ಕುಮಟಾದ ದೇವಗಿರಿ ಗ್ರಾಮದಲ್ಲಿ ಮತದಾನ ಗೊಂದಲ-ಅಭ್ಯರ್ಥಿಗೆ ತನ್ನ ಕ್ಷೇತ್ರಕ್ಕೆ ಮತದಾನದ ಹಕ್ಕು ಮಾಯ!

1498

ಕುಮಟಾ:-ಕುಮಟಾ ತಾಲೂಕಿನ ದೇವಗಿರಿ ಗ್ರಾಮಪಂಚಾಯ್ತಿಯಲ್ಲಿ ಚುನಾವಣಾಧಿಕಾರಿಗಳ ಸಮರ್ಪಕ ಮಾಹಿತಿ ಜೊರತೆಯಿಂದ ಗೊಂದಲ ಸೃಷ್ಟಿಯಾಗಿದ್ದು ತನ್ನ ಕ್ಷೇತ್ರಕ್ಕೆ ಅಭ್ಯರ್ಥಿಗಳು ಹಾಗು ಮತದಾರರರು ಮತಹಾಕದಂತಾಗಿದ್ದು ಈಗ ವಿವಾದ ಸೃಷ್ಟಿಯಾಗುವ ಜೊತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಘಟನೆ ಏನು!

ಹಿಂದಿನಿಂದಲೂ ಕುಮಟಾ ತಾಲೂಕಿನ ದೇವಗಿರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ದೇವಗಿರಿ-ಮಠ ಒಂದು ವಾರ್ಡ ಆಗಿದ್ದು ಹಾಗೂ ಕಡೇ ಕೋಡಿ ಹರನೀರ ವಾರ್ಡ ಇನ್ನೊಂದು ವಾರ್ಡ ಆಗಿತ್ತು. ಆದರೇ ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ದೇವಗಿರಿ ಗ್ರಾಮದ ಮತದಾರರನ್ನು ಕಡೇ ಕೋಡಿ ,ಹರನೀರ ಮತದಾರರ ವಾರ್ಡ ಗೆ ಸೇರ್ಪಡಿಸಲಾಗಿತ್ತು.


ಆದರೇ 2015 ರ ಪಂಚಾಯ್ತಿ ಚುನಾವಣೆಯಲ್ಲಿ ದೇವಗಿರಿ,ಮಠದ ವಾರ್ಡ ನಲ್ಲಿ ನಾಲ್ಕು ಜನ ಚುನಾಯಿತರಾಗಿದ್ದರು.ಹಾಗೂ ಕಡೇಕೋಡಿ,ಹರನೀರ ವಾರ್ಡ ನಿಂದ ಇಬ್ಬರು ಚುನಾಯಿತರಾಗಿದ್ದರು.ಇದು ಅಲ್ಲಿನ ಜನಸಂಖ್ಯೆಯ ಆಧಾರದಲ್ಲಿ ನಡೆಯುತಿತ್ತು. ಮತದಾರರ ಪಟ್ಟಿ ಪರಿಷ್ಕರಿಸಿ ಚುನಾವಣೆ ಆಗಬೇಕಿತ್ತು.

ಇನ್ನು ಚುನಾವಣಾಧಿಕಾರಿಗಳು ಹೇಳುವಂತೆ 2020 ರ ಪಂಚಾಯ್ತಿ ಚುನಾವಣೆಯಲ್ಲಿ 2015 ರ ಗ್ರಾಮಪಂಚಾಯ್ತಿ ಚುನಾವಣೆ ಯಲ್ಲಿ ಇರುವಂತೆ ಬೂತ್ ನಲ್ಲಿ ಚುನಾವಣೆ ಇರಲಿದೆ ಎಂದಿದ್ದರು.ಈ ಪ್ರಕಾರವಾಗಿ ಈ ಮೊದಲಿನಂತೆ ದೇವಗಿರಿ,ಮಠದ ವಾರ್ಡ ನಲ್ಲಿ ನಾಲ್ಕು ಜನ ಸ್ಪರ್ದಿಗಳು ಆಯ್ಕೆಗಾಗಿ ಹಾಗೂ ಕಡೇ ಕೋಡಿ,ಹರನೀರ ವಾರ್ಡ ನಲ್ಲಿ ಇಬ್ಬರು ಸ್ಪರ್ದಿಸಲು ಚುನಾವಣೆ ಸಂದರ್ಭದಲ್ಲಿ ಘೋಷಿಸಲಾಗಿತ್ತು.


ಇದರಂತೆ ದೇವಗಿರಿ ಮತದಾರರು ಮಠ ಗ್ರಾಮದ ಜೊತೆ ಸೇರಿ ನಾಲ್ಕು ಸ್ಥಾನಗಳಿಗೆ ಸ್ಪರ್ದೆ ಮಾಡಿದ್ದರು. ಇಂದು ಮತದಾನದ ದಿನ ಮತದಾನಕ್ಕೆ ಬಂದ ದೇವಗಿರಿ ಮತದಾರರ ಹೆಸರುಗಳು ಮಠ ಗ್ರಾಮದ ಹೆಸರಿನಲ್ಲಿ ಇಲ್ಲವಾಗಿದೆ. ಹಾಗೂ ಕಡೇ ಕೋಡಿ,ಹರನೀರ ಗ್ರಾಮದ ಮತದಾರ ಪಟ್ಟಿಯಲ್ಲಿ ಆ ಗ್ರಾಮದ ಮತದಾರರ ಹೆಸರು ಸೇರ್ಪಡೆಯಾಗಿದೆ.

ಇದರಿಂದಾಗಿ ಮಠ ಹಾಗೂ ದೇವಗಿರಿ ವಾರ್ಡನ ಮತದಾರರು ಹಾಗು ಇಲ್ಲಿ ನಿಂತ ಅಭ್ಯರ್ಥಿಗಳಿ ತನ್ನ ಕ್ಷೇತ್ರದಲ್ಲಿ ಮತದಾನ ಮಾಡದಂತಾಗಿದ್ದು ಅಭ್ಯಾರ್ಥಿಗಳಿಗೆ ತೊಂದರೆಯಾಗಿದೆ.ಇನ್ನು ಈ ಕುರಿತು ಚುನಾವಣಾ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಎಲ್ಲಾ ಪ್ರಕ್ರಿಯೆ ಮುಗಿದು ಮತದಾನ ನಡೆದರೂ ಈ ವಿಷಯವನ್ನು ತಿಳಿಸದೇ ಈಗ ಗೊಂದಲ ಸೃಷ್ಠಿಮಾಡಿದ್ದಾರೆ.

ಎಂದು ಮಠ ವಾರ್ಡ ಹಾಗೂ ದೇವಗಿರಿ ವಾರ್ಡ ನ ಅಭ್ಯರ್ಥಿಗಳು ಹಾಗೂ ಮತದಾರರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿಂದೆ ಚುನಾವಣಾಧಿಕಾರಿಗಳು ಮೌಕಿಕವಾಗಿ ಹೇಳಿದಂದೆ ಹಿಂದಿನಂತೆ ಚುನಾವಣೆ ನಡೆಸಬೇಕು ಈಗ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಅನ್ಯಾಯವಾಗಿದ್ದು ಸರಿಪಡಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಮಠ ಹಾಗೂ ದೇವಗಿರಿ ಗ್ರಾಮದ ಜನ ಆಗ್ರಹಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!