ಬಿಕ್ಷುಕರಿಗೆ ಕ್ಷೌರ ಭಾಗ್ಯ- ಮನೆ ಬಿಟ್ಟು ಬಂದು ಬಿಕ್ಷೆ ಬೇಡುತಿದ್ದವನಿಗೆ ಕುಟುಂಬದವರೊಂದಿಗೆ ಸೇರಿಸಿದ ಜನಶಕ್ತಿ ವೇದಿಕೆ.

521

ಕಾರವಾರ: ಬಿಕ್ಷಕರು ಎಂದರೇ ಎಲ್ಲರೂ ನಿರ್ಲಕ್ಷ ಮಾಡುತ್ತಾರೆ. ಕೆದರಿದ ಕೂದಲ,ಹರಕು,ಗಬ್ಬೆದ್ದ ಅಂಗಿಯಲ್ಲಿ ಜನ ನಿಬಿಡ ಪ್ರದೇಶಗಳಲ್ಲಿ ದರ್ಶನ ಕೊಡುವ ಅವರಿಗೆ ಜೇಬಿನಲ್ಲಿದ್ದ ಚಿಲ್ಲರೆ ಕೊಟ್ಟು ಮುಂದೆ ಹೋಗಯ್ಯ ಅನ್ನುವವರೇ ಹೆಚ್ಚು.ಅವರಿಗೂ ಒಂದು ಬದುಕಿದೆ ಅವರಿಗೂ ಕಷ್ಟವಿದೆ ಎನ್ನುವ ಮಾನವೀಯತೆ ಇಂದಿನ ದಿನಗಳಲ್ಲಿ ಮಾಯವಾಗಿದೆ. ಆದ್ರೆ ಕಾರವಾರ ನಗರದಲ್ಲಿ ಅವರ ನೆರವಿಗೆ ನಗರದ ವಿವಿಧ ಸಂಘಟನೆಗಳು ಮುಂದೆ ಬರುವ ಜೊತೆಗೆ ಸಂಬಂಧವನ್ನು ಮತ್ತೆ ಬೆಸೆಯುವ ಕಾರ್ಯವನ್ನು ಮಾಡಿತು.
ಅಷ್ಟಕ್ಕೂ ಏನು ಅಂತೀರಾ.ಹಾಗಿದ್ರೆ ಈ ಸುದ್ದಿ ಮಿಸ್ ಮಾಡದೇ ಓದಿ.

ಇಂದು ಕಾರವಾರದಲ್ಲಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ರವರ ನೇತ್ರತ್ವದಲ್ಲಿ ಮದರ್ ಥೆರೆಸಾ ಸಂಘಟನೆ, ರೆಡ್‌ಕ್ರಾಸ್‌ನ ಪ್ರಮುಖರು ನಿರ್ಗತಿಕರಿಗೆ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದರು. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಹಳೆಯ ಮೀನು ಮಾರುಕಟ್ಟೆಯ ಸಮೀಪ ನಾಲ್ವರೂ ನಿರ್ಗತಿಕರನ್ನು ಕರೆ ತಂದು ಅವರಿಗೆ ಕ್ಷೌರ ಮಾಡಿಸಿದರು. ಸಮೀಪದಲ್ಲೇ ಸ್ನಾನ ಮಾಡಿಸಿ, ಹೊಸ ಬಟ್ಟೆ ನೀಡಿ, ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ನಿರಾಶ್ರಿತರಿಗೆ ಹಣ್ಣು, ಉಪಾಹಾರದ ವ್ಯವಸ್ಥೆಯನ್ನೂ ಸಹ ಮಾಡುವ ಮೂಲಕ ಮಾನವೀಯತೆ ಮೆರೆದರು.

ಬಿಕ್ಷುಕನಿಗೆ ಸಿಕ್ಕಿದ ಸಂಬಂಧಿಕರು!

ಮಹಾರಾಷ್ಟ್ರದ ನಾಸಿಕ್‌ನ ಆಶಿಷ್ ಎಂಬುವವರು ಕುಟುಂಬದ ಜೊತೆ ಮನಸ್ತಾಪವಾಗಿ ಲಾರಿ ಹತ್ತಿಕೊಂಡು ಕಾರವಾರಕ್ಕೆ ಬಂದು ನಿರ್ಗತಿಕನಂತೆ ಓಡಾಡುತ್ತಿದ್ದರು. ಅವರಿಗೂ ಕ್ಷೌರ ಮಾಡಿಸಲಾಯಿತು. ಆಗ ತನ್ನ ಬಗ್ಗೆ ಸಂಘಟನೆಗಳ ಮುಖಂಡರ ಜೊತೆ ಹೇಳಿಕೊಂಡರು. ಅವರು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಸಂಬಂಧಿಕರು ಸಿಕ್ಕಿದರು. ಬಳಿಕ ಅವರನ್ನು ಕರೆಯಿಸಿ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.
ಇನ್ನು ಉಳಿದ ಬಿಕ್ಷುಕರನ್ನು ಬೆಳಗಾವಿಯ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು.

ಕಾರವಾರಕ್ಕೆ ಬಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಮನವಿ

ಗಡಿ ಜಿಲ್ಲೆ ಕಾರವಾರದಲ್ಲಿ ಬಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆ ಜನಶಕ್ತಿ ವೇದಿಕೆಯ ಮಾಧವ ನಾಯ್ಕ ರವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜಿಲ್ಲೆಯು ಪ್ರವಾಸಿ ಸ್ಥಳವಾದ್ದರಿಂದ ಬಿಕ್ಷುಕರು ಹೆಚ್ಚು ಇರುತ್ತಾರೆ. ನಮ್ಮ ರಾಜ್ಯದಲ್ಲಿ ಬಿಕ್ಷುಕರ ಪುನರ್ವಸತಿಗಾಗಿ ತೆರಿಗೆ ಸಹ ಸಂಗ್ರಹ ಮಾಡಲಾಗುತ್ತದೆ.ಹೀಗಾಗಿ ಈ ಭಾಗದಲ್ಲಿ ತುಂಬಾ ಅವಷ್ಯವಾಗಿದ್ದು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಇನ್ನು ಈ ಕಾರ್ಯದಲ್ಲಿ ಮಾಧವ ನಾಯ್ಕ, ಅನ್ಮೋಲ್ ರೇವಣಕರ್, ಸ್ಯಾಮ್ಸನ್ ಡಿಸೋಜಾ, ಜಗದೀಶ ಬಿರ್ಕೋಡಿಕರ್, ಬಾಬು ಶೇಖ್, ಎಸ್.ಆರ್.ನಾಯ್ಕ, ಸಂದೀಪ ರೇವಣಕರ್, ಎಲ್.ಕೆ.ನಾಯ್ಕ, ಮೋಹನ ನಾಯ್ಕ, ಎಲ್.ಎಸ್.ಫರ್ನಾಂಡಿಸ್, ಶ್ರೀಪಾದ ನಾಯ್ಕ, ಸೂರಜ್ ಕೂರ್ಮಕರ್, ಫಕೀರಪ್ಪ ಭಂಡಾರಿ, ಜಾನಿ ಡಿಕೋಸ್ಟಾ, ಸಿರಿಲ್ ಗೊನ್ಸಾಲ್ವೀಸ್, ರೋಜರ್ ರೋಡ್ರಿಗಸ್ ಇದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!