ಕಾರವಾರ:-ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟಮಾಡಲು ತಂದಿದ್ದ ಗಾಂಜಾ ವನ್ನು ಕಾರವಾರ ಶಹರ ಠಾಣಾ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನು ಕಾರವಾರ ನಗರದ ಕೋಣೆವಾಡದ ಕೆ.ಇ.ಬಿ ರಸ್ತೆಯ ಹಜರತ್ ಅಲಿ ಎಂದು ಗುರುತಿಸಲಾಗಿದ್ದು ,ಈತನಿಂದ 520 ಗ್ರಾಮ್ ತೂಕದ ₹20000 ರೂ ಮೌಲ್ಯದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಈತನು ಗೋವಾ ದಿಂದ ಮಾದಕ ವಸ್ತುಗಳನ್ನು ತಂದು ಕಾರವಾರದಲ್ಲಿ ಸಾರ್ವಜನಿಕರಿಗೆ,ವಿದ್ಯಾರ್ಥಿಗಳಿಗೆ ಮಾರಾಟ ಮಾಡುತಿದ್ದನು.
ಆರೋಪಿಯು ಕಾರವಾರ ನಗರದ ಕೋಡಿಬಾಗ್ ನ ಸಾಗರ ದರ್ಶನ ಹಾಲ್ ಬಳಿ ಇರುವ ಪ್ರದೇಶದಲ್ಲಿ ಮಾರಾಟಕ್ಕೆ ತಂದ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಅರವಿಂದ್ ಕಲಗುಜ್ಜಿ ನೇತ್ರತ್ವದ ಶಹರಾ ಠಾಣೆಯ ಪಿ.ಐ ಸಿದ್ದಪ್ಪ, ಪಿ.ಎಸ್.ಐ ಸಂತೋಷ್ ಕುಮಾರ್ ಎನ್,ಸಿಪಿಸಿ ಸಂತೋಷ್ ನಾಯ್ಕ ಭಾವಿಕೇರಿ,ಜಟ್ಟಿನಾಯ್ಕ,ಸತ್ಯಾನಂದ ನಾಯ್ಕ,ತುಕಾರಾಮ,ರಾಮನಾಯ್ಕ ,ಮಹೇಶ್ ನಾಯ್ಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.