ಕಾರವಾರ :- ಗೋವಾ ಮೂಲಕ ಅಕ್ರಮವಾಗಿ ಸರಾಯಿ ಸಾಗಿಸುತಿದ್ದ ವಾಹನವನ್ನು ವಶಕ್ಕೆ ಪಡೆದು ವಾಹನದಲ್ಲಿ ಇದ್ದ ಒಟ್ಟು ಅಂದಾಜು ಮೌಲ್ಯ ₹ 76080 ದಾಖಲೆ ರಹಿತ ಗೋವಾ ಮದ್ಯವನ್ನು ಕಾರವಾರ ಶಹರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಟೋದಲ್ಲಿ ತುಂಬಿಕೊಂಡು ಹೋಗುತ್ತಿರುವಾಗ ಕಾರವಾರ ಶಹರ ಠಾಣಾ ವ್ಯಾಪ್ತಿಯ ಚಂದ್ರ ದೇವಿವಾಡ ಹಿರೇಶಿಟ್ಟಾ ಬಾಡದ ಬಳಿ ಖಚಿತ ಮಾಹಿತಿ ಪಡೆದ ಪಿಎಸ್ಐ ಸಂತೋಷ್ ಕುಮಾರ್ ಎಮ್ ರವರು ಡಿ.ವೈಎಸ್.ಪಿ ಅರವಿಂದ್ ಕಲ್ಲಗುಜ್ಜಿ,
ಸಿಪಿಐ ಸಂತೋಷ್ ಶಟ್ಟಿ ರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಆಪಾದಿತನು ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕಾರವಾರದ ಹಿರೇಶಿಟ್ಟಾ ಬಾಡ ದ ನಿವಾಸಿ ಶ್ರೀಪಾದ್ ಎಂಬಾತನೇ ಪರಾರಿಯಾದ ಆರೋಪಿತನಾಗಿದ್ದಾನೆ.
ಘಟನೆ ಸಂಬಂಧ ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.