Karwar| ರೈಲಿನಲ್ಲಿ ಸಿಕ್ತು ದಾಖಲೆ ರಹಿತ ₹20,09,720 ಲಕ್ಷ! ಮುಂದಾಗಿದ್ದೇನು?

192

ಕಾರವಾರ:- ರೈಲಿನಲ್ಲಿ ಟಿಕೇಟ್ ಕರೀದಿಸಿದ್ದರೂ, ರೈಲ್ವೆ ಪೊಲೀಸರು ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ನಡೆದುಕೊಂಡು ವ್ಯಕ್ತಿಯನ್ನು ತಪಾಸಣೆ ಮಾಡಿದಾಗ ದಾಖಲೆ ರಹಿತ ಲಕ್ಷಗಟ್ಟಲೇ ಹಣ ದೊರೆತಿದ್ದು ಸೂಕ್ತ ದಾಖಲೆ ನೀಡದಿದ್ದಕ್ಕೆ ರೈಲ್ವೆ ಪೊಲೀಸರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ತಡರಾತ್ರಿ ಕಾರವಾರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮಂಗಳ ಎಕ್ಸ್ ಪ್ರಸ್ ರೈಲಿನಲ್ಲಿ ಮಹಾರಾಷ್ಟ್ರ ದಿಂದ ಕೇರಳಕ್ಕೆ ದಾಖಲೆ ರಹಿತ ಹಣ ಕೊಂಡೊಯ್ಯುತಿದ್ದ
ಮಹಾರಾಷ್ಟ್ರ ಮೂಲದ ವಿಕಾಸ್ ರಮೇಶ್
ದೋಕಲೆ ಬಂಧಿತ ವ್ಯಕ್ತಿಯಾಗಿದ್ದು ಬಂಧಿತನಿಂದ ದಾಖಲೆ ರಹಿತ ₹ 20,09,720 ವಶಕ್ಕೆ ಪಡೆಯಲಾಗಿದೆ.
ರೈಲ್ವೆ ಪೊಲೀಸರಿಂದ ಕಾರವಾರ ನಗರ ಠಾಣೆ ಪೊಲೀಸರಿಗೆ ಪ್ರಕರಣ ಹಸ್ತಾಂತರ ಮಾಡಲಾಗಿದ್ದು ತನಿಖೆ ಪ್ರಗತಿಯಲ್ಲಿದ್ದು ತಮ್ಮ ಸಂಬಂಧಿಯೊಬ್ಬರಿಗೆ ಹಣ ನೀಡಲು ಕೊಂಡೊಯ್ಯುತ್ತಿರುವುದಾಗಿ ಬಂಧಿತ ವ್ಯಕ್ತಿ ಹೇಳಿದ್ದು ದಾಖಲೆ ನೀಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!