ಕಾರವಾರ ನಗರ,ಚಿತ್ತಾಕುಲ,ಮಲ್ಲಾಪುರ ಮೇ.24 ರ ವರೆಗೆ ಸಂಪೂರ್ಣ ಲಾಕ್ ಡೌನ್!

2974

ಕಾರವಾರ :- ಕರೋನಾ ಹೆಚ್ಚಳ ಹಿನ್ನಲೆಯಲ್ಲಿ
ಕಾರವಾರ ನಗರ, ಚಿತ್ತಾಕುಲ ಹಾಗೂ ಮಲ್ಲಾಪುರ ಗ್ರಾಮ ಪಂಚಾಯ್ತಿ ಸಂಪೂರ್ಣ ಲಾಕ್ ಡೌನ್ ಮಾಡಿ ಕಾರವಾರ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಇಂದಿನಿಂದಲೇ ಜಾರಿ ಬರುವಂತೆ ಮೇ. 24 ರ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.

ಕಾರವಾರ ತಾಲೂಕಿನ ಕಾರವಾರ ನಗರ ವ್ಯಾಪ್ತಿ ಚಿತ್ತಾಕುಲ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್ ಪ್ರದೇಶಗಳನ್ನು ವಿಶೇಷ ಕಂಟೇನಮೆಂಟ್ ಜೋನ್ ಎಂದು ಘೋಷಿಸಲ್ಪಟ್ಟಿದ್ದು ಈ ಪ್ರದೇಶದ ಜನರು ಮನೆಯಿಂದ ಹೊರಗಡೆ ತಿರುಗಾಡದಂತೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಈ ಪ್ರದೇಶದಲ್ಲಿನ ಜನರಿಗೆ ಜೀವನಾವಶ್ಯಕ ವಸ್ತುಗಳು , ದಿನಸಿ ಹಾಗೂ ಇತರೆ ಆಹಾರ ಸಾಮಗ್ರಿಗಳನ್ನು ನಗರ ಪ್ರದೇಶದಲ್ಲಿ ನಗರಸಭೆ ಕಾರವಾರದಿಂದ ಹಾಗೂ ಚಿತ್ತಾಕುಲ ಹಾಗೂ ಮಲ್ಲಾಪುರ ಪಂಚಾಯತ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತಿ ವತಿಯಿಂದ ಪೂರೈಕೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ತಿಳಿಸಿದ್ದಾರೆ.

ಇಲ್ಲಿಯ ಸಾರ್ವಜನಿಕರು ಕಂಟೇನಮೆಂಟ್ ಜೋನ್ ವ್ಯಾಪ್ತಿಯಲ್ಲಿ ಮನೆಯಿಂದ ಹೊರಗಡೆ ತಿರುಗಾಡತಕ್ಕದ್ದಲ್ಲ, ಯಾರಾದರು ಹೊರಗಡೆ ತಿರುಗಾಡುತ್ತಿರುವುದು ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ -2005 ರಡಿ ದಂಡ ಹಾಗೂ ಶಿಕ್ಷೆಗೆ ಒಳಪಡಿಸಲಾಗುವುದು. ಈ ಕುರಿತು ಸಾರ್ವಜನಿಕರು ಸಹಕರೀಸಬೇಕು ಕೋವಿಡ್ -19 ಸಂಬಂಧಿಸಿದ ಯಾವುದೇ ಮಾಹಿತಿ ಬೇಕಾದಲ್ಲಿ ಕಾರವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಸ್ಥಾಪಿಸಲ್ಪಟ್ಟ 24*7 ಕೋವಿಡ್ ಕಾಲ್ ಸೆಂಟರ್ ನಂ: 08382-226331 ಅಥವಾ ಮೊಬೈಲ್ ಸಂಖ್ಯೆ: 8147745176ಗೆ ಸಂಪರ್ಕಿಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ಹಿನ್ನೆಲೆ; ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಪ್ರತೀ ಅರ್ಜಿದಾರರಿಗೆ ಉಚಿತವಾಗಿ 10 ಕೆಜಿ ಆಹಾರಧಾನ್ಯ ವಿತರಣೆ.

ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈವರೆಗೂ ಪಡಿತರ ಚೀಟಿ ಪಡೆಯದ ಅರ್ಜಿದಾರರಿಗೆ 2021 ರ ಮೇ ಮತ್ತು ಜೂನ್‌ನ ಮಾಯೆಗೆ ಸಂಬಂದಿಸಿದಂತೆ ಕೋವಿಡ್-19 ಹಿನ್ನಲೆಯಲ್ಲಿ ಪ್ರತಿ ಅರ್ಜಿಗೆ 10 ಕೆಜಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತದೆ ,ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿದಾರರು ತಮ್ಮ ಪಡಿತರ ಚೀಟಿ ಅರ್ಜಿಯ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ನೀಡಿ ಅಕ್ಕಿಯನ್ನು ಪಡದುಕೊಳ್ಳಬಹುದು. ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ಮಾಯೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಹಾಗೂ ಆದ್ಯತೇತರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ, ಒಪ್ಪಿಗೆ ಸೂಚಿಸಿದ ಅರ್ಜಿದಾರರಿಗೆ ಪ್ರತಿ ಕೆಜಿಗೆ 15₹ ದರದಲ್ಲಿ 10 ಕೆಜಿ ಅಕ್ಕಿಯನ್ನು ವಿತರಿಸಲಾಗುವುದು ಅವರು ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!