ಕ್ಷೇತ್ರದ ಜನತೆಗಾಗಿ ಉಚಿತ “ದಿ ಕಾಶ್ಮೀರ್ ಫೈಲ್ಸ್ “ಚಿತ್ರ ಪ್ರದರ್ಶನ ಆಯೋಜಿಸಿದ ಕಾರವಾರದ ಶಾಸಕಿ ರೂಪಾಲಿ ನಾಯ್ಕ

1393

ಕಾರವಾರ :- ಕಾಶ್ಮೀರಿ ಪಂಡಿತರ ಹತ್ಯೆ ಯ ನಿಜ ಜೀವನದ ಆಧಾರಿತ ಕಾಶ್ಮೀರ್ ಫೈಲ್ಸ್ ದೇಶದಲ್ಲೆಡೆ ಸಂಚಲನ ಮೂಡಿಸಿದೆ.ಹಲವು ವಿವಾದಗಳು ಈ ಸಿನಿಮಾಕ್ಕೆ ಅಂಟಿಕೊಂಡಿದ್ದರೂ, ಜನ ಮುಗಿಬಿದ್ದು ಸಿನಿಮಾ ನೋಡುತಿದ್ದಾರೆ‌.
ಮುಖ್ಯಮಂತ್ರಿ ಬೊಮ್ಮಾಯಿ ರವರು ಈ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡಿದ್ದು ಕರ್ನಾಟಕದಲ್ಲೂ ಭರ್ಜರಿ ಪ್ರದರ್ಶನ ಗೊಳ್ಳುತಿದ್ದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲೂ ಸಿನಿಮಾ ಪ್ರದರ್ಶನ ಮಾಡುವಂತೆ ಕಾರವಾರ,ಭಟ್ಕಳ ಭಾಗದಲ್ಲಿ ಜನ ಸಿನಿಮಾ ಟಾಕೀಸ್ ಮುಂದೆ ಪ್ರತಿಭಟನೆ ಸಹ ಮಾಡಿದ್ದರು. ಆದರೇ ಇದೀಗ ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ರವರು ತಮ್ಮ ಸ್ವಂತ ಕರ್ಚಿನಲ್ಲಿ ತಮ್ಮ ಕ್ಷೇತ್ರದ ಜನರಿಗೆ ಉಚಿತ ಸಿನಿಮಾ ನೋಡುವ ವ್ಯವಸ್ಥೆ ಮಾಡಿದ್ದಾರೆ.

ಕಾರವಾರ ನಗರದ ಅರ್ಜುನ ಚಿತ್ರಮಂದಿರದಲ್ಲಿ ಮಾ.20 ರಿಂದ ಮಾ.30 ರ ತನಕ 10 ದಿನಗಳ ಕಾಲ ದಿ ಕಾಶ್ಮೀರ್ ಫೈಲ್ ಚಿತ್ರ ಪ್ರದರ್ಶನ ಕ್ಕೆ ಶಾಸಕಿಯವರು ವ್ಯವಸ್ಥೆ ಮಾಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಶಾಸಕಿ.

ಕಾರವಾರ ನಗರದ ಅರ್ಜುನ್ ಚಿತ್ರಮಂದಿರದಲ್ಲಿ ಶನಿವಾರ ಬೆಳಿಗ್ಗೆ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಶಾಸಕಿ ರೂಪಾಲಿ ನಾಯ್ಕ ರವರು ವೀಕ್ಷಿಸಿದರು.
ನಂತರ ಮಾತನಾಡಿದ ಅವರು ಕಾಶ್ಮೀರ ಪಂಡಿತರ ಮೇಲೆ ನಡೆದ ದೌರ್ಜನ್ಯ, ಕ್ರೌರ್ಯ, ದಬ್ಬಾಳಿಕೆಯನ್ನು ಆಧರಿಸಿ ನಿರ್ಮಿಸಿರುವ ಕಾಶ್ಮೀರ ಫೈಲ್ ಚಲನಚಿತ್ರವನ್ನು ಪ್ರತಿಯೊಬ್ಬರೂ ವೀಕ್ಷಿಸಬೇಕು,
ಕಾಶ್ಮೀರದಲ್ಲಿ ಅಲ್ಲಿನ ಪಂಡಿತರ ಮೇಲೆ ಹಿಂದೆ ನಡೆದಿರುವ ದಬ್ಬಾಳಿಕೆ, ಹಿಂಸೆ ಮತ್ತಿತರ ಘಟನೆಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲಿ ನಡೆಯುತ್ತಿದ್ದ ಘೋರ ಅನಾಹುತ ಏನು ಎನ್ನುವುದರ ಚಿತ್ರಣ ಈ ಚಿತ್ರ ವೀಕ್ಷಣೆಯಿಂದ ನಮಗೆ ತಿಳಿಯುತ್ತದೆ.
ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಸರ್ಕಾರ ಕಾಶ್ಮೀರದಲ್ಲಿ ಆರ್ಟಿಕಲ್ 370ಯನ್ನು ತೆಗೆದುಹಾಕುವ ಐತಿಹಾಸಿಕ ನಿರ್ಧಾರ ಕೈಗೊಂಡಿತು. ಇದರಿಂದ ದೇಶದ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಹೆಚ್ಚುವಂತಾಗಿದೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.
ಸಿನಿಮಾ ವೀಕ್ಷಣೆಗೆ ನಗರಸಭೆ ಉಪಾಧ್ಯಕ್ಷರಾದ ಪಿ.ಪಿ.ನಾಯ್ಕ, ನಗರಸಭೆ ಸದಸ್ಯರು, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ನಯನಾ ನೀಲಾವರ, ಪಕ್ಷದ ಪ್ರಮುಖರು, ಕಾರ್ಯಕರ್ತರು ಚಲನಚಿತ್ರ ವೀಕ್ಷಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!