ಮೊಗ್ಗಿನ ಮನಸ್ಸಿನ ಕಥೆ ಹೇಳಲು ಸಿದ್ಧವಾಗುತ್ತಿದೆ ಬರ್ಲಿ ಕಿರುಚಿತ್ರ.

1024

ಕಾರವಾರ:ಲಾಕ್ ಡೌನ್ ನಂತರ ಸಿನಿಮಾ ರಂಗ ಕಳೆ ಗುಂದಿದೆ.ಅದ್ರಲ್ಲೂ ಕಿರುಚಿತ್ರ ನಿರ್ಮಿಸುವ ನಿರ್ಮಾಪಕರಿಂದ ಹಿಡಿದು ತಂತ್ರಜ್ಞರ ವರೆಗೆ ಹೊಸ ಕಿರುಚಿತ್ರ ನಿರ್ಮಾಣ ಮಾಡುವ ಕನಸುಗಳು ಸದ್ಯ ಮೊಗ್ಗು ಅರಳದೇ ಬಾಡಿಹೋಗಿದೆ. ಹೀಗಿದ್ದರೂ ಉತ್ತರ ಕನ್ನಡ ಜಿಲ್ಲೆಯ ಯುವ ಉತ್ಸಾಹಿ ತಂಡವೊಂದು ಕಿರುಚಿತ್ರ ನಿರ್ಮಿಸಲು ಪರಿಶ್ರಮದ ಬೆವರು ಹರಿಸಿ ಬರದ ಚಿತ್ರೀಕರಣ ಮಾಡುತಿದ್ದು ತೆರಗೆ “ಬರಲು” ಸಿದ್ದವಾಗುತ್ತಿದೆ‌.

ಹೌದು ಸರ್ಕಾರಿ ಶಾಲೆಯ ಮಹತ್ವ, ಬಾಲ್ಯದ ಸಂತೋಷದಿಂದ ವಂಚಿತರಾಗುವ ಮಕ್ಕಳು, ಇಂದಿನ ಕಾಲದ ಪಾಲಕರ ಮನಸ್ಥಿತಿ ಬಗ್ಗೆ ಕಥಾವಸ್ತುವನ್ನು ಹೊಂದಿರುವ, ಪತ್ರಕರ್ತ ವಿನಾಯಕ ಬ್ರಹ್ಮೂರು ನಿರ್ದೇಶನದ ‘ಬರ್ಲಿ’ ಕಿರುಚಿತ್ರದ ಚಿತ್ರೀಕರಣ ಜಿಲ್ಲೆಯ ತಾಲ್ಲೂಕಿನ ವಿವಿಧ ತಾಣಗಳಲ್ಲಿ ದೃಶ್ಯಗಳು ಸೆರೆಯಾದವು.

ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾ ಕೇಂದ್ರ, ಕುಮಾರ ಕೌರಿ ತೊರ್ಕೆ ಅವರ ನಳಿನಿ ನಿವಾಸ, ಸುಖ ಸಾಗರ ಹೋಟೆಲ್, ಮಾಸ್ತಿಕಟ್ಟೆ ಸರ್ಕಲ್ ಮುಂತಾದ ಭಾಗಗಳಲ್ಲಿ ಇಂದು ಚಿತ್ರೀಕರಣ ಕಂಡಿತು.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಿನಾಯಕ ಬ್ರಹ್ಮೂರು ಅವರದ್ದಾಗಿದ್ದು ಇದು ಅವರ ಏಳನೇ ಚಿತ್ರವಾಗಿದೆ. ಇವುಗಳಲ್ಲಿ ಮೂರು ಸೆಮಿ ಫೀಚರ್ ಸಿನಿಮಾಗಳೂ ಸೇರಿವೆ. ಈ ಚಿತ್ರಕ್ಕೆ ಮೇದಿನಿ ಹೆಗಡೆ ಅವರು ಕೂಡ ಸಂಭಾಷಣೆ, ಚಿತ್ರಕಥೆಯನ್ನು ನಿರ್ವಹಿಸಿದ್ದಾರೆ.

ಕುಮಟಾ ಭಾಷೆಯಲ್ಲೇ ಸಂಭಾಷಣೆ.

ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಕುಮಟಾ ಸ್ಥಳೀಯ ಭಾಷೆಯನ್ನು ಬಳಕೆ ಮಾಡಲಾಗಿದೆ. ಪಟಗಾರನ ಪಾತ್ರದಲ್ಲಿ ಪತ್ರಕರ್ತ ವಸಂತಕುಮಾರ್ ಕತಗಾಲ್ ಅವರು ಗಮನ ಸೆಳೆದಿದ್ದಾರೆ. ಚಿತ್ರದ ಕಥೆಯ ತಿರುವಿಗೆ ಇವರ ಪಾತ್ರದ ಎಂಟ್ರಿ ಪ್ರಾಮುಖ್ಯತೆ ವಹಿಸಲಿದೆ ಎಂದು ನಿರ್ದೇಶಕ ವಿನಾಯಕ ಬ್ರಹ್ಮೂರು ತಿಳಿಸಿದ್ದಾರೆ.

ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಕಾರವಾರದ ಪುಟಾಣಿ ದೀಕ್ಷಾ ರೇವಣಕರ್, ಭಟ್ಕಳದ ಡಾ.ಸವಿತಾ ಭಟ್ಟ, ಹಿರಿಯ ಪತ್ರಕರ್ತರಾದ ವಸಂತಕುಮಾರ್ ಹೆಗಡೆ ಕತಗಾಲ್, ಮಿರ್ಜಾನಿನ ಮಂಜುನಾಥ ಭಟ್ಟ, ಶಿಕ್ಷಕಿಯರಾದ ಹೊನ್ನಾವರದ ಸ್ವಾತಿ ಪಿ. ಶೇಟ್, ಕುಮಟಾ ಕೊಂಕಣದ ಭವಾನಿ ಭಟ್ಟ, ಕುಮಟಾದ ಪತ್ರಕರ್ತ ರಾಘವೇಂದ್ರ ದಿವಾಕರ್, ಕಾರವಾರದ ದರ್ಶನ ರಾಯ್ಕರ್, ನಿತ್ಯಾನಂದ ರಾಯ್ಕರ್ ಮುಂತಾದ ಸ್ಥಳೀಯ ಪ್ರತಿಭೆಗಳು ಚಿತ್ರದಲ್ಲಿ ಮೇಳೈಸಿದ್ದಾರೆ.

ಸ್ಥಳೀಯ ಪ್ರತಿಭೆಗಳಿಗೆ ಈ ಕಿರುಚಿತ್ರ ಅವಕಾಶ ನೀಡಿದ್ದು ಹೊಸ ಪ್ರತಿಭೆಗಳ ಬೆಳಕು ಚಲ್ಲಿದೆ.
ವಿಭಿನ್ನ ಕಥಾವಸ್ತುವಿನೊಂದಿಗೆ ಹಲವಾರು ಕಿರುಚಿತ್ರಗಳನ್ನು ಮಾಡಿ ಉತ್ತರಕನ್ನಡದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬ್ರಹ್ಮೂರ್ ಅವರು ಹೊಸ ಪ್ರಯೋಗಗಳನ್ನು ಮಾಡುತ್ತಾ ಸ್ಥಳೀಯ ಪ್ರತಿಭೆಗಳನ್ನು ಮುಖ್ಯ ಭೂಮಿಕೆಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಚಿತ್ರಕ್ಕೆ ಕಾರವಾರದ ದಿಲೀಪ ರೇವಣಕರ್ ದೃಶ್ಯ ಕಾವ್ಯ ಮೂಡಿಸಿದ್ದು ಸುಂದರ ಚಿತ್ರೀಕರಣ ಮಾಡಿದ್ದಾರೆ.ಅವರಿಗೆ ದರ್ಶನ್ ರಾಯ್ಕರ್ ಸಾಥ್ ನೀಡಿದ್ದಾರೆ. ಗೋಕರ್ಣದ ಗಣೇಶ್ ನಾಯಕ್ ಅವರ ಡ್ರೋನ್ ಕ್ಯಾಮೆರಾವು ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದೆ. ಜಿ.ಪಂ. ಸದಸ್ಯ ಗಜಾನನ ಪೈ, ಉದ್ಯಮಿ ಧೀರು ಶಾನಭಾಗ, ಜಿ.ಪಂ. ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಕಲ್ಪನಾ ಅರುಣ್ ಅವರ ಚಿತ್ರ ನಿರ್ಮಾಣದಲ್ಲಿ ಸಹಕಾರ ನೀಡಿದ್ದು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ಬರದಿಂದ ಸಾಗಿದ್ದು ಶೀಘ್ರದಲ್ಲಿ ಬಿಡುಗಡೆಗೆ ಸಿದ್ದತೆ ನಡೆಸಿದೆ.





ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!