BREAKING NEWS
Search

ಕರೋನಾ ದಿಂದ ಬಂದ್ ಮಾಡಿದ್ದ ಕಾರವಾರ-ಮಡಗಾಂವ್ ರೈಲು ಸಂಚಾರ ಪುನರಾರಂಭ-ಶಾಸಕಿ ರೂಪಾಲಿ ನಾಯ್ಕ

1004

ಕಾರವಾರ: ಕರೋನಾ ಸಂದರ್ಭದಲ್ಲಿ ಪ್ರಯಾಣಿಕರ ಕೊರತೆಯಿಂದ ಬಂದ್ ಆಗಿದ್ದ ಕಾರವಾರ- ಗೋವಾದ ಮಡಗಾಂವ್ ರೈಲುಸಂಚಾರ ಪುನಹಾ ಪ್ರಾರಂಭಕ್ಕೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಮನವಿ ಮೇರೆಗೆ ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.

ಕಾರವಾರದಿಂದ ಗೋವಾಕ್ಕೆ ಪ್ರತಿ ದಿನ ಉದ್ಯೋಗಕ್ಕೆ ತೆರಳುತಿದ್ದ ಜನರಿಗೆ ಪ್ರಯಾಣಿಸಲು ಸಹಕಾರಿ ಆಗುತಿದ್ದ ಕೊಂಕಣ ರೈಲ್ವೆ ಇಲಾಖೆಯ ಲೋಕಲ್ ಟ್ರೈನ್ ಕರೋನಾ ದಿಂದ ಪ್ರಯಾಣಿಕರ ಕೊರತೆ ಎದುರಿಸಿತ್ತು. ಈ ಕಾರಣದಿಂದ ಲೋಕಲ್ ಟ್ರೈನ್ ಅನ್ನು ರೈಲ್ವೆ ಇಲಾಖೆ ಬಂದ್ ಮಾಡಿತ್ತು.
ಇದರಿಂದಾಗಿ ಕಾರವಾರದ ನೂರಾರು ಗೋವಾ ರಾಜ್ಯದಲ್ಲಿ ಉದ್ಯೋಗ ಮಾಡುತಿದ್ದ ಉದ್ಯೋಗಿಗಳಿಗೆ ತೊಂದರೆ ಆಗಿತ್ತು. ಈ ಹಿನ್ನಲೆಯಲ್ಲಿ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಅಮಿತ್ ಶಾ ರವರಿಗೆ ಮನವಿ ಮಾಡಿದ್ದರು.

ಈ ಹಿನ್ನಲೆಯಲ್ಲಿ ಸೋಮವಾರದಿಂದ ಎಂದಿನಂತೆ ಕಾರವಾರ-ಮಡಗಾಂವ್ ಲೋಕಲ್ ಟ್ರೈನ್ ಸಂಚರಿಸಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!