ಕಾರವಾರ ಜಿಲ್ಲಾಸ್ಪತ್ರೆ ಸರ್ಜನ್ ಶಿವಾನಂದ ಕುಡ್ತಾಲಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ.

241

ಕಾರವಾರ:- ಕಾರವಾರ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಶಿವಾನಂದ ಕುಡ್ತಲ್‌ಕರ್ ವಿರುದ್ಧ ಸೆಕ್ಷನ್ 500 ಐಪಿಸಿಯಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಾರವಾರದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ.

ಬಾಣಂತಿ ಗೀತಾ ಬಾನಾವಳಿಕರ್ ಸಾವು ಪ್ರಕರಣದಲ್ಲಿ ಡಾ.ಕುಡ್ತಳ್‌ಕರ್ ವಿರುದ್ಧ ಹೋರಾಟ ನಡೆಸಿದ್ದ ರಾಘು ನಾಯ್ಕ್ ವಿರುದ್ಧ ಖಾಸಗಿ ಸ್ಥಳೀಯ ಪತ್ರಿಕೆಯಲ್ಲಿ ಮಾನಹಾನಿ ಹೇಳಿಕೆಯನ್ನು ನೀಡಿದ್ದ ಡಾ. ಶಿವಾನಂದ ಕುಡ್ತಲ್‌ಕರ್ ಪತ್ರಿಕೆಯಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಿದ್ದರು.

ಈ ಕುರಿತು ಡಾ. ಶಿವಾನಂದ‌ ಕುಡ್ತಲ್‌ಕರ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಸಾಮಾಜಿಕ ಹೋರಾಟಗಾರ ರಾಘು ನಾಯ್ಕ್ ನೊಂದವರ ಪರವಾಗಿ ಹೋರಾಡಿದ್ದಕ್ಕೆ ಧಮನ ನೀತಿ ಅನುಸರಿಸಿ ತೇಜೋವಧೆ ಮಾಡಿರುವ ಕುರಿತು ನ್ಯಾಯಕೇಳಿದ್ದರು.

ಈ ಕುರಿತು ಕಾರವಾರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ನಡೆದು
ಪ್ರಕರಣ ಸಂಬಂಧಿಸಿ ಡಾ. ಶಿವಾನಂದ ಕುಡ್ತಲ್‌ಕರ್ ತಪ್ಪನ್ನು ಎತ್ತಿಹಿಡಿದ ಜೆಎಂಎಫ್‌ಸಿ ನ್ಯಾಯಾಲಯ
ಸೆಕ್ಷನ್ 500 ಐಪಿಸಿಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಮನ್ಸ್ ಜಾರಿ ಮಾಡಲು ಆದೇಶ ನೀಡಿದೆ.

ನ್ಯಾಯಾಲಯದ ಆದೇಶದ ಬಗ್ಗೆ ನನಗೆ ಮಾಹಿತಿ ಇಲ್ಲ- ಡಾ.ಶಿವಾನಂದಕುಡ್ತಾಲಕರ್.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಾಲಕರ್ ರವರು ನ್ಯಾಯಾಲಯದ ಆದೇಶವಾಗಿದ್ದರೇ ನನಗೆ ನೋಟಿಸ್ ಆದರೂ ಬರಬೇಕು ಯಾವುದೂ ಕೂಡ ಬಂದಿಲ್ಲ, ರಾಘು ನಾಯ್ಕ ವಿರುದ್ಧ ಎರಡು ಮಾನನಷ್ಟ ಮೊಕದ್ದಮೆಯನ್ನು ನಾನು ಹೂಡಿದ್ದೇನೆ. ನನ್ನ ತೇಜೋವಧೆ ಮಾಡುವ ಕೆಲಸ ಮಾಡುತಿದ್ದಾರೆ‌ ಈ ಕುರಿತು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇದನ್ನೂ ಓದಿ :- ಸರ್ಕಾರಿ ಆಸ್ಪತ್ರೆಗೆ ಬರುವ ಜನರು ಡ್ರಾಮ ಮಾಡಿ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ- ನಾಲಿಗೆ ಹರಿಬಿಟ್ಟು ಸ್ಪಷ್ಟಣೆ ನೀಡಿದ ಜಿಲ್ಲಾ ಸರ್ಜನ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!