BREAKING NEWS
Search

ಕುಮಟಾ|ಚಿಕ್ಕ ಮಗುವಿನೊಂದಿಗೆ ಸಲಿಂಗ ಕಾಮ-ಆರೋಪಿಗೆ 20 ವರ್ಷ ಜೈಲು!

319

ಕಾರವಾರ:- ಚಿಕ್ಕ ಗಂಡುಮಗುವಿನೊಂದಿಗೆ ರಾಕ್ಷಸತನ ಮೆರೆದು ಸಲಿಂಗ ಕಾಮ ನಡೆಸಿದ ಆರೋಪಿಗೆ ಕಾರವಾರದ ಪೋಕ್ಸೋ ವಿಶೇಷ ನ್ಯಾಯಾಲಯ (ಮಕ್ಕಳ ಜನಸ್ನೇಹಿ ನ್ಯಾಯಾಲಯ) 20 ವರ್ಷ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಘಟನೆ ಏನು?


ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿಣಿ ಗ್ರಾಮದಲ್ಲಿ ಮೀನುಗಾರಿಕೆ ನಡೆಸುತಿದ್ದ ವನ್ನಳ್ಳಿಯ ಆರೋಪಿ ಖಾಸಿಂ (28) ಎಂಬಾತ ತಮ್ಮ ಪರಿಚಿತ ವ್ಯಕ್ತಿಯ ಆರು ವರ್ಷದ ಅಪ್ರಾಪ್ತ ಗಂಡುಮಗುವನ್ನು ಆಟವಾಡುತಿದ್ದ ಸಮಯದಲ್ಲಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಿಸರ್ಗ ನಿಯಮ ವಿರುದ್ಧವಾಗಿ ಚಿಕ್ಕ ಮಗು ಎನ್ನುವುದನ್ನೂ ಮರೆತು ದೈಹಿಕ ಸಂಭೋಗ ನಡೆಸಿ ಸಲಿಂಗಕಾಮದಾಟ ನಡೆಸಿದ್ದ.
ನಂತರ ಮಗುವು ರಕ್ತಸ್ರಾವದಿಂದ ಬಳಲಿದಾಗ ಮಗುವಿನ ಮೇಲೆ ಅನಾಚಾರ ನಡೆದಿರುವುದು ಗಮನಕ್ಕೆ ಬಂದು ಕುಮಟಾ ಠಾಣೆಯಲ್ಲಿ ದಿನಾಂಕ 15-03-2022 ರಂದು ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಸಿ.ಪಿ.ಐ ತಿಮ್ಮಪ್ಪ ಹಾಗೂ PSI ನವೀನ್ ರವರು ಆರೋಪಿಯನ್ನು ಬಂಧಿಸಿ ಸೂಕ್ತ ಸಾಕ್ಷಾಧಾರ ಕಲೆಹಾಕಿ ಬಂಧಿಸಿದ್ದರು.

ಕಾರವಾರದ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಪ್ರಕರಣದ ವಾದ ವಿವಾಧ ಆಲಿಸಿದ ನ್ಯಾಯಾಧೀಶರು ಆರೋಪಿ ಖಾಸಿಂ ಗೆ 20 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!