BREAKING NEWS
Search

ಕಾರವಾರದ ಕಡಲತೀರದಲ್ಲಿ ಅಪ್ರಾಪ್ತ ಪ್ರೇಮಿಗಳ “ಕಾಮಕೇಳಿ ಆಟ”-ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ

6492

ಕಾರವಾರ:- ಮೈಸೂರು ಅತ್ಯಾಚಾರ ಪ್ರಕರಣ ನಡೆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಪ್ರವಾಸಿಗರು ಹೆಚ್ಚಾಗಿ ಬರುವ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲು ಆದೇಶ ಮಾಡಿದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಆದೇಶಕ್ಕೆ ಕಿಮ್ಮತ್ತಿಲ್ಲದೇ ಪ್ರವಾಸಿ ಸ್ಥಳವೀಗ ಅಪ್ರಾಪ್ತ ಮಕ್ಕಳ ಅಶ್ಲೀಲದಾಟಕ್ಕೆ ತಾಣವಾಗುತ್ತಿದೆ.

ಜಿಲ್ಲೆಯ ಕಾರವಾರದಲ್ಲಿ ಯಾರ ಭಯವೂ ಇಲ್ಲದೇ ನಗರದ ಗಾಂಧಿಪಾರ್ಕ, ಮಕ್ಕಳ ಉದ್ಯಾನವನ, ಕಡಲತೀರ ಭಾಗದ ಪ್ರದೇಶದಲ್ಲಿ ಮಳೆಯ ನಡುವೆಯೂ ಅಪ್ರಾಪ್ತ ಜೋಡಿಗಳು “ಕಾಮಕೇಳಿ ಆಟ”ದಲ್ಲಿ ತೊಡಗುತಿದ್ದಾರೆ. ಬೆಳಗಿನಿಂದ ಸಂಜೆ ವರೆಗೆ ಕಾಲೇಜು,ಶಾಲೆಗೆ ಹೋಗುವ ವಿದ್ಯಾರ್ಥಿಗಳೇ ಅಶ್ಲೀಲವಾಗಿ ನಡೆದುಕೊಳ್ಳುತಿದ್ದು ,ಯಾರ ಭಯವಿಲ್ಲದೇ ತಮ್ಮ ಕೆಟ್ಟ ಚಟುವಟಿಕೆಯನ್ನು ನಿರ್ವಿಘ್ನವಾಗಿ ನಡೆಸುತಿದ್ದಾರೆ. ಇದರಲ್ಲಿ ಬಹುತೇಕರು 18 ವರ್ಷ ಸಹ ಆಗದ ಅಪ್ರಾಪ್ತರೇ ಹೆಚ್ಚಿದ್ದಾರೆ.

ಕಣ್ಣಾಮುಚ್ಚೆ ..ಕಾಡೇ ಗೂಡೆ!

ರವೀಂದ್ರನಾಥ ಕಡಲತೀರ, ಗಾಂಧಿಪಾರ್ಕ ,ಮಕ್ಕಳ ಉದ್ಯಾನವನ,ರಾಕ್ ಗಾರ್ಡನ್ ಹಿಂಭಾಗ ,ದಿವೇಕರ್ ಕಾಲೇಜು ಹಿಂಭಾಗ ಕಾಲೇಜು ವಿದ್ಯಾರ್ಥಿಗಳ “ಕಾಮಕೇಳಿ” ಆಟದ ಹಾಟ್ ಸ್ಫಾಟ್ ಆಗಿಹೋಗಿದೆ.
ಕಾಲೇಜು ಸಮಯದಲ್ಲಿ “ಮಟ್ಟಿ ಸಂದುಗಳು” ಇಲ್ಲಿ ಸದ್ದು ಮಾಡುತ್ತವೆ.

ದೂರದಲ್ಲಿ ಜನ ಬಂದರೆ ಕೆಲವರು ಅಡಗಿ ಕುಳಿತರೆ ಇನ್ನು ಕೆಲವರು ಭಯವಿಲ್ಲದೇ ತಮ್ಮ ಆಟದಲ್ಲಿ ಮಗ್ನರಾಗಿರುತ್ತಾರೆ.

ಇನ್ನು ಜಿಲ್ಲೆಯ ಗೋಕರ್ಣ,ಕುಮಟಾ ,ಹೊನ್ನಾವರ ಕಡಲತೀರದಲ್ಲೂ ಸಹ ಇದೇ ದೃಶ್ಯಗಳು ಕಂಡುಬರುತ್ತದೆ.ಇನ್ನು ಈ ಸ್ಥಳಗಳು ಮದ್ಯಸೇವಿಸುವವರ,ಗಾಂಜಾ ಹೊಡೆಯುವವರ ಅಡ್ಡ ಸಹ ಆಗಿದೆ. ಇನ್ನು ಈ ಭಾಗಗಳಲ್ಲಿ ಸಿಸಿಟಿವಿಯಾಗಲಿ ಪೊಲೀಸರಾಗಲಿ ಇಲ್ಲದಿರುವುದು ಕೆಟ್ಟ ಕೆಲಸ ಮಾಡುವವರಿಗೆ ರತ್ನಗಂಬಳಿ ಹಾಕಿದಂತಾಗಿದೆ.

