದ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಕ್ಕೆ ಕೊಂಕು ಬಿದ್ದಂತಾಗಿದೆ.

ಮಾಜಿ ಶಾಸಕ ಸತೀಶ್ ಸೈಲ್ ಹೇಳುವುದೇನು?

ಕ್ರಿಕೆಟ್ ಕ್ರೀಡಾಂಗಣ ನಿರ್ವಣದಿಂದ ಯಾವುದೇ ಮನೆಗೆ ಹಾನಿಯಾಗುವುದಿಲ್ಲ. ಸ್ಥಳೀಯರು ಈ ಸಂಬಂಧ ಬೇಕಾದಲ್ಲಿ ಲಿಖಿತ ಪತ್ರ ಪಡೆಯಲಿ. ಕ್ರೀಡಾಂಗಣವಾದರೆ ಸ್ಥಳೀಯರಿಗೆ ಸಾಕಷ್ಟು ಉದ್ಯೋಗ ದೊರಕಲಿದೆ. ಕಾರವಾರದ ಚಿತ್ರಣವೇ ಬದಲಾಗಲಿದೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ಲಾಭದ ಉದ್ದೇಶವಿಲ್ಲ. ಶೀಘ್ರದಲ್ಲಿ ಜಿಲ್ಲಾಡಳಿತ ಕೆ.ಎಸ್​.ಸಿ.ಎ ಜತೆ ಒಡಂಬಡಿಕೆ ಮಾಡಿಕೊಂಡು ಕ್ರೀಡಾಂಗಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮಾಜಿ ಶಾಸಕ ಸತೀಶ ಸೈಲ್ ಹೇಳಿದ್ದಾರೆ.

ಇನ್ನು ಬಹುತೇಕ ಇಲ್ಲಿನ ಸ್ಥಳೀಯ ಜನರ ಬೆಂಬಲ ಸಹ ಕ್ರೀಡಾಂಗಣ ನಿರ್ಮಾಣ ಆಗಬೇಕು ,ನಮ್ಮಲ್ಲಿ ಸುಸಜ್ಜಿತ ಕ್ರೀಡಾಂಗಣವೇ ಇಲ್ಲ . ಇದರಿಂದ ಗೋವಾ ಭಾಗಕ್ಕೆ ಉದ್ಯೋಗ ಅರಸಿ ಹೋಗುವ ನಮ್ಮವರಿಗೆ ಒಂದಿಷ್ಟು ಉದ್ಯೋಗ ಸಿಗಲಿದೆ ಎನ್ನುತ್ತಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!