ಕಾರವಾರ :-ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಲ್ ಕಾಲೇಜು ಹಿಂಬದಿ ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾದ ಬೆನ್ನಲ್ಲೇ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿ ವಸ್ತುವನ್ನು ನಿಷ್ಕ್ರಿಯ ಗೊಳಿಸಿದ್ದಾರೆ.


ಬಾಂಬ್ ಮಾದರಿ ವಸ್ತುವಿನಲ್ಲಿ ಪೈಪ್ ಗಳು ಪೇಪರ್ ತುಂಡುಗಳು ,ವಯರ್ ಗಳನ್ನು ಸುತ್ತಿ ಅದಕ್ಕೆ ಷಲ್ ಗಳನ್ನು ಕನೆಕ್ಟ್ ಮಾಡಲಾಗಿತ್ತು. ಅದರ ಜೊತೆಗೆ ಸರ್ಕಿಟ್ ಬೋರ್ಡ ಅನ್ನು ಹಾಕಿ ಬಾಂಬ್ ಮಾದರಿ ತಯಾರು ಮಾಡಿ ಇಡಲಾಗಿತ್ತು. ಸದ್ಯ ಬಾಂಬ್ ಎಂಬ ಆತಂಕ ದೂರವಾಗಿದೆ.ಕಾಲೇಜು ವಿದ್ಯಾರ್ಥಿಗಳು ಈ ರೀತಿ ಬಾಂಬ್ ತಯಾರಿ ಮಾಡಿ ಇಟ್ಟಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು ತನಿಖೆ ಮುಂದುವರೆದಿದೆ.