BREAKING NEWS
Search

Karwar: ಯುವಕರ ಎರಡು ಗುಂಪಿನ ನಡುವೆ ಗಲಾಟೆ ಇಬ್ಬರಿಗೆ ಚಾಕು ಇರಿತ

170

ಕಾರವಾರ :- ನಡುರಸ್ತೆಯಲ್ಲೆ ಯುವಕನಿಂದ ಇಬ್ಬರಿಗೆ ಚಾಕು ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ (uttrakannada)ಕಾರವಾದ(karwar) ಹೈಚರ್ಚ ರಸ್ತೆಯ ಡಾಲ್ಪಿನ್ ಹೋಟಲ್ ಬಳಿ ಶನಿವಾರ ತಡರಾತ್ರಿ ನಡೆದಿದೆ.ಕಾರವಾರದ ಕಳಸವಾಡ ಹಾಗೂ ಶಿರವಾಡದ ಯುವಕರ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಗಲಾಟೆಯಲ್ಲಿ ಭಾಗಿಯಾಗಿದ್ದ ಯುವಕನೋರ್ವ ಇಬ್ಬರಿಗೆ ಚಾಕು ಇರಿದಿದ್ದು ಪೊಲೀಸರು ಸ್ಥಳಕ್ಕೆ ಬರುವ ವೇಳೆ ಪರಾರಿಯಾಗಿದ್ದಾನೆ.

ಚಾಕು ಇರಿತಕ್ಕೊಳಗಾದ ಇಬ್ಬರು ಯುವಕರನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ದಾಖಲು ಮಾಡಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!