BREAKING NEWS
Search

ಕಾರವಾರದಲ್ಲಿ ಸಿಕ್ತು ಅಪರೂಪದ ಫೈಪ್ ಮೀನು! ವಿಶೇಷ ಏನು ಗೊತ್ತಾ?

1468

ಕಾರವಾರ:- ಪಶ್ಚಿಮ ಕರಾವಳಿಯ ಹವಳದ ದಿಬ್ಬಗಳಲ್ಲಿ ಕಾಣಸಿಗುವ ಅಪರೂಪದ ರೇಸರ್
ಮೀನು ಬೈತಕೋಲ್ ಬಂದರಿನ ಜನಾರ್ಧನ್ ಹರಿಕಾಂತ್ ಎಂಬ ಮೀನುಗಾರನ ಬಲೆಗೆ ಸಿಕ್ಕಿದೆ.

ಇದೇ ಮೊದಲಬಾರಿಗೆ ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿ ಈ ಮೀನು ಪತ್ತೆಯಾಗಿದೆ.

ವಿಶೇಷತೆ ಏನು?

ಈ ಮೀನು ಮೂಲತಹಾ ಸಮುದ್ರ ಕುದುರೆ ಜಾತಿಗೆ ಸೇರಿದ ಮೀನಾಗಿದೆ. ಇದರ ದೇಹ ಬಲು ವಿಶಿಷ್ಟವಾಗಿದ್ದು ಅತೀ ಗಟ್ಟಿಯಾಗಿದೆ. ಮುಖಭಾಗ ಪೈಪಿನಂತೆ ಉದ್ದವಾಗಿದ್ದು, ಇದರ ರೆಕ್ಕೆಗಳು ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ದೇಹದ ಬಣ್ಣ ಬಂಗಾರ ಹಾಗೂ ತಾಂಬ್ರದ ಬಣ್ಣ ಹೊಂದಿರುತ್ತದೆ.

ಇದು ಎಲ್ಲಾ ಮೀನಿನಂತೆ ನೇರವಾಗಿ ಈಜುವುದಿಲ್ಲ.ತಲೆಯನ್ನು ಕೆಳಕ್ಕೆ ಮಾಡಿ ಈಜುವ ಈ ಮೀನು, ತನ್ನ ಉದ್ದವಾದ ಪೈಪ್ ನಂತೆ ಇರುವ ಬಾಯಿಯಿಂದ ನೀರನ್ನು ದೇಹದ ಒಳಕ್ಕೆ ಎಳೆದುಕೊಂಡು ಸಮುದ್ರದಲ್ಲಿನ ಚಿಕ್ಕಪುಟ್ಟ ಮೀನುಗಳನ್ನು ತಿಂದು ಬದುಕುತ್ತವೆ. ಹತ್ತರಿಂದ ಹದಿಮೂರು ಸೆಂಟಿಮೀಟರ್ ಬೆಳೆಯುತ್ತದೆ. ಆಫ್ರಿಕಾ,ಲಕ್ಷಾ ದ್ವೀಪ,ಸಮುದ್ರಕೊಳೆ ಇರುವ ಪ್ರದೇಶದಲ್ಲಿ ಇವು ವಾಸಿಸುತ್ತವೆ.
ಇದನ್ನು ರೇಸರ್ ಮೀನು ,ಪೈಪ್ ಫಿಷ್ ಸೆರಿದಂತೆ ಹಲವು ಹೆಸರುಗಳು ಇದಕ್ಕಿದೆ.

ಇವುಗಳ ಸೌಂದರ್ಯ ಹಾಗು ಸೇಹದ ಆಕೃತಿಯಿಂದಾಗಿ ಅಕ್ವೇರಿಯಂ ಗಳಲ್ಲಿ ಅಲಂಕಾರಿಕ ಫಿಷ್ ಗಳಂತೆ ಇವುಗಳನ್ನು ಸಾಕಲಾಗುತ್ತದೆ‌.

ಕಾರವಾರದ ಕಡಲ ಜೀವಶಾಸ್ತ್ರಜ್ಞ ಶಿವಕುಮಾರ್ ಹರಿಗಿ ಹೇಳುವಂತೆ ಈ ಭಾಗದ ಕರಾವಳಿಯಲ್ಲಿ ಇದೇ ಮೊದಲಬಾರಿಗೆ ಇವು ಕಂಡುಬಂದಿದೆ. ಇವು ಗುಂಪಾಗಿ ವಾಸಮಾಡುತ್ತವೆ. ಇವುಗಳ ಮುಖಭಾಗ ಹಾಗೂ ರೆಕ್ಕೆಗಳು ಉಳಿದ ಮೀನಿಗಿಂತ ಅತೀ ಗಟ್ಟಿಯಾಗಿರುತ್ತವೆ. ಇವುಗಳಲ್ಲಿ ಹಲವು ಪ್ರಭೇದಗಳಿವೆ ಎಂದು ಮಾಹಿತಿ ನೀಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!