ಕೈ ಚಲ್ಲುವ ಪೊಲೀಸರು.

ಜಿಲ್ಲಾಡಳಿತದಿಂದ ಕಡಲತೀರದ ಆಯಾಕಟ್ಟು ಪ್ರದೇಶದಲ್ಲಿ ಪ್ರವಾಸಿ ಮಿತ್ರ ಮತ್ತು ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜನೆ ಮಾಡಲಾಗಿದೆ. ಇದು ಸಾಲದು ಎಂಬುವಂತೆ ಶರಾವತಿ ಕಾರ್ಯಪಡೆ ಸಹ ಅಸ್ತಿತ್ವದಲ್ಲಿ ಇದೆ. ಆದರೇ ಇದು ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಜಿಲ್ಲೆಯ ಮುರಡೇಶ್ವರ,ಗೋಕರ್ಣ ಹೊರತುಪಡಿಸಿ ಉಳಿದ ಭಾಗದಲ್ಲಿ ನಿಯೋಜನೆಗೊಂಡ ಸಿಬ್ಬಂದಿ ಕಾರ್ಯ ಶೂನ್ಯವಾಗಿದೆ.
ಕಳೆದ ಕೆಲವು ದಿನದ ಹಿಂದೆ ತೋರಿಕೆಗೆ ಪ್ರವಾಸಿ ಸ್ಥಳಗಳಲ್ಲಿ ಪೊಲೀಸರು ರೌಂಡ್ ಹೊಡೆದಿದ್ದಾರೆ.

ಆದ್ರೆ ಇದೀಗ ಜಿಲ್ಲೆಯ ಹಲವು ಪ್ರವಾಸಿಸ್ಥಳಗಳಲ್ಲಿ ಪ್ರೇಮಿಗಳ ಏಕಾಂತದಾಟ ಮುಂದುವರೆದಿದೆ.
ಇನ್ನು ಅಪ್ರಾಪ್ತರೇ ಹೆಚ್ಚಾಗಿ ಇರುವುದರಿಂದ ಕಾನೂನಿನಲ್ಲಿ ಶಿಕ್ಷಿಸುವ ಅವಕಾಶ ಸಹ ಇದೆ‌. ಅದು ಹೋಗಲಿ ಬುದ್ದಿ ಹೇಳಿ ಕಳುಹಿಸಲು ಸಹ ಅವಕಾಶಗಳಿವೆ.ಆದರೇ ಇದ್ಯಾವುದನ್ನು ಸಹ ನಿಯೋಜಿತ ಸಿಬ್ಬಂದಿಗಳು ಮಾಡುತ್ತಿಲ್ಲ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೇಳುವುದು ಏನು?


ಮೈಸೂರಿನ ಅತ್ಯಾಚಾರ ಪ್ರಕರಣದ ನಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ಇಡಲಾಗಿದೆ. ಪ್ರತಿ ಕಾಲೇಜುಗಳಲ್ಲಿ ಹೆಣ್ಣುಮಕ್ಕಳ ಪೋಷಕರ ಮೊಬೈಲ್ ನಂಬರ್ ಪಡೆಯಲಾಗಿದೆ. ಹೈವೇ ಪೆಟ್ರೋಲಿಂಗ್ ಸಿಬ್ಬಂದಿಸಹ ಅನುಮಾನ ಗೊಂಡವರನ್ನು ತಡೆದು ಪ್ರಶ್ನಿಸುತ್ತಾರೆ. ಶರಾವತಿ ಕಾರ್ಯಪಡೆ ಸಹ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತಿದ್ದು ಜನರು ಹೆಚ್ಚು ತೆರಳದ ಪ್ರವಾಸಿ ಸ್ಥಳದ ಕಡೆ ಪೊಲೀಸರು ಬೀಟ್ ಮಾಡುತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ರವರು ಮಾಹಿತಿ ನೀಡಿದ್ದಾರೆ.

ಇವೆಲ್ಲದರ ನಡುವೆ ಅಪ್ರಾಪ್ತರಾಗಿದ್ದರೂ ಮಕ್ಕಳು ಹೀಗೆ ಬೀಚ್ ಗಳಲ್ಲಿ ರಂಗಿನಾಟದಲ್ಲಿ ತೊಡಗುತಿದ್ದಾರೆ. ಇದನ್ನು ತಡೆಯಲು ಜಿಲ್ಲಾಡಳಿತ ಯಾವುದೇ ಪ್ರಯತ್ನ ಸಹ ಮಾಡುತ್ತಿಲ್ಲ.ರಾಜ್ಯ ,ಹೊರ ರಾಜ್ಯದಿಂದ ಪ್ರವಾಸಿಗರು ಈ ಭಾಗದಲ್ಲಿ ಹೆಚ್ಚು ಬರುವುದರಿಂದ ಅಹಿತಕರ ಘಟನೆ ನಡೆಯುವ ಸಾಧ್ಯತೆ ಹೆಚ್ಚಿದೆ.

ಮೈಸೂರಿನಲ್ಲಿ ಆದ ಘಟನೆ ಕಣ್ಣಮುಂದಿರುವಾಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೇ ಆಲಸ್ಯ ಮಾಡುತ್ತಿರುವುದು ಮಾತ್ರ ದುರಂತವಷ್ಟೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!