ಕಾರವಾರ :- ಬಲು ಅಪರೂಪದ ಇಂಡೂ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೆಬರಹವು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ದಲ್ಲಿ ನ ಕಾಂಚಿಕಾ ಪರಮೇಶ್ವರಿ ದೇವಸ್ಥಾನ ಭಾಗದ ಕಡಲ ತೀರದಲ್ಲಿ ದೊರೆತಿದೆ.
ಈ ಡಾಲ್ಫಿನ್ ಆರು ದಿನದ ಹಿಂದೆ ಸತ್ತಿರುವುದಾಗಿ ಕುಮಟಾ ಅರಣ್ಯ ಇಲಾಖೆಯ ಆರ್.ಎಫ್ .ಓ ಪ್ರವೀಣ್ ರವರು ಮಾಹಿತಿ ನೀಡಿದ್ದಾರೆ.
ಸುಮಾರು 2.25 ಮೀಟರ್ ಉದ್ದದ ಅಂದಾಜು 230 ಕೆ.ಜಿ ತೂಕದ ಇಂಡೂ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರಹ ಇದಾಗಿದ್ದು ಷಾರ್ಕ ಗಳ ದಾಳಿ ಇಂದ ಅಥವಾ ಬೋಟ್ ಹೊಡೆದು ಗಾಯವಾಗಿ ಸತ್ತಿರಬಹುದು ಎಂದು ಅವರು ತಿಳಿಸಿದ್ದಾರೆ.
ಕಳೆದ ಮೂರು ದಿನದ ಹಿಂದೆ ಇದೇ ಭಾಗದಲ್ಲಿ ಡಾಲ್ಪಿನ್ ಕಳೆಬರಹ ದೊರೆತಿದ್ದು ಪುನಹಾ ಈಗ ಮತ್ತೊಂದು ಡಾಲ್ಪಿನ್ ಕಳೆಬರಹ ದೊರೆತಿದೆ.
ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ ಈ ಭಾಗದಲ್ಲಿ ಡಾಲ್ಪಿನ್ ಗಳು ಅತೀ ಹೆಚ್ಚು ಓಡಾಟ ನಡೆಸುತಿದ್ದು ,ಅರಣ್ಯ ಇಲಾಖೆ ಡಾಲ್ಪಿನ್ ಗಳ ಇರುವಿಕೆಯನ್ನು ದಾಖಲಿಸಿದ್ದರು.

20 ರಿಂದ 25 ಮೀಟರ್ ಆಳ ಸಮುದ್ರದಲ್ಲಿ ವಾಸವಿರುವ ಇವು 15 ರಿಂದ 20 ಸೆಕೆಂಡ್ ಸಮುದ್ರದಿಂದ ಮೇಲೆಬಂದು ಬಳಿಕ ನೀರಿನಲ್ಲಿ ಸಾಗಿ ಮೀನುಗಳನ್ನು ಶಿಕಾರಿ ಮಾಡುತ್ತವೆ.
ಈ ಸಸ್ತನಿಯು 10 ರಿಂದ 12 ತಿಂಗಳುಗಳಲ್ಲಿ ಗರ್ಭಧಾರಣೆ ಮಾಡುತ್ತವೆ. ಮರಿಗಳು ಸ್ವಾಮಲಂಬಿಯಾಗಿ ಸಮುದ್ರದಲ್ಲಿ ಬದುಕುವ ವರೆಗೂ ಅವುಗಳ ಪೋಷಣೆ ಮಾಡುವ ಇವು ಬುದ್ಧಿವಂತ ಸಸ್ತನಿಯಾಗಿದೆ.
ಈ ಹಿಂದೆ ಸಮುದ್ರದಲ್ಲಿ ಮಾನವನ ಚಟುವಟಿಕೆ ಹೆಚ್ಚಾದ ಹಿನ್ನಲೆಯಲ್ಲಿ ಇವುಗಳ ಇರುವಿಕೆಯ ಸ್ಥಳಗಳು ಬದಲಾಗಿದ್ದವು, ಆದರೇ ಲಾಕ್ ಡೌನ್ ನಂತರ ಡಾಲ್ಪಿನ್ ಗಳ ದಂಡು ಅರಬ್ಬಿ ಸಮುದ್ರ ತೀರದ ಕುಮಟಾ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ವು ಕಾಣಿಸಿಕೊಳ್ಳುತಿದ್ದವು.
ಆದರೇ ಈಗ ಮೀನುಗಾರಿಕೆ ಸೇರಿದಂತೆ ಸಮುದ್ರ ಚಟುವಟಿಕೆಯಲ್ಲಿ ತೀವ್ರ ಬದಲಾಣೆ ಯಾದ ಕಾರಣ ಇವುಗಳ ಸಂತತಿಯ ಇರುವಿಕೆಗೆ ಹೊಡೆತ ಬಿದ್ದಿದೆ.