BREAKING NEWS
Search

Kumta: ಅಮಾಯಕ ಯುವಕನಿಗೆ ಥಳಿತ: ಗಜು ನಾಯ್ಕಗೆ ಕಾಂಗ್ರೆಸ್ ಪಕ್ಷದಿಂದ ಅಮಾನತು

167

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳ್ವೆಕೋಡಿಯ ಹುಂಡೈ ಶೋರೂಂನಲ್ಲಿ ಅಮಾಯಕ ಯುವಕನಿಗೆ ಕಾಂಗ್ರೆಸ್ ಮುಖಂಡ ಗಜು ನಾಯ್ಕ ಮಹಿಳೆಯೊಂದಿಗೆ ಆಗಮಿಸಿ ಥಳಿಸಿದ ಪ್ರಕರಣ ಕುರಿತು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ರವರು ಗಜು ನಾಯ್ಕರನ್ನು ಪಕ್ಷದಲ್ಲಿ ಹೊಂದಿರುವ ಎಲ್ಲಾ ಹುದ್ದೆಗಳಿಂದ ಮುಂದಿನ ಆದೇಶದವರೆಗೆ ಅಮಾನತ್ತು ಮಾಡಿ ಆದೇಶ ಮಾಡಿದ್ದಾರೆ.

ಕುಮಟಾ ತಾಲೂಕಿನ ಅಳ್ವೆಕೋಡಿಯ ಹುಂಡಾಯ್ ಶೋರೂಮ್ ನಲ್ಲಿ ಕಾಂಗ್ರೆಸ್ ಮುಖಂಡ ಗಜೂ ನಾಯ್ಕ ಹಾಗೂ ಸವಿತಾ ಪಟಗಾರ್ ಎಂಬುವವರು ಅಳ್ವೆಕೋಡಿಯ ಕೃಷ್ಣ ನಾಯ್ಕ ಎಂಬುವವನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿ ವಿಡಿಯೋ ವೈರಲ್ ಮಾಡಿದ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಂಗ್ರೆಸ್ ಮುಖಂಡ ಗಜೂ ನಾಯ್ಕ ಅಳ್ವೆಕೋಡಿಯ ಕೃಷ್ಣನಾಯ್ಕ ಗೆ ತಳಿಸಿದ ಘಟನೆ ಇದೀಗ ರಾಜಕೀಯ ತಿರುವು ಸಹ ಪಡೆದಿದ್ದು ಕಾಂಗ್ರೆಸ್ ಮುಖಂಡ ಗಜೂ ನಾಯ್ಕ ಹಲ್ಲೆಗೊಳಗಾದ ಕೃಷ್ಣ ನಾಯ್ಕನ ಕಾಲಿಗೆ ಬಿದ್ದು ಕ್ಷಮೆ ಕೋರಬೇಕು ಎಂದು ಅಳ್ವೆಕೋಡಿಯ ನಿವಾಸಿಗಳು ಪಟ್ಟು ಹಿಡಿದಿದ್ದು ಕೂಡಲೇ ಆತನನ್ನು ಬಂಧಿಸಬೇಕು, ಪಕ್ಷದ ಪ್ರಮುಖ ಹುದ್ದೆಯಿಂದ ಅಮಾನತು ಮಾಡಬೇಕು ಎಂಬ ಆಗ್ರಹ ವನ್ನು ಸ್ಥಳೀಯ ಜನರು ಮಾಡಿದ್ದರು. ಈ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಈ ಕ್ರಮ ಕೈಗೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